IMG 20251121 WA0001

ಪಾವಗಡ: ಅನಧಿಕೃತ ಮಕ್ಕಳ ದತ್ತು ಅಪರಾಧ….!

DISTRICT NEWS ತುಮಕೂರು

ಅನಧಿಕೃತ ಮಕ್ಕಳ ದತ್ತು ಅಪರಾಧ: ಸಿಡಿಪಿಓ ಸುನಿತಾ ಡಿ. ಜೆ

ಪಾವಗಡ: ಮಕ್ಕಳಿಲ್ಲದ ಪೋಷಕರು ಅನಧಿಕೃತವಾಗಿ ಮಕ್ಕಳನ್ನು ದತ್ತು ಪಡೆಯುವುದು ಕಾನೂನು ಬಾಹಿರ ಅಪರಾಧವೆಂದು ಸಿ ಡಿ ಪಿ ಓ ಸುನಿತಾ ಡಿ.ಜೆ ತಿಳಿಸಿದರು.

ಪಟ್ಟಣದ ತಹಶೀಲ್ದಾರ್ ಕಚೇರಿಯ ಬಳಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ತಾಲೂಕು ಆಡಳಿತ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ದತ್ತು ಮಾಸಾಚರಣೆಯ ಜಾಥಾ ಕಾರ್ಯಕ್ರಮಕ್ಕೆ ಗ್ರೇಡ್ -2 ತಹಸೀಲ್ದಾರ್ ಪ್ರಸಾದ್ ನಿಶಾನೆ ತೋರಿದರು

ಕಾರ್ಯಕ್ರಮ ಉದ್ದೇಶಿಸಿ ಸಿಡಿಪಿಓ ಸುನಿತಾಡಿ. ಜೆ ಮಾತನಾಡಿ.
ಇತ್ತೀಚೆಗೆ ಮಕ್ಕಳಿಲ್ಲದ ದಂಪತಿಗಳು ತಿಳುವಳಿಕೆ ಅಭಾವದಿಂದ ಕಾನೂನುಬಾಹಿರುವಾಗಿ ಮಕ್ಕಳನ್ನು ದತ್ತು ಪಡೆಯುತ್ತಿದ್ದು ಮತ್ತು, ಮಕ್ಕಳ ಮಾರಾಟ ದ ವಿರುದ್ಧ ಅರಿವು ಮೂಡಿಸುವ ಉದ್ದೇಶದಿಂದ ಅಂತರಾಷ್ಟ್ರೀಯ ದತ್ತು ಮಾಸಾಚರಣೆಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕಾನೂನುಬದ್ಧವಾಗಿ ದತ್ತು ಪಡೆಯಲು ‘ಕಾರಾ’ (CARA) ವೆಬ್‌ಸೈಟ್‌ನಲ್ಲಿ (https://cara.nic.in/) ನೋಂದಣಿ ಮಾಡಿಕೊಳ್ಳ ಬೇಕೆಂದು.ದತ್ತು ಪಡೆಯುವ ಪೋಷಕರು ದೈಹಿಕ, ಆರ್ಥಿಕ ಮತ್ತು ಮಾನಸಿಕವಾಗಿ ಸದೃಢರಾಗಿರಬೇಕು. ಅವರ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಯನ್ನು ಪರಿಶೀಲಿಸಲಾಗುತ್ತದೆ ಎಂದರು.

ದತ್ತು ಮಕ್ಕಳಿಗಾಗಿ ನೋಂದಣಿಯಾದ ನಂತರ ಸರಕಾರಿ ಅಧಿಕಾರಿಗಳ ತಂಡವು ಪೋಷಕರ ನಿವಾಸಕ್ಕೆ ಭೇಟಿ ನೀಡಿ, ಮಗುವನ್ನು ಸಾಕಲು ಅವರು ಸಮರ್ಥರಾಗಿದ್ದಾರೆಯೇ ಎಂದು ಅಧ್ಯಯನ ಮಾಡಿ ವರದಿ ಸಲ್ಲಿಸಲಾಗುತ್ತದೆ ಎಂದರು.
ಅನುಮೋದನೆ: ಈ ವರದಿಯ ಆಧಾರದ ಮೇಲೆ ಜಿಲ್ಲಾಧಿಕಾರಿಗಳು ದತ್ತು ನೀಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತಾರೆ ಎಂದು.

ದತ್ತು ಪಡೆಯಲು ಯಾವುದೇ ನರ್ಸಿಂಗ್ ಹೋಮ್, ಆಸ್ಪತ್ರೆ, ಅಥವಾ ಅನಧಿಕೃತ ಸಂಸ್ಥೆಗಳನ್ನು ಸಂಪರ್ಕಿಸಬಾರದು ಎಂದು ಅಕ್ರಮ ದತ್ತುಗಳು ಮಕ್ಕಳ ಕಳ್ಳಸಾಗಣೆ ಜಾಲಕ್ಕೆ ಕಾರಣವಾಗಬಹುದುಎಂದು.

ಅನಾಥ ಮಕ್ಕಳ ಬಗ್ಗೆ ಮಾಹಿತಿಯನ್ನು ಜಿಲ್ಲಾ ಮಕ್ಕಳ ಘಟಕಕ್ಕೆ ತಿಳಿಸಲು ಮಕ್ಕಳ ಸಹಾಯವಾಣಿ 1098 ಗೆ ಕರೆ ಮಾಡುವಂತೆ ತಿಳಿಸಿದರು.

ತೊಟ್ಟಿಲಲ್ಲಿ ಮಲಗಿ ಕಿಲ -ಕಿಲನೆ ನಗಬೇಕಾಗಿರುವ ಮಗು ಕಾರಣಾಂತರಗಳಿಂದ ಕಸದ ತೊಟ್ಟಯಲ್ಲಿ, ಪೊದೆಗಳಲ್ಲಿ ಬಿಸಾಡುವುದು ಅಕ್ಷಮ್ಯ ಅಪರಾಧವೆಂದು.

ಮಕ್ಕಳನ್ನು ಮಾರಾಟ ಮಾಡುವುದು, ಕೊಳ್ಳುವುದು ಬಾಲ ನ್ಯಾಯ ಕಾಯ್ದೆ 2018 ತಿದ್ದುಪಡಿ 2021 ರ ಅನ್ವಯ ಅಪರಾಧವಾಗಿರುತ್ತದೆ. ಒಂದು ವೇಳೆ ಇಂತಹ ಕೃತ್ಯಗಳು ಕಂಡು ಬಂದಲ್ಲಿ 1 ಲಕ್ಷ ದಂಡ ಹಾಗೂ 5 ವರ್ಷ ಕಠಿಣ ಜೈಲು ಶಿಕ್ಷೆ ಇರುತ್ತದೆ ಈ ಕೃತ್ಯಗಳಲ್ಲಿ ಆಸ್ಪತ್ರೆ ಸಿಬ್ಬಂದಿಯವರು ಬಾಗಿಯಾದಲ್ಲಿ 3ರಿಂದ 7ವರ್ಷದ ವರೆಗೆ ಶಿಕ್ಷೆ ಇರುತ್ತದೆ. ಒಟ್ಟಾರೆಯಾಗಿ ಮಕ್ಕಳು ಯಾವುದೇ ದುಸ್ಥಿತಿಗೆ ಒಳಗಾಗದೆ ಸುರಕ್ಷಿತವಾಗಿ ಪ್ರೀತಿ ತುಂಬಿದ ಶಾಶ್ವತ ಕೌಟುಂಬಿಕ ವಾತಾವರಣದಲ್ಲಿ ಬೆಳೆಯಬೇಕು ಎಂದು ತಿಳಿಸಲಾಯಿತು.

ದತ್ತು ಪ್ರಕ್ರಿಯೆಯ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ತಹಸೀಲ್ದಾರ್ ರವರ ಕಚೇರಿಯಿಂದ ಎಸ್ ಎಸ್ ಕೆ ಸಮುದಾಯ ಭವನದವರೆಗೆ ಜಾಗೃತಿ ರಥದ ಮೂಲಕ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ , ಪಾವಗಡ ಪೊಲೀಸ್ ಠಾಣೆಯ ಸಿಬ್ಬಂದಿ,, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳು,ಮಕ್ಕಳ ಸಹಾಯವಾಣಿ ಸಿಬ್ಬಂದಿಗಳು, ಹಾಜರಿದ್ದರು.

ವರದಿ : ಶ್ರೀನಿವಾಸಲು ಎ