ಗ್ಯಾದಿಗುಂಟೆ ಗ್ರಾಮದಲ್ಲಿ ಸ್ವಚ್ಛತೆ ಮರೀಚಿಕೆ.
ಪಾವಗಡ :ಸರಕಾರ ಸ್ವಚ್ಛ ಭಾರತ ಯೋಜನೆಯಡಿ ಲಕ್ಷಾಂತರ ರೂ. ಖರ್ಚು ಮಾಡುತ್ತಿದೆ. ಆದರೆ, ಸ್ವಚ್ಛತೆ ಮಾತ್ರ ಗ್ರಾಮಗಳಲ್ಲಿಇನ್ನೂ ಮರೀಚಿಕೆಯಾಗಿ ಉಳಿದಿದೆ. ಇದಕ್ಕೆ ಉದಾಹರಣೆ
ಪಾವಗಡ ತಾಲ್ಲೂಕಿನ ನಾಗಲಮಡಿಕೆಯ ಹೋಬಳಿಯ ಗ್ಯಾದಿಗುಂಟೆ ಗ್ರಾಮ.
ಪಾವಗಡ ತಾಲೂಕಿನ ಗ್ಯಾದಿಕುಂಟೆ ಗ್ರಾಮವು ಸುಮಾರು 250ಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಆದರೆ ಎಲ್ಲೆಂದರಲ್ಲಿನಿಂತ ಕೊಳಚೆ ನೀರು, ರಸ್ತೆ ಉದ್ದಕ್ಕೂ ಇರುವ ತಿಪ್ಪೆಗಳ ಸಾಲು, ಗಳ ಜೊತೆಗೆ ಮೂಲ ಸೌಲಭ್ಯಗಳ ಕೊರತೆಯಿದ್ದು.
ಗ್ರಾಮಸ್ಥರು ಕೊಳಚೆ ನೀರಿನ ಮೇಲೆಯೇ ದಿನನಿತ್ಯ ಓಡಾಡುವ ಪರಿಸ್ಥಿತಿ ಉಂಟಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಮನೆಗಳ ತ್ಯಾಜ್ಯ ನೀರು ಮುಖ್ಯ ರಸ್ತೆಯನ್ನೊಳಗೊಂಡಂತೆ ಪ್ರತಿ ಬೀದಿಗಳಲ್ಲೂ ಹರಿಯುತ್ತಿದ್ದು,.
ಅಂಗನವಾಡಿ ಶಾಲೆ ಮುಂದೆ ಕೊಳಚೆ ನೀರು ನಿಂತಿದ್ದು, ಅಂಗನವಾಡಿ ಶಾಲೆಯ ಮಕ್ಕಳು ಕೊಳಚೆ ನೀರಿನಲ್ಲಿಯೇ ಓಡಾಡಬೇಕಾದ ಪರಿಸ್ಥಿತಿ ಉಂಟಾಗಿದ್ದು.
ನಿಂತ ಕೊಳಚೆ ನೀರು ಸೊಳ್ಳೆಗಳ ತಾಣವಾಗಿ ಮಾರ್ಪಾಡಾಗಿದ್ದು, ಇದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಉಂಟಾಗಿದ್ದು ಗ್ರಾಮಸ್ಥರು ಪಂಚಾಯಿತಿಗೆ ಹಿಡಿ ಶಾಪವನ್ನು ಹಾಕಿದ್ದಾರೆ.
ಸಮಸ್ಯೆ ಬಗ್ಗೆ ತಾಲೂಕು ಪಂಚಾಯಿತಿ ಇ ಓ ಉತ್ತಮ್ ಪ್ರತಿಕ್ರಿಯಿಸಿ .ಸಂಬಂಧಪಟ್ಟ ಪಿಡಿಓ ರವರನ್ನು ಕಚೇರಿಗೆ ಕರೆಸಿ, ಮಾಹಿತಿ ಪಡೆದು ಸಮಸ್ಯೆ ಬಗೆಹರಿಸಲಾಗುವುದೆಂದು ಭರವಸೆ ನೀಡಿದರು.
ಗ್ಯಾದಿಗುಂಟೆ ಗ್ರಾಮದಲ್ಲಿ ಚರಂಡಿಯೇ ಇಲ್ಲವೆಂದು ಚರಂಡಿ ಮಾಡಿಸಲು ಹೋದಾಗ ಊರಿನ ಕೆಲವು ವ್ಯಕ್ತಿಗಳು ಕೆಲಸಕ್ಕೆ ಅಡ್ಡಿಪಡಿಸಿದ್ದು ಚರಂಡಿ ವ್ಯವಸ್ಥೆ ಇಲ್ಲದೆ ಮನೆಗಳ ಕಲುಷಿತ ತ್ಯಾಜ್ಯ ನೀರು ರಸ್ತೆ ಮೇಲೆ ಹರಿಯುತ್ತಿದೆ ಎಂದು ಗ್ರಾಮ ಪಂಚಾಯಿತಿಯ ಸದಸ್ಯ ಜಿ.ಟಿ ಮುತ್ಯಾಲು ತಿಳಿಸಿದ್ದಾರೆ.
ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಗ್ರಾಮಕ್ಕೆ ಚರಂಡಿ ವ್ಯವಸ್ಥೆಯನ್ನು ಮಾಡಿ, ಗ್ರಾಮವನ್ನು ರೋಗ ಮುಕ್ತ ಮಾಡಬೇಕೆಂಬುದು ಗ್ರಾಮಸ್ಥರ ಆಶಯವಾಗಿದೆ.
ವರದಿ : ಶ್ರೀನಿವಾಸಲು ಎ
