amit shah arvind kejriwal meeting

covid 19 : ದೆಹಲಿ ನೆರವಿಗೆ ಬಂದ ಕೇಂದ್ರ…!

covid 19 :  ದೆಹಲಿ ನೆರವಿಗೆ ಬಂದ ಕೇಂದ್ರ : ಕೊರೋನಾ ಸೋಂಕು ಹೆಚ್ಚುತ್ತಿರುವ ದೆಹಲಿಯಲ್ಲಿ  ಕೇಂದ್ರ ಗೃಹ ಸಚಿವ ಅಮಿತ್‌ ಶಾ  ಇಂದು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌, ಲೆಪ್ಟಿನೆಂಟ್‌ ಗೌರ್ನರ್‌ ಅನಿಲ್‌ ಬಿಜಾಲ್.‌ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌  ಸಭೆಯಲ್ಲಿ ಭಾಗವಹಿಸಿ ಸೋಂಕು ತಡೆಯಲು ಕೈಗೊಳ್ಳ ಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದರು. ನವ ದೆಹಲಿ ಜೂನ್‌ 14 :- ರಾಷ್ಟ್ರ ರಾಜಧಾನಿ ದೆಹಲಿ ಅಕ್ಷರ ಸಹ ಕೊರೋನಾ ಸೋಂಕಿ ಗೆ ನಲುಗಿ ಹೋಗಿದೆ, ದೆಹಲಿ […]

Continue Reading
Mumbai Coronavirus PTI

ಕೊರೋನಾ : ದೇಶದ ಆರ್ಥಿಕ ರಾಜಧಾನಿ ಮುಂಬೈಗೆ ಏಕೆ ಈ ಗತಿ…?

ದೇಶದ ವಾಣಿಜ್ಯ ನಗರ ಖ್ಯಾತಿ ಮುಂಬೈ ಅಕ್ಷರ ಸಹಾ ದ್ವಂಸ ಮಾಡಿದೆ ಕೊರೋನಾ ಸೋಂಕು, ಏಕೆ ಈ ಗತಿ ಬಂತು ಎಂಬ ಪ್ರಶ್ನೆ ದೇಶ ದೆಲ್ಲೆಡೆ ಜನರಲ್ಲಿ ಕಾಡುತ್ತಿದೆ. ಬೆಂಗಳೂರು ಮೇ 31 :- ಪ್ರತಿದಿನ ಜನ ಜಂಗುಳಿಯಿಂದ ಗಿಜ-ಗುಡುವ ಮುಂಬೈ ಇಂದು ಕೋವಿಡ್ 19 ಕಾರಣದಿಂದ ಅಕ್ಷರ   ಸಹಾ ನಲುಗಿದೆ.  2008 ರಲ್ಲಿ ಬಾಂಬ್ ದಾಳಿಯಾದ ಸಂದರ್ಭದಲ್ಲೂ ಮುಂಬೈ ಜನ ಜೀವನ ಸಾಮಾನ್ಯವಾಗಿತ್ತು, ರೈಲುಗಳು ಹೊಡಾಡುತ್ತಿದ್ದವು, ಲಕ್ಷಾಂತರ ಜನ ಕೆಲಸಗಳಿಗೆ  ಹೊಗುತ್ತಿದ್ದರು, ರೆಸ್ಟೋರೆಂಟ್ ಆಫಿಸ್ ಗಳು […]

Continue Reading
C202005113496

ದೇಶದ ಜನತೆಗೆ ಪ್ರಧಾನ ಮಂತ್ರಿಯವರ ಪತ್ರ…!

ಭಾರತದ 130 ಕೋಟಿ ಜನರಿಗೆ ಮತ್ತು ಪ್ರಜಾಸತ್ತಾತ್ಮಕ ಹುರುಪಿಗೆ ನಾನು ಮತ್ತೊಮ್ಮೆ ತಲೆಬಾಗಿ ವಂದಿಸುತ್ತೇನೆ.ಸಾಮಾನ್ಯ ದಿನಗಳಲ್ಲಾಗಿದ್ದರೆ, ನಾನು ಇಂದು ನಿಮ್ಮ ಮಧ್ಯೆಯೇ ಇರುತ್ತಿದ್ದೆ. ಆದರೆ ಪ್ರಸ್ತುತ ಸನ್ನಿವೇಶಗಳು ಅದಕ್ಕೆ ಅವಕಾಶ ನೀಡುತ್ತಿಲ್ಲ. ಆದ್ದರಿಂದ ನಾನು ಈ ಪತ್ರದ ಮೂಲಕ ನಿಮ್ಮ ಆಶೀರ್ವಾದವನ್ನು ಬೇಡುತ್ತಿದ್ದೇನೆ   ನನ್ನ ಪ್ರೀತಿಯ ದೇಶ ಬಾಂಧವರೇ, ಕಳೆದ ವರ್ಷದ ಇದೇ ದಿನ ಭಾರತದ ಪ್ರಜಾಸತ್ತೆಯ ಸುವರ್ಣ ಅಧ್ಯಾಯವೊಂದು ಆರಂಭವಾಯಿತು. ಹಲವು ದಶಕಗಳ ನಂತರ ದೇಶದ ಜನತೆ ಸಂಪೂರ್ಣ ಬಹುಮತದಿಂದ ಸರ್ಕಾರವೊಂದನ್ನು ಪುನರಾಯ್ಕೆ ಮಾಡಿದರು. ಭಾರತದ 130 ಕೋಟಿ ಜನರಿಗೆ ಮತ್ತು ಪ್ರಜಾಸತ್ತಾತ್ಮಕ ಹುರುಪಿಗೆ ನಾನು ಮತ್ತೊಮ್ಮೆ ತಲೆಬಾಗಿ ವಂದಿಸುತ್ತೇನೆ. ಸಾಮಾನ್ಯ ದಿನಗಳಲ್ಲಾಗಿದ್ದರೆ, ನಾನು ಇಂದು ನಿಮ್ಮ ಮಧ್ಯೆಯೇ ಇರುತ್ತಿದ್ದೆ. ಆದರೆ ಪ್ರಸ್ತುತ ಸನ್ನಿವೇಶಗಳು ಅದಕ್ಕೆ ಅವಕಾಶ ನೀಡುತ್ತಿಲ್ಲ. ಆದ್ದರಿಂದ ನಾನು ಈ ಪತ್ರದ ಮೂಲಕ ನಿಮ್ಮ ಆಶೀರ್ವಾದವನ್ನು ಬೇಡುತ್ತಿದ್ದೇನೆ. ನಿಮ್ಮ ಪ್ರೀತಿ, ಸದಾಶಯ ಮತ್ತು ಸಕ್ರಿಯ ಸಹಕಾರವು ಹೊಸ ಶಕ್ತಿ ಮತ್ತು ಸ್ಫೂರ್ತಿಯನ್ನು ನೀಡಿದೆ. ಪ್ರಜಾಪ್ರಭುತ್ವದ ಸಾಮೂಹಿಕ ಶಕ್ತಿಯನ್ನು ನೀವು ಪ್ರದರ್ಶಿಸಿದ ರೀತಿ ಇಡೀ ಜಗತ್ತಿಗೆ ದಾರಿದೀಪವಾಗಿದೆ. 2014 ರಲ್ಲಿ, ದೇಶದ ಜನರು ಗಣನೀಯ ಪರಿವರ್ತನೆಗಾಗಿ ಮತ ಚಲಾಯಿಸಿದರು. ಕಳೆದ ಐದು ವರ್ಷಗಳಲ್ಲಿ, ಆಡಳಿತ ಯಂತ್ರವು ಯಥಾಸ್ಥಿತಿ ಹಾಗೂ ಭ್ರಷ್ಟಾಚಾರದ ಕೆಸರು ಮತ್ತು ದುರಾಡಳಿತದಿಂದ ಹೇಗೆ ಮುಕ್ತವಾಯಿತು ಎಂಬುದನ್ನು ಇಡೀ ರಾಷ್ಟ್ರ ನೋಡಿದೆ. ‘ಅಂತ್ಯೋದಯ’ ಹೆಸರಿಗೆ ತಕ್ಕಂತೆ ಲಕ್ಷಾಂತರ ಜನರ ಜೀವನವನ್ನು ಪರಿವರ್ತನೆ ಮಾಡಿದೆ. 2014 ರಿಂದ 2019 ರವರೆಗೆ ಭಾರತದ ಶ್ರೇಷ್ಠತೆ ಗಮನಾರ್ಹವಾಗಿ ಏರಿತು. ಬಡವರ ಘನತೆ ಹೆಚ್ಚಾಗಿದೆ. ರಾಷ್ಟ್ರವು ಆರ್ಥಿಕ ಸೇರ್ಪಡೆ, ಉಚಿತ ಅನಿಲ ಮತ್ತು ವಿದ್ಯುತ್ ಸಂಪರ್ಕ, ಸಮಗ್ರ ನೈರ್ಮಲ್ಯ ವ್ಯಾಪ್ತಿಯನ್ನು ಸಾಧಿಸಿತು ಮತ್ತು ‘ಎಲ್ಲರಿಗೂ ವಸತಿ’ ಖಾತರಿಪಡಿಸುವತ್ತ ಪ್ರಗತಿ ಸಾಧಿಸಿತು. ಸರ್ಜಿಕಲ್ ಸ್ಟ್ರೈಕ್ ಮತ್ತು ವಾಯುದಾಳಿಯ ಮೂಲಕ ಭಾರತವು ತನ್ನ ಸಾಮರ್ಥ್ಯವನ್ನು ತೋರಿಸಿತು. ಅದೇ ಸಮಯದಲ್ಲಿ, ದಶಕಗಳ ಹಳೆಯ ಬೇಡಿಕೆಗಳಾದ ಒ ಆರ್ ಒ ಪಿ, ಒಂದು ದೇಶ ಒಂದು ತೆರಿಗೆ- ಜಿ ಎಸ್ ಟಿ, ರೈತರಿಗೆ ಉತ್ತಮ ಕನಿಷ್ಠ ಬೆಂಬಲ ಬೆಲೆಗಳನ್ನು ಈಡೇರಿಸಲಾಯಿತು. 2019 ರಲ್ಲಿ, ಭಾರತದ ಜನತೆ ಕೇವಲ ನಿರಂತರತೆಗಾಗಿ ಮಾತ್ರವಲ್ಲ, ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಕನಸಿನೊಂದಿಗೆ ಮತ ಚಲಾಯಿಸಿದರು. ಭಾರತವನ್ನು ಜಾಗತಿಕ ನಾಯಕನನ್ನಾಗಿ ಮಾಡುವ ಕನಸು. ಕಳೆದ ಒಂದು ವರ್ಷದಲ್ಲಿ ತೆಗೆದುಕೊಂಡ ನಿರ್ಧಾರಗಳು ಈ ಕನಸನ್ನು ಈಡೇರಿಸುವ ದಿಕ್ಕಿನಲ್ಲಿವೆ. ಇಂದು, 130 ಕೋಟಿ ಜನರಿಗೆ ರಾಷ್ಟ್ರದ ಅಭಿವೃದ್ಧಿ ಪಥದಲ್ಲಿ ಭಾಗಿಯಾಗಿರುವ ಮತ್ತು ಒಂದಾಗಿರುವ ಭಾವನೆ ಇದೆ. ‘ಜನ ಶಕ್ತಿ’ಮತ್ತು ‘ರಾಷ್ಟ್ರಶಕ್ತಿ’ಯ ಬೆಳಕು ಇಡೀ ರಾಷ್ಟ್ರವನ್ನು ಬೆಳಗಿಸಿದೆ. ‘ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್’ಎಂಬ ಮಂತ್ರದಿಂದ ನಡೆಸಲ್ಪಡುವ ಭಾರತವು ಎಲ್ಲಾ ಕ್ಷೇತ್ರಗಳಲ್ಲಿಯೂ ಮುಂದೆ ಸಾಗುತ್ತಿದೆ. ನನ್ನ ದೇಶಬಾಂಧವರೇ, ಕಳೆದ ಒಂದು ವರ್ಷದಲ್ಲಿ, ಕೆಲವು ನಿರ್ಧಾರಗಳ ಬಗ್ಗೆ ವ್ಯಾಪಕವಾಗಿ ಚರ್ಚೆ ನಡೆಯಿತು ಮತ್ತು ಈಗಲೂ ಇವು ಸಾರ್ವಜನಿಕವಾಗಿ ಚರ್ಚಿತವಾಗುತ್ತಿವೆ. 370 ನೇ ವಿಧಿಯು ರಾಷ್ಟ್ರೀಯ ಏಕತೆ ಮತ್ತು ಭಾವೈಕ್ಯತೆಯ ಮನೋಭಾವವನ್ನು ಹೆಚ್ಚಿಸಿತು. ಭಾರತದ ಗೌರವಾನ್ವಿತ ಸುಪ್ರೀಂ ಕೋರ್ಟ್ ಸರ್ವಾನುಮತದಿಂದ ನೀಡಿದ ರಾಮ ಮಂದಿರ ತೀರ್ಪು ಶತಮಾನಗಳಿಂದಲೂ ನಡೆಯುತ್ತಿದ್ದ ಚರ್ಚೆಗೆ ಸೌಹಾರ್ದಯುತವಾದ ಅಂತ್ಯವನ್ನು ಹಾಡಿತು. ಅನಾಗರಿಕ ಅಭ್ಯಾಸವಾದ ತ್ರಿವಳಿ ತಲಾಖ್ ಇತಿಹಾಸದ ಕಸದ ಬುಟ್ಟಿ ಸೇರಿತು. ಪೌರತ್ವ ಕಾಯ್ದೆಯ ತಿದ್ದುಪಡಿಯು ಭಾರತದ ಸಹಾನುಭೂತಿ ಮತ್ತು ಅಂತರ್ಗತ ಮನೋಭಾವದ ಅಭಿವ್ಯಕ್ತಿಯಾಗಿತ್ತು. ರಾಷ್ಟ್ರದ ಅಭಿವೃದ್ಧಿ ಪಥದ ವೇಗವನ್ನು ಹೆಚ್ಚಿಸಿರುವ ಇನ್ನೂ ಅನೇಕ ನಿರ್ಧಾರಗಳಿವೆ. ಸಶಸ್ತ್ರ ಪಡೆಗಳ ನಡುವೆ ಸಮನ್ವಯವನ್ನು ಸುಧಾರಿಸುವ ರಕ್ಷಣಾ ಪಡೆಗಳ ಮುಖ್ಯಸ್ಥರ ಹುದ್ದೆಯ ಸೃಷ್ಟಿಯು ಸುದೀರ್ಘ ಕಾಲದ ಬೇಡಿಕೆಯಾಗಿತ್ತು, ಹಾಗೆಯೇ, ಭಾರತವು ಮಿಷನ್ ಗಗನ್ ಯಾನಕ್ಕೆ ಸಿದ್ಧತೆಗಳನ್ನು ಹೆಚ್ಚಿಸಿದೆ. ಬಡವರು, ರೈತರು, ಮಹಿಳೆಯರು ಮತ್ತು ಯುವಜನರನ್ನು ಸಶಕ್ತರನ್ನಾಗಿಸುವುದು ನಮ್ಮ ಆದ್ಯತೆಯಾಗಿದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಈಗ ಎಲ್ಲ ರೈತರನ್ನು ಒಳಗೊಂಡಿದೆ. ಕೇವಲ ಒಂದು ವರ್ಷದಲ್ಲಿ, 9 ಕೋಟಿ 50 ಲಕ್ಷ ರೈತರ ಖಾತೆಗಳಲ್ಲಿ 72,000 ಕೋಟಿ ರೂ.ಗಳನ್ನು ಜಮಾ ಮಾಡಲಾಗಿದೆ. ಜಲ ಜೀವನ್ ಮಿಷನ್ 15 ಕೋಟಿಗೂ ಹೆಚ್ಚು ಗ್ರಾಮೀಣ ಕುಟುಂಬಗಳಿಗೆ ಕೊಳವೆ ಸಂಪರ್ಕದ ಮೂಲಕ ಕುಡಿಯಲು ಯೋಗ್ಯವಾದ ನೀರು ಪೂರೈಸುವುದನ್ನು ಖಚಿತಪಡಿಸುತ್ತದೆ. ನಮ್ಮ 50 ಕೋಟಿ ಜಾನುವಾರುಗಳ ಉತ್ತಮ ಆರೋಗ್ಯಕ್ಕಾಗಿ ಉಚಿತ ಲಸಿಕೆ ಹಾಕುವ ಬೃಹತ್ ಅಭಿಯಾನವನ್ನು ನಡೆಸಲಾಗುತ್ತಿದೆ. ನಮ್ಮ ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ, ರೈತರು, ಕೃಷಿ ಕಾರ್ಮಿಕರು, ಸಣ್ಣ ವ್ಯಾಪಾರಸ್ಥರು ಮತ್ತು ಅಸಂಘಟಿತ ವಲಯದ ಕಾರ್ಮಿಕರಿಗೆ 60 ವರ್ಷದ ನಂತರ ನಿಯಮಿತವಾಗಿ 3000 ರೂ.ಮಾಸಿಕ ಪಿಂಚಣಿಯ ಭರವಸೆ ನೀಡಲಾಗಿದೆ. ಬ್ಯಾಂಕ್ ಸಾಲಗಳನ್ನು ಪಡೆಯುವ ಸೌಲಭ್ಯದ ಜೊತೆಗೆ, ಮೀನುಗಾರರಿಗಾಗಿ ಪ್ರತ್ಯೇಕ ಇಲಾಖೆಯನ್ನೂ ಸಹ ರಚಿಸಲಾಗಿದೆ. ಮೀನುಗಾರಿಕೆ ಕ್ಷೇತ್ರವನ್ನು ಬಲಪಡಿಸಲು ಇನ್ನೂ ಹಲವಾರು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಇದು ನೀಲಿ ಆರ್ಥಿಕತೆಯನ್ನು ಹೆಚ್ಚಿಸುತ್ತದೆ. ಹಾಗೆಯೇ, ವ್ಯಾಪಾರಿಗಳ ಸಮಸ್ಯೆಗಳನ್ನು ಸಮಯೋಚಿತವಾಗಿ ಪರಿಹರಿಸಲು ವ್ಯಾಪರಿ ಕಲ್ಯಾಣ್ ಮಂಡಳಿಯನ್ನು ರಚಿಸಲು ನಿರ್ಧರಿಸಲಾಗಿದೆ. ಸ್ವಸಹಾಯ ಗುಂಪುಗಳೊಂದಿಗೆ ಇರುವ 7 ಕೋಟಿಗೂ ಹೆಚ್ಚು ಮಹಿಳೆಯರಿಗೆ ಹೆಚ್ಚಿನ ಪ್ರಮಾಣದ ಆರ್ಥಿಕ ನೆರವು ನೀಡಲಾಗುತ್ತಿದೆ. ಇತ್ತೀಚೆಗೆ ಸ್ವ-ಸಹಾಯ ಗುಂಪುಗಳಿಗೆ ಖಾತರಿ ಇಲ್ಲದ ಸಾಲಗಳನ್ನು ಹಿಂದಿನ 10 ಲಕ್ಷದಿಂದ 20 ಲಕ್ಷಕ್ಕೆ ದ್ವಿಗುಣಗೊಳಿಸಲಾಗಿದೆ. ಬುಡಕಟ್ಟು ಮಕ್ಕಳ ಶಿಕ್ಷಣವನ್ನು ಗಮನದಲ್ಲಿಟ್ಟುಕೊಂಡು 400 ಕ್ಕೂ ಹೆಚ್ಚು ಹೊಸ ಏಕಲವ್ಯ ಮಾದರಿ ವಸತಿ ಶಾಲೆಗಳ ನಿರ್ಮಾಣವನ್ನು ಪ್ರಾರಂಭಿಸಿದ್ದೇವೆ. ಕಳೆದ ವರ್ಷ ಹಲವಾರು ಜನಸ್ನೇಹಿ ಕಾನೂನುಗಳನ್ನು ಜಾರಿಗೆ ತರಲಾಗಿದೆ. ನಮ್ಮ ಸಂಸತ್ತು ಉತ್ಪಾದಕತೆಯ ದೃಷ್ಟಿಯಿಂದ ದಶಕಗಳಷ್ಟು ಹಳೆಯದಾದ ದಾಖಲೆಯನ್ನು ಮುರಿದಿದೆ. ಇದರ ಪರಿಣಾಮವಾಗಿ, ಗ್ರಾಹಕ ಸಂರಕ್ಷಣಾ ಕಾಯ್ದೆ, ಚಿಟ್ ಫಂಡ್ ಕಾನೂನಿಗೆ ತಿದ್ದುಪಡಿ, ಮಹಿಳೆಯರು, ಮಕ್ಕಳು ಮತ್ತು ದಿವ್ಯಾಂಗರಿಗೆ ಹೆಚ್ಚಿನ ರಕ್ಷಣೆ ನೀಡುವ ಕಾನೂನುಗಳಿಗೆ ಸಂಸತ್ತಿನಲ್ಲಿ ತ್ವರಿತ ಅಂಗೀಕಾರ ದೊರೆಯಿತು. ಸರ್ಕಾರದ ನೀತಿಗಳು ಮತ್ತು ನಿರ್ಧಾರಗಳ ಪರಿಣಾಮವಾಗಿ ಹಳ್ಳಿ ಮತ್ತು ನಗರಗಳ ನಡುವಿನ ಅಂತರವು ತಗ್ಗುತ್ತಿದೆ. ಮೊದಲ ಬಾರಿಗೆ, ಅಂತರ್ಜಾಲವನ್ನು ಬಳಸುವ ಗ್ರಾಮೀಣ ಭಾರತೀಯರ ಸಂಖ್ಯೆಯು ನಗರ ಭಾರತೀಯರ ಸಂಖ್ಯೆಗಿಂತ ಶೇ.10 ರಷ್ಟು ಹೆಚ್ಚಾಗಿದೆ. ಇಂತಹ ಐತಿಹಾಸಿಕ ಕ್ರಮಗಳು ಮತ್ತು ನಿರ್ಧಾರಗಳ ಪಟ್ಟಿಯನ್ನು ಈ ಪತ್ರದಲ್ಲಿ ವಿವರಿಸಿದರೆ ತುಂಬಾ ಉದ್ದವಾಗುತ್ತದೆ. ಆದರೆ ಈ ವರ್ಷದ ಪ್ರತಿದಿನವೂ, ನನ್ನ ಸರ್ಕಾರವು ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಅನುಷ್ಠಾನಗೊಳಿಸಲು ದಿನದ 24 ಗಂಟೆಯೂ ಸಂಪೂರ್ಣ ಹುರುಪಿನಿಂದ ಕೆಲಸ ಮಾಡಿದೆ ಎಂದು ನಾನು ಹೇಳಲೇಬೇಕು. ನನ್ನ ದೇಶಬಾಂಧವರೇ, ನಮ್ಮ ದೇಶವಾಸಿಗಳ ಭರವಸೆಗಳು ಮತ್ತು ಆಕಾಂಕ್ಷೆಗಳನ್ನು ಈಡೇರಿಸುವಲ್ಲಿ ನಾವು ವೇಗವಾಗಿ ಸಾಗುತ್ತಿರುವಾಗ, ಕೊರೊನಾವೈರಸ್ ಎಂಬ ಜಾಗತಿಕ ಸಾಂಕ್ರಾಮಿಕವು ನಮ್ಮ ದೇಶವನ್ನೂ ಆವರಿಸಿತು. ಉತ್ತಮ ಆರ್ಥಿಕ ಸಂಪನ್ಮೂಲಗಳು ಮತ್ತು ಅತ್ಯಾಧುನಿಕ ಆರೋಗ್ಯ ವ್ಯವಸ್ಥೆಗಳನ್ನು ಹೊಂದಿರುವ ಶಕ್ತಿಶಾಲಿ ರಾಷ್ಟ್ರಗಳು ಒಂದೆಡೆಯಾದರೆ, ಮತ್ತೊಂದೆಡೆ ಅಪಾರ ಜನಸಂಖ್ಯೆ ಮತ್ತು ಸೀಮಿತ ಸಂಪನ್ಮೂಲಗಳಿರುವ ನಮ್ಮ ದೇಶವು ಸಮಸ್ಯೆಗಳಿಗೆ ಸಿಲುಕಿತು. ಕೊರೊನಾ ಭಾರತಕ್ಕೆ ಅಪ್ಪಳಿಸಿದಾಗ ಭಾರತವು ಜಗತ್ತಿಗೆ ಸಮಸ್ಯೆಯಾಗಲಿದೆ ಎಂದು ಹಲವರು ಭಯಪಟ್ಟರು. ಆದರೆ ಇಂದು, ಸಂಪೂರ್ಣ ವಿಶ್ವಾಸ ಮತ್ತು ಚೇತರಿಕೆಯ ಮೂಲಕ ಜಗತ್ತು ನಮ್ಮನ್ನು ನೋಡುವ ವಿಧಾನವನ್ನೇ ನೀವು ಬದಲಾಯಿಸಿದ್ದೀರಿ. ಭಾರತೀಯರ ಸಾಮೂಹಿಕ ಶಕ್ತಿ ಮತ್ತು ಸಾಮರ್ಥ್ಯವು ವಿಶ್ವದ ಪ್ರಬಲ ಮತ್ತು ಸಮೃದ್ಧ ದೇಶಗಳಿಗೂ ಸಾಟಿಯಿಲ್ಲದ್ದು ಎಂದು ನೀವು ಸಾಬೀತುಪಡಿಸಿದ್ದೀರಿ. ಕೊರೊನಾ ಯೋಧರನ್ನು ಗೌರವಿಸುವುದಕ್ಕಾಗಿ ಚಪ್ಪಾಳೆ ತಟ್ಟಿ, ದೀಪವನ್ನು ಬೆಳಗಿಸಿದ್ದಿರಬಹುದು, ಜನತಾ ಕರ್ಫ್ಯೂ ಅಥವಾ ರಾಷ್ಟ್ರವ್ಯಾಪಿ ಲಾಕ್‌ಡೌನ್ ಸಮಯದಲ್ಲಿ ನಿಯಮಗಳನ್ನು ನಿಷ್ಠೆಯಿಂದ ಪಾಲಿಸಿದ್ದಿರಬಹುದು, ಪ್ರತಿ ಸಂದರ್ಭದಲ್ಲೂ ಏಕ ಭಾರತದಿಂದಲೇ ಶ್ರೇಷ್ಠಭಾರತ ಎಂದು ನಿರೂಪಿಸಿದ್ದೀರಿ. ಇಂತಹದೊಂದು ದೊಡ್ಡ ಬಿಕ್ಕಟ್ಟಿನಲ್ಲಿ, ಯಾರೂ ಯಾವುದೇ ಅನಾನುಕೂಲತೆ ಅಥವಾ ಸಂಕಷ್ಟವನ್ನು ಅನುಭವಿಸಲಿಲ್ಲ ಎಂದು ಖಂಡಿತವಾಗಿಯೂ ಹೇಳಲಾಗುವುದಿಲ್ಲ. ನಮ್ಮ ಕಾರ್ಮಿಕರು, ವಲಸೆ ಕಾರ್ಮಿಕರು, ಸಣ್ಣ ಕೈಗಾರಿಕೆಗಳ ಕುಶಲಕರ್ಮಿಗಳು, ಬೀದಿ ಬದಿ ವ್ಯಾಪಾರಿಗಳು ಮತ್ತು ಇಂತಹ ಅನೇಕ ದೇಶಬಾಂಧವರು ಭಾರೀ ನೋವುಂಡಿದ್ದಾರೆ. ಅವರ ತೊಂದರೆಗಳನ್ನು ನಿವಾರಿಸಲು ನಾವು ಒಗ್ಗಟ್ಟಿನಿಂದ ಮತ್ತು ದೃಢ ನಿಶ್ಚಯದಿಂದ ಕೆಲಸ ಮಾಡುತ್ತಿದ್ದೇವೆ. ಆದರೂ, ನಾವು ಎದುರಿಸುತ್ತಿರುವ ಅನಾನುಕೂಲತೆಗಳು ವಿಪತ್ತುಗಳಾಗಿ ಬದಲಾಗದಂತೆ ಕಾಳಜಿ ವಹಿಸಬೇಕು. ಆದ್ದರಿಂದ, ಪ್ರತಿಯೊಬ್ಬ ಭಾರತೀಯನೂ ಎಲ್ಲಾ ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ಅನುಸರಿಸುವುದು ಬಹಳ ಮುಖ್ಯ. ನಾವು ಇಲ್ಲಿಯವರೆಗೆ ತಾಳ್ಮೆಯನ್ನು ಪ್ರದರ್ಶಿಸಿದ್ದೇವೆ ಮತ್ತು ನಾವು ಅದನ್ನು ಮುಂದುವರಿಸಬೇಕು. ಭಾರತವು ಸುರಕ್ಷಿತವಾಗಿರಲು ಮತ್ತು ಇತರ ಹಲವು ದೇಶಗಳಿಗಿಂತ ಉತ್ತಮ ಸ್ಥಿತಿಯಲ್ಲಿರಲು ಇದು ಪ್ರಮುಖವಾಗಿದೆ. ಇದೊಂದು ಸುದೀರ್ಘ ಸಮರ. ಆದರೆ ನಾವು ವಿಜಯದ ಹಾದಿಯಲ್ಲಿ ಸಾಗುತ್ತಿದ್ದೇವೆ ಮತ್ತು ಗೆಲುವು ನಮ್ಮ ಸಾಮೂಹಿಕ ಸಂಕಲ್ಪವಾಗಿದೆ. ಕಳೆದ ಕೆಲವು ದಿನಗಳಲ್ಲಿ, ಚಂಡಮಾರುತವೊಂದು ಪಶ್ಚಿಮ ಬಂಗಾಳ ಮತ್ತು ಒಡಿಶಾದ ಕೆಲವು ಭಾಗಗಳಲ್ಲಿ ಹಾನಿ ಮಾಡಿದೆ. ಇಲ್ಲಿಯೂ ಈ ರಾಜ್ಯಗಳ ಜನರ ಪುಟಿದೇಳುವ ಗುಣ ಗಮನಾರ್ಹವಾಗಿದೆ. ಅವರ ಧೈರ್ಯವು ಭಾರತದ ಜನರಿಗೆ ಉತ್ತೇಜನಕಾರಿಯಾದ್ದು. ನಲ್ಮೆಯ ಸ್ನೇಹಿತರೇ, ಇಂತಹ ಸಂದರ್ಭದಲ್ಲಿ, ಭಾರತ ಸೇರಿದಂತೆ ವಿವಿಧ ದೇಶಗಳ ಆರ್ಥಿಕತೆಗಳು ಹೇಗೆ ಚೇತರಿಸಿಕೊಳ್ಳುತ್ತವೆ ಎಂಬ ಬಗ್ಗೆ ವ್ಯಾಪಕ ಚರ್ಚೆಯೂ ನಡೆಯುತ್ತಿದೆ. […]

Continue Reading
C202005113487

ಕಂಟೇನ್ಮೆಂಟ್ ಗೆ ಜೋನ್ ಗಳಲ್ಲಿ ಮಾತ್ರ ಜೂನ್ 30 ರ ವರೆಗೆ ಲಾಕ್ ಡೌನ್..!

ಕೇಂದ್ರ ಸರ್ಕಾರ  ಲಾಕ್‌ ಡೌನ್‌ ರ 5 ರ ಮಾರ್ಗ ಸೂಚಿ ಪ್ತಕಟಿಸಿದೆ,  ದೇಶಾಧ್ಯಂತ  ಇದ್ದ  ಲಾಕ್‌ ಡೌನ್‌ ತೆಗೆದು  ಹಾಕಿ ಕಂಟೇನ್‌ ನೆಂಟ್‌ ಜೋನ್‌ ಮಾತ್ತ ಸೀಮಿತಗೊಳಿಸಿ  ಆದೇಶಿಸಿದೆ. ಜೂನ್‌ 7 ರ ವರೆಗೆ ಲಾಕ್ ‌ಡೌನ್‌ 4 ಮುಂದುವರಿಕೆ,ಕರ್ಪ್ಯೂ ಅವಧಿ ಸಡಿಲಿಕೆ, ರಾಜ್ಯ ಸರ್ಕಾರದ ಮಾರ್ಗಸೂಚಿಯನ್ನು ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಸೋಮವಾರ ಪ್ರಕಟಿಸಲಿದ್ದಾರೆ. ಬೆಂಗಳೂರು ಮೇ 30 :-  ಕೊರೋನಾಸೋಂಕಿನಿಂದ ದೇಶಾಧ್ಯಂತ ಲಾಕ್‌ ಡೌನ್‌ ಮೇ 31 ಕ್ಕೆ ಕೊನೆಗೊಳ್ಳತ್ತಿರುವ ಹಿನ್ನೆಲೆಯಲ್ಲಿ . […]

Continue Reading
Chiranjeevi YS Jagan

ಚಿತ್ರರಂಗ ಕಾರ್ಯಾಚರಣೆಗೆ,ಸಿಂಗಲ್ ವಿಂಡೋ ಅನುಮತಿ ಜಾರಿ….!

ಬೆಂಗಳೂರು ಮೇ 24 :- ಮೆಗಾಸ್ಟಾರ್ ಚಿರಂಜೀವಿ ನೇತೃತ್ವದ ತೆಲುಗು ಚಲನಚಿತ್ರೋದ್ಯಮದ ಪ್ರತಿನಿಧಿಗಳು ಇತ್ತೀಚೆಗೆ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರನ್ನು ಭೇಟಿಯಾಗಿ ಶೂಟಿಂಗ್ ಮತ್ತು ನಿರ್ಮಾಣದ ನಂತರದ ಕೆಲಸಗಳನ್ನು ಪುನರಾರಂಭಿಸಲು ಅನುಮತಿ ಕೋರಿದ್ದಾರೆ. ಸಿಎಂ ಕೆಸಿಆರ್ ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈಗ ಟಾಲಿವುಡ್‌ನ ಸ್ಟಾರ್ ಗಳು ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ ಅವರನ್ನು ಭೇಟಿ ಮಾಡಲು ಸಜ್ಜಾಗಿದ್ದಾರೆ. ರಾಜ್ಯದಲ್ಲಿ ಚಲನಚಿತ್ರ ಚಿತ್ರೀಕರಣದ ಸುಗಮ ಕಾರ್ಯಾಚರಣೆ ನಡೆಸಲು ಆಂಧ್ರ ಪ್ರದೇಶ ಸರ್ಕಾರ ಇತ್ತೀಚೆಗೆ ವಿಶೇಷ  ಜಿ.ಓ […]

Continue Reading
1

ಚೀನಾದಿಂದ ವಿಶ್ವದ ಮೊದಲ 3ಡಿ ನ್ಯೂಸ್ ಆ್ಯಂಕರ್ ಅನಾವರಣ…!

ಬೀಜಿಂಗ್, ಮೇ 21 :  ಚೀನಾದ ರಾಷ್ಟ್ರೀಯ ಸುದ್ದಿ ಸಂಸ್ಥೆಯಾದ ಕ್ಸಿನ್ಹುವಾ  ಸುದ್ದಿ ಸಂಸ್ಥೆ 3D ಎಐ ನ್ಯೂಸ್ ಆಂಕರ್ ಸೃಷ್ಠಿಸಿದೆ. ಕೃತಕ ಬುದ್ಧಿ ವಂತಿಕೆಯನ್ನು ಆಧರಿಸಿ ಕಾರ್ಯನಿರ್ವಹಿಸುವ 3ಡಿ ನ್ಯೂಸ್ ಆಂಕರ್ ನ್ನು ಪ್ರಾರಂಭಿಸಿದೆ.  ಈ 3ಡಿ ಆಂಕರ್ ಸಾಮಾನ್ಯ ಆಂಕರ್ ನಂತೆ ಓಡಾಡುತ್ತೆದೆ ಮತ್ತು ಸುದ್ದಿಗೆ ಅನುಗುಣವಾಗಿ ತನ್ನ ಹಾವ ಭಾವಗಳನ್ನೂ ಸಹ ತೊರುತ್ತದೆ. ಒಬ್ಭ ಪತ್ರಕರ್ತನ ರೂಪ ಹಾಗೂ ಹಾವ-ಭಾವಗಳನ್ನು ಕ್ಲೋನಿಂಗ್ ಮಾಡಿ, ತಂತ್ರಜ್ಙಾನದ ಸಹಾಯ ಬಳಸಿ  ಈ 3ಡಿ ಸುದ್ದಿ ನಿರೂಪಕಿಯನ್ನು […]

Continue Reading
hotel hackers

29 ಮಿಲಿಯನ್ ಭಾರತೀಯರ ಡೇಟಾ ಸೋರಿಕೆ, ವಿವರ ನೀಡುವ ಮುನ್ನಾ ಎಚ್ಚರ ..ಎಚ್ಚರ…!

ಉದ್ಯೋಗ ಹರಸಿ ನೀಡುವ ವಿವರಗಳು ನಮಗೆ ಅಪಾಯ ತರಲಿವೆಯಾ…? 29 ಮಿಲಿಯನ್ ಭಾರತೀಯರ ಡೇಟಾ ಸೋರಿಕೆ ಸ್ಪಷ್ಟ ಉದಾಹರಣೆ. ಉದ್ಯೋಗ ನೀಡುತ್ತೇವೆ ಎಂದು ವಿವರ ಸಂಗ್ರಹಿಸುವ ವೆಬ್ ಸೈಟ್ ಗಳು ಸೇಫ್ ಅಲ್ಲ ಎಂದು ಸಾಬೀತಾಗಿದೆ. ಬೆಂಗಳೂರು ಮೇ 24 :-  ಡಾರ್ಕ್ ವೆಬ್‌ನಲ್ಲಿ 29 ಮಿಲಿಯನ್ ಭಾರತೀಯರ ವೈಯಕ್ತಿಕ ಡೇಟಾವನ್ನು ಹ್ಯಾಕರ್‌ಗಳು ಸೋರಿಕೆ ಮಾಡುತ್ತಾರೆ. ಆನ್‌ಲೈನ್ ಗುಪ್ತಚರ ಸಂಸ್ಥೆ ಸೈಬಲ್ ಪ್ರಕಾರ, ಸೈಬರ್ ಅಪರಾಧಿಗಳು 29 ಮಿಲಿಯನ್ ಉದ್ಯೋಗ  ತಮ್ಮ ಡೇಟಾವನ್ನು ಪೋಸ್ಟ್ ಮಾಡಿರುವ  ಭಾರತೀಯರ […]

Continue Reading
download 2 4

ಸಾಲಗಾರರಿಗೆ ಶುಕ್ರದೆಸೆ…!

ಬೆಂಗಳೂರು ಮೇ 22 :- ಲಾಕ್‌ ಡೌನ್‌ ಆದ ಹಿನ್ನಲೆಯಲ್ಲಿ  ವಿವಿಧ  ಬ್ಯಾಂಕ್‌ ಗಳಿಂದ ಸಾಲ ಪಡೆದ ಗ್ರಾಹಕರ ಮರುಪಾವತಿ ಅವಧಿಯನ್ನು ಆಗಸ್ಟ್‌ 31ರ ವರೆಗೆ ಮುಂದೂಡಿದೆ. ಇದರಿಂದ 6ತಿಂಗಳ ಕಾಲಾವಧಿ ಸಿಕ್ಕಂತಾಗಿದೆ. ಲಾಕ್‌ ಡೌನ್‌ ಘೊಷಣೆಯಾದ ನಂತರ ಇಂದು ಮೂರನೆ ಬಾರಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಭಾರತೀಯ ರಿಸರ್ವ ಬ್ಯಾಂಕ್‌ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಅವರು ಆರ್ಥಿಕ ಪುನಚ್ಚೇತನಕ್ಕೆ  ಕ್ರಮಗಳನ್ನು ಕೈಗೊಂಡಿದ್ದಾರೆ. ಕಳೆದ ಬಾರಿ ಅವರು ಎಲ್ಲಾ ಸಾಲದ ಮರುಪಾವತಿ ಕಂತು ಗಳಿಗೆ ಮೂರು ತಿಂಗಳು […]

Continue Reading
C202005113497

ʻ ದೀದಿ ʼನಾಡಿಗೆ ʻಮೋದಿʼ ,ಎಲ್ಲರ ಚಿತ್ತ ಬಂಗಾಳ ದತ್ತ….!

ನವ ದೆಹಲಿ ಮೇ 21:-  ಅಂಫನ್‌ ಚಂಡಮಾರುತದಿಂದ ತತ್ತರಿಸಿರು ಪಶ್ಚಿಮ ಬಂಗಾಳದ ಪರಿಸ್ಥಿಯನ್ನು ಅವಲೋಕಿಸಲು ಖುದ್ದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಪಶ್ಚಿಮ ಬಂಗಾಳ ಒಡಿಶಾ ಪ್ರವಾಸ ಕೈಗೊಳ್ಳಲಿದ್ದಾರೆ. ದೇಶದಲ್ಲಿ ಎಲ್ಲರ ಚಿತ್ತ ಮೋದಿ-ದೀದಿ ಭೇಟಿ ಮೇಲೆ ಇರಲಿದೆ, ಇನ್ನು ಯುಪಿಎ ಅಧಿನಾಯಕಿ ಸೋನಿಯಾ  ಶುಕ್ರವಾರ ಕರೆದಿರುವ  ವಿರೋಧಪಕ್ಷ ನಾಯಕರ ವಿಡಿಯೋಕಾನ್ಫರೆನ್ಸ್‌ ಸಭೆ ಮಂಕಾಗುವ ಲಕ್ಷಣಗಳೇ ಹೆಚ್ಚಾಗಿವೆ. ಒಡಿಶಾ, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಉಂಟಾಗಿರುವ ನಷ್ಟವನ್ನು ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ ಪ್ರಧಾನಿ ಮೋದಿ. ಚಂಡಮಾರುತದಿಂದ ತತ್ತರಿಸಿರು ಬಂಗಾಳ […]

Continue Reading