ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಸಲ್ಲದು. ಮಾಜಿ ಸಚಿವ ವೆಂಕಟರಮಣಪ್ಪ.
ಪಾವಗಡ : ಹಿಂದೂ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಪಿತೂರಿ ನಡೆಸಿ ಅಪಪ್ರಚಾರ ಮಾಡಲಾಗಿದೆ ಎಂದು ಮಾಜಿ ಸಚಿವ ವೆಂಕಟರಮಣಪ್ಪ ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಭಕ್ತರ ಅಭಿಮಾನಿ ವೇದಿಕೆ
ಇತರೆ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆಯವರ ಸಾಮಾಜಿಕ ಕಾರ್ಯಗಳು ಮೆಚ್ಚುವಂಥದೆಂದು, ಕೆಲ ಕಿಡಿಗೇಡಿಗಳು ಹುನ್ನಾರ ನಡೆಸಿ ಶ್ರೀ ಕ್ಷೇತ್ರ ಧರ್ಮಸ್ಥಳದ ಹೆಸರನ್ನು ಹಾಳು ಮಾಡಲು ಹೊರಟಿರುವುದು ಖಂಡನೀಯ ವೆಂದರು.
ವೀರೇಂದ್ರ ಹೆಗ್ಗಡವರ ನೇತೃತ್ವದಲ್ಲಿ ಸ್ಥಾಪನೆಯಾದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯು ರಾಜ್ಯದಾದ್ಯಂತ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು, ಮನೆ ಮಾತಾಗಿದೆ ಎಂದರು.
ಸರ್ಕಾರ ಈ ಕೂಡಲೇ ಧರ್ಮಸ್ಥಳದ ವಿರುದ್ಧ ಪಿತೂರಿ ನಡೆಸಿದವರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಂಡು ಶಿಕ್ಷೆ ನೀಡಬೇಕೆಂದು ತಿಳಿಸಿದರು.
ಈ ಪ್ರತಿಭಟನೆಯಲ್ಲಿ ತಾಲ್ಲೂಕಿನ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.
ಜೆಡಿ ಎಸ್ ಪ್ರತಿಭಟನೆ:

ಪ್ರತಿಭಟನೆ ಉದ್ದೇಶಿಸಿ ಮಾಜಿ ಶಾಸಕ ತಿಮ್ಮರಾಯಪ್ಪ ಮಾತನಾಡಿ.ಹಿಂದುಗಳ ಧಾರ್ಮಿಕ ಭಾವನೆಗೆ ದಕ್ಕೆ ತರುವಂತಹ ಕೆಲಸವನ್ನು ಕೆಲ ಕಿರಿಗೆಡಿಗಳು ಮಾಡಿದ್ದು.
ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಕಳಂಕ ತರವನಿಟ್ಟಿನಲ್ಲಿ ಷಡ್ಯಂತ್ರ ರೂಪಿಸಿರುವುದು ಖಂಡನೀಯವೆಂದರು.
ವೀರೇಂದ್ರ ಹೆಗಡೆಯವರು ಜನಪರ ಕೆಲಸಗಳನ್ನು ಮಾಡುವ ಮೂಲಕ ಜನರ ಮನಸ್ಸನ್ನು ಗೆದ್ದಿದ್ದು, ಅನಾಮಿಕನ ಮುಖಾಂತರ ಕಿಲ ಕಿಡಿಗೇಡಿಗಳು ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಿದ್ದು ಸರ್ಕಾರ ಈ ಕೂಡಲೇ ಅಂತಹ ವ್ಯಕ್ತಿಗಳನ್ನು ಬಂಧಿಸಿ, ಅಂತಹ ವ್ಯಕ್ತಿಗಳ ಮೇಲೆ ಎಸ್ಐಟಿ ತನಿಖೆಯನ್ನು ಮುಕ್ತವಾಗಿ ನಡೆಸಬೇಕೆಂದು ಆಗ್ರಹಿಸಿದರು.
ಪಟ್ಟಣದ ಗುರುಭವನದಿಂದ ಸಾವಿರಾರು ಶ್ರೀ ಧರ್ಮಸ್ಥಳದ ಭಕ್ತಾದಿಗಳು ರಸ್ತೆಯುದ್ಧಕ್ಕೂ ಧರ್ಮಸ್ಥಳದ ಪರ ಘೋಷಣೆಗಳನ್ನು ಕೊಗಿ. ಶನೇಶ್ವರ ಸ್ವಾಮಿ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟಿಸಿ, ಅನಾಮಿಕ ವ್ಯಕ್ತಿಯನ್ನು ಬಳಸಿಕೊಂಡು ಧರ್ಮಸ್ಥಳದ ಪವಿತ್ರತೆಯನ್ನು ಹಾಳು ಮಾಡುತ್ತಿರುವ ಗಿರೀಶ್ ಮಟ್ಟಣ್ಣ, ಮಹೇಶ ತಿಮ್ಮರೊಡಿ, ಜಯಂತ ಟಿ ಹಾಗೂ ಸಮೀರ ಎಂ.ಡಿ ಇವರು ತಕ್ಷಣವೇ ಬಂಧಿಸಿ ವಿಚಾರಣೆಗೆ ಒಳಪಡಿಸಬೇಕೆಂದು ಆಗ್ರಹಿಸಿ,
ತಾಲ್ಲೂಕು ಕಚೇರಿ ಆವರಣದಲ್ಲಿ ತಹಸೀಲ್ದಾರ್ ವರದರಾಜು ರವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಆರ್ ಸಿ ಅಂಜನಪ್ಪ,ಶ್ರೀರಾಮ್ ಸೇನೆ ಜಿಲ್ಲಾ ಅಧ್ಯಕ್ಷ ಅನಿಲ್ ಯಾದವ್, ಬಿಜೆಪಿ ಮುಖಂಡರಾದ ಡಾ ಜಿ ವೆಂಕಟರಾಮಯ್ಯ
ಅಲ್ಕುಂದಿರಾಜ್, ರಾಘವೇಂದ್ರ, ಬ್ಯಾಡನೂರು ಶಿವು, ಶೇಖರ್ ಬಾಬು, ರವಿ, ಜೆಡಿಎಸ್ ಮುಖಂಡರಾದ ಬಲರಾಮ್ ರೆಡ್ಡಿ, ಮನು ಮಹೇಶ್, ರಾಮಾಂಜಿ ಕಾವಲಗೆರೆ, ಶಿವಕುಮಾರ್,
ರೈತ ಸಂಘದ ಪೂಜಾರಪ್ಪ, ನರಸಿಂಹ ರೆಡ್ಡಿ, ಮುಂತಾದವರು ಹಾಜರಿದ್ದರು.
ವರದಿ : ಶ್ರೀನಿವಾಸಲು ಎ
