- ಸಪ್ರಸ್ವರ ಮಾದ್ಯಮ ಕಾರ್ಯಕ್ಕೆ ಲೋಕಾಯುಕ್ತರ ಪ್ರಶಂಸೆ
- ಲೋಕಾಯುಕ್ತ : ಪಾವಗಡ ,ಶಿರ, ಮಧುಗಿರಿ ತಾಲ್ಲೂಕಿನ 140 ಪ್ರಕರಣಗಳ ವಿಚಾರಣೆ
- ಭ್ರಷ್ಟಾಚಾರ ನಿರ್ಮೂಲನೆಯಾದರೆ ಭಾರತ ವಿಶ್ವದ ನಂ.1 ಸುಭದ್ರ ಆರ್ಥಿಕ ದೇಶ : ಉಪ ಲೋಕಾಯುಕ್ತ ನ್ಯಾ.ಬಿ. ವೀರಪ್ಪ
ತುಮಕೂರು ನ.21: ಭಾರತದಲ್ಲಿ ಭ್ರಷ್ಟಾಚಾರ ಸಂಪೂರ್ಣವಾಗಿ ನಿರ್ಮೂಲನೆಯಾದರೆ ಜಗತ್ತಿನಲ್ಲಿಯೇ ಆರ್ಥಿಕ ವ್ಯವಸ್ಥೆಯಲ್ಲಿ ಮೊದಲನೇ ದೇಶವಾಗುವುದರಲ್ಲಿ ಸಂಶಯವಿಲ್ಲ ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಅಭಿಪ್ರಾಯಪಟ್ಟರು.
ಶುಕ್ರವಾರ ಮಧುಗಿರಿ ಕನ್ನಡ ಭವನದಲ್ಲಿ ಪಾವಗಡ, ಸಿರಾ, ಮತ್ತು ಮಧುಗಿರಿ ತಾಲೂಕುಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತದಲ್ಲಿ ಬಾಕಿ ಇರುವ ಪ್ರಕರಣಗಳ ವಿಚಾರಣೆ ಹಾಗೂ ವಿಲೇವಾರಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಅಧಿಕಾರಿಗಳು ನಿಷ್ಠೆಯಿಂದ ತಮ್ಮ ಕರ್ತವ್ಯದಲ್ಲಿ ತೊಡಗಿದರೆ ಮಾತ್ರ ಸಮ ಸಮಾಜ ನಿರ್ಮಾಣವಾಗಲು ಸಾಧ್ಯ. ರಾಷ್ಟ್ರಕವಿ ಕುವೆಂಪು ಅವರು ಹೇಳಿದಂತೆ ‘ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು’ ಎಂಬ ತತ್ವದಂತೆ ಬದುಕಬೇಕು. ಸಂವಿಧಾನದ ಅನುಚ್ಛೇದ 14ರ ಅಡಿಯಲ್ಲಿ ಎಲ್ಲರೂ ಸಮಾನವಾಗಿ ಬಾಳಬೇಕು ಹಾಗೂ ಅನುಚ್ಛೇದ 21ರ ಅಡಿಯಲ್ಲಿ ಮನುಷ್ಯ, ಪ್ರಾಣಿ, ಪಕ್ಷಿ ಸೇರಿದಂತೆ ಎಲ್ಲವೂ ಗೌರವದಿಂದ ಬದುಕಲು ಅವಕಾಶವಿದೆ ಎಂದು ಹೇಳಿದರು.
ಇಂದಿನ ದಿನಗಳಲ್ಲಿ ಮನುಷ್ಯನ ಸ್ವಾರ್ಥದಿಂದಾಗಿ ಕೆರೆ ಮತ್ತು ಅರಣ್ಯ ಪ್ರದೇಶಗಳು ಒತ್ತುವರಿಯಾಗುತ್ತಿವೆ. ಮನುಷ್ಯ ತನ್ನ ದುರುದ್ದೇಶಗಳಿಗಾಗಿ ಅನ್ಯಾಯದ ಹಾದಿಯಲ್ಲಿ ಸಾಗುತ್ತಿದ್ದಾನೆ. ಇದನ್ನು ಹೋಗಲಾಡಿಸಲು ಹಲವಾರು ಕಾನೂನುಗಳಿದ್ದರೂ ಅವುಗಳನ್ನು ಸರಿಯಾಗಿ ಅನುಷ್ಠಾನ ನಗೊಳಿಸುತ್ತಿಲ್ಲ ಎಂದು ವೀರಪ್ಪ ಅವರು ಅಸಮಾಧಾನ ವ್ಯಕ್ತಪಡಿಸಿದರು
ಮನುಷ್ಯ ತನ್ನ ಹಕ್ಕುಗಳನ್ನು ಯಾವಾಗ ನೈಜವಾಗಿಚಲಾಯಿಸುತ್ತಾನೋ ಅಂದು ಸಮಾಜದಲ್ಲಿ ಮಹತ್ತರ ಬದಲಾವಣೆಯಾಗುತ್ತದೆ ಎಂದು ಹೇಳಿದರು
ಕರ್ನಾಟಕ ಲೋಕಾಯುಕ್ತದಲ್ಲಿ ಸದ್ಯ 25ಸಾವಿರಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಇವೆ. ಈ ಪೈಕಿ 7 ರಿಂದ 8 ಸಾವಿರದವರೆಗೂ ಸುಳ್ಳು ಅಥವಾ ಆಧಾರರಹಿತ ಪ್ರಕರಣಗಳಿದ್ದು, ಇಂತಹ ಪ್ರಕರಣಗಳನ್ನು ಗುರುತಿಸಿ ಮತ್ತೊಮ್ಮೆ ಸುಳ್ಳು ಪ್ರಕರಣ ದಾಖಲು ಮಾಡಿದರೆ ಕ್ರಮ ಕೈಗೊಳ್ಳಲಾಗುತ್ತದೆ. ಈ ಕಾರಣದಿಂದಾಗಿ ನೈಜವಾಗಿ ನ್ಯಾಯ ಸಿಗಬೇಕಾದ ಜನರಿಗೆ ನ್ಯಾಯ ದೊರೆಯುತ್ತಿಲ್ಲ ಹಾಗೂ ನೈಜ ಪ್ರಕರಣಗಳ ಮಹತ್ವವು ಕಳೆದುಕೊಳ್ಳುತ್ತಿದೆ ಎಂದು ಅವರು ಹೇಳಿದರು
. ಈ ಸಮಸ್ಯೆಯನ್ನು ನಿವಾರಿಸಲು ಲೋಕಾಯುಕ್ತವು ಪ್ರತಿ ಜಿಲ್ಲೆಗೂ ಭೇಟಿ ನೀಡಿ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲಾಗುತ್ತಿದೆ. ಇದಕ್ಕೆ ಸಾರ್ವಜನಿಕರು ಹಾಗೂ ಅಧಿಕಾರಿಗಳು ಸಹಕರಿಸಬೇಕು ಎಂದು ತಿಳಿಸಿದರು.
ಅನ್ಯಾಯದ ವಿರುದ್ಧ ಪ್ರತಿ ಯೊಬ್ಬರು ಧ್ವನಿ ಎತ್ತಬೇಕು :

ಸ್ವಾತಂತ್ರ್ಯ ಪೂರ್ವದಲ್ಲಿ ದೇಶಭಕ್ತರ ಸಂಖ್ಯೆ ಹೆಚ್ಚಾಗಿತ್ತು, ಆದರೆ ಇಂದಿನ ದಿನಗಳಲ್ಲಿ ದೇಶಭಕ್ತರ ಸಂಖ್ಯೆ ತುಂಬ ವಿರಳವಾಗುತ್ತಿದೆ. ಸ್ವಾತಂತ್ರ್ಯ ಪಡೆದು 79 ವರ್ಷಗಳಾದರೂ ನಾವು ಇಂದಿಗೂ ನಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುವ ಪರಿಸ್ಥಿತಿ ಇದೆ. ಅನ್ಯಾಯ ಕಂಡಲ್ಲಿ ಪ್ರತಿಯೊಬ್ಬರೂ ಕೂಡ ಧ್ವನಿ ಎತ್ತಬೇಕು, ಆಗ ಮಾತ್ರ ಸಮ ಸಮಾಜ ನಿರ್ಮಾಣಕ್ಕೆ ಸಾಧ್ಯ ಎಂದು ಹೇಳಿದರು.
ಪಾವಗಡ, ಸಿರಾ, ಮತ್ತು ಮಧುಗಿರಿ ತಾಲೂಕುಗಳಿಗೆ ಸಂಬಂಧಿಸಿದ ಪ್ರಕರಣ ಗಳಲ್ಲಿ 140 ಪ್ರಕಣಗಳ ವಿಚಾರಣೆ ವಿಲೇವಾರಿ ನಡೆಯಿತು.
ಪಾವಗಡ ಪ್ರಕರಣಗಳು :
ಪಾವಗಡ ತಾಲ್ಲೂಕಿನ ಸಾರ್ವಜನಿಕ ಹಿತಾಸಕ್ತಿ ಯುಳ್ಳ ಮೂರು ಪ್ರಕರಣಗಳು ಪ್ರಮುಖ ವಾಗಿದ್ದವು. ಈ ಮೂರು ಪ್ರಕರಣಗಳು ವೈ ಎನ್ ಹೊಸಕೋಟೆ ಹೋಬಳಿ ಗೆ ಸಂಬಂಧಿಸಿದ ಪ್ರಕರಣಗಳು.
- ಆಕರ್ಷಣಿ ಫ್ರೌಢಶಾಲೆ ಮಕ್ಕಳ ದುಸ್ಥಿತಿ
- ಗ್ರಾಮಪಂಚಾಯತಿ ಸದಸ್ಯೆ ಸರ್ಕಾರಿ ರಸ್ತೆ ಗಳ ಒತ್ತುವರಿ- ಕಾಂಪೌಡ್ ನಿರ್ಮಾಣ
- ಕೋಟೇಶ್ವವರ ದೇವಸ್ಥಾನ ( ಸರ್ಕಾರಿ ) ಜಮೀನು ಒತ್ತುವರಿ ಪ್ರಕರಣ
ಆಕರ್ಷಣಿ ಫ್ರೌಢಶಾಲೆ :
ವೈ.ಎನ್ ಹೊಸಕೋಟೆ ಹೋಬಳಿಯ ತಿಪ್ಪಯ್ಯನದುರ್ಗ ವ್ಯಾಪ್ತಿಯ ಸರ್ಕಾರಿ ಅನುದಾನದ ಆರ್ಷಣಿ ಫ್ರೌಡಶಾಲೆ ಗೆ ಸ್ಥಳೀಯ ಗ್ರಾಮಗಳಿಂದ ಮಕ್ಕಳ ದಾಖಲಾತಿ ನಡಯುವುದಿಲ್ಲ ಆದ್ದರಿಂದ ಆಡಳಿತ ಮಂಡಳಿಯವರು ದೂರದ ಯಾದಗಿರಿ ಜಿಲ್ಲೆಯಿಂದ ಬಡ ಕುಟುಂಬ ವರ್ಗಗಳಿಗೆ ಸೇರಿದ ಸುಮಾರು 30 – 40 ಮಕ್ಕಳನ್ನು ಸಿದ್ದಗಂಗ ಮಠಕ್ಕೆ ತುಮಕೂರು ಸೇರಿಸುತ್ತೇವೆ ಎಂದು ಕರೆತಂದು ಅವರ ಶಾಲಾ ಕಟ್ಟಡದಲ್ಲಿ ಇಟ್ಟಿದ್ದರು.
ಮಕ್ಕಳಿಗೆ ಮೂಲಭೂತ ಸೌಕರ್ಯಗಳಾದ ಶೌಚಾಲಯ, ಮಲಗಲು ಕೊಠಡಿ, ಸಮಯಕ್ಕೆ ಸರಿಯಾಗಿ ಊಟದ ವ್ಯವಸ್ಥೆ ಇರಲಿಲ್ಲ, ಮಧ್ಯಾಹ್ನ ಬಿಸಿ ಊಟ ಕ್ಕೆ ಮಾಡುವ ಅಡಿಗೆ ಯನ್ನು ರಾತ್ರಿ ತಿನ್ನಬೇಕು ಮತ್ತು ಬೆಟ್ಟದ ತಪ್ಪಲಲ್ಲಿ ಶಾಲೆ ಇದ್ದಿದ್ದರಿಂದ ಪ್ರಾಣಿಗಳ ಕಾಟ ಬೇರೆ ಯಾವ ಭದ್ರತಾ ಕ್ರಮಗಳಿಲ್ಲ ಇಂತಹ ದುಸ್ತಿಯಲ್ಲಿ ಶಾಲೆ ನಡೆಸುತ್ತಿದ್ದರು. ಕೇವಲ ಸರ್ಕಾರದ ಅನುದಾನ ಪಡೆಯಲು ಬಡ ಮಕ್ಕಳ ಭವಿಷ್ಯದ ಜೊತೆ ಆಟವಾಡುತ್ತಿತ್ತು ಆಕರ್ಷಣೆಗಳಲ್ಲ ಫ್ರೌಢಶಾಲೆಆಡಳಿತ ಮಂಡಳಿ
ಸ್ತಪ್ತಸ್ವರ ಮಾಧ್ಯಮ ಕ್ಕೆ ಪ್ರಶಂಸೆ :
ಆಕರ್ಷಣಿ ಫ್ರೌಡಶಾಲೆ ಯ ಮಕ್ಕಳ ದುಸ್ಥಿತಿಯನ್ನು ಸಪ್ತಸ್ವರ ಮದ್ಯಮ ದಲ್ಲಿ ಸುದ್ದಿ ಮಾಡಿ ನಂತರ DDPI ಮತ್ತು BEO ಅವರ ಗಮನಕ್ಜೆ ತರಲಾಯಿತು ಮತ್ತು ಈ ಶಾಲೆಗೆ ಕಳೆದ ಎರಡು ವರ್ಷದಿಂದ ಶಿಕ್ಷಣ ಇಲ್ಲಾಖೆ ಅಧಿಕಾರಿಗಳು ಭೇಟಿ ನೀಡಿದ್ದರು ಏನು ಕ್ರಮ ಕ್ಕೆ ಮುಂದಾಗುವುದಿಲ್ಲ ಕಾರಣ ಭೇಟಿ ನೀಡಿದ ಸಿಬ್ಬಂದಿಗೆ ಲಕ್ಷಿಕಟಾಕ್ಷ ವಾಗಿರುತ್ತದೆ.ಸುಮಾರು 6 ತಿಂಗಳು ಕಳೆದರು DDPI ಮಂಜುನಾಥ್ ಮತ್ತು BEO ಇಂದ್ರಾಣಿ ಅವರು ಕ್ರಮ ಕೈಗೊಳ್ಳುವುದಿಲ್ಲ.
ಲೂಕಾಯುಕ್ತದಲ್ಲಿ ಪ್ರಕರಣ ದಾಖಲು :
ಸಪ್ತಸ್ವರ ಮಾದ್ಯಮದಿಂದ ಉಪಲೋಕಾಯುಕ್ತ ನ್ಯಾಯಮೂರ್ತಿ ಗಳಾದ ಪಣೀಂದ್ರ ಅವರನ್ನ ಭೇಟಿಯಾಗಿ ಸುದ್ದಿ ಪ್ರಕಟವಾದ ಸಪ್ತಸ್ವರ ರ ಪತ್ರಿಕೆ ಮತ್ತು ಆಕರ್ಷಣಿ ಫ್ರೌಢಶಾಲೆ ಯ ಮಕ್ಕಳ ದುಸ್ಥಿತಿಯನ್ನು ವಿವರಿಸಲಾಯಿತು.10-1-2024 ರಂದು ಪ್ರಕರಣ ದಾಖಲಾಯಿತು ನಂತರ ತುಮಕೂರು ಲೋಕಾಯುಕ್ತ ಪೋಲೀಸರು ಶಾಲೆ ಭೇಟಿ ನಡಿ ಖುದ್ದಾಗಿ ಮಕ್ಕಳ ದುಸ್ಥಿತಿಯನ್ನು ಕಂಡುವರದಿ ಸಲ್ಲಿಸಿದರು.
ಸಪ್ತವರ ಸುದ್ದಿ ಯ Video :
ಆಕರ್ಷಣಿ ಫ್ರೌಢಶಾಲೆ ಮಾನ್ಯತೆ ರದ್ದು :

ಮಧುಗಿರಿಯಲ್ಲಿ ನಡೆದ ವಿಚಾರಣೆಯ ವೇಳೆ ಹಾಜರಾದ DDPI ಮಂಜುನಾಥ್ ಮತ್ತು BEI ಇಂದ್ರಾಣಿ ಅವರು ಆಕರ್ಷಣಿ ಫ್ರೌಢಶಾಲೆಯಲ್ಲಿ 2025- 26 ಸಾಲಿನಲ್ಲಿ ಮಕ್ಕಳು ದಾಖಲಾಗಿಲ್ಲ , ಶಾಲೆಯಲ್ಲು ವ್ಯಾಸಂಗ ಮಾಡುತ್ತಿದ್ದ ಮಕ್ಕಳನ್ನು ಅವರ ಸ್ವಂತ ಊರಿಗೆ ಕಳುಹಿಸಲಾಗಿದೆ ಮತ್ತು ಈ ಶಾಲೆಯ ಮಾನ್ಯತೆ ರದ್ದು ಮಾಡಲು ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವ ಪತ್ರವನ್ನು ಮಾನ್ಯ ಉಪ ಲೋಕಾಯುಕ್ತ ನ್ಯಾಯಮೂರ್ತಿ ವೀರಪ್ಪ ಅವರಿಗೆ ಸಲ್ಲಿಸಿದರು.
ಸಪ್ರಸ್ವರ ಮಧ್ಯಮಕ್ಕೆ ಪ್ರಶಂಸೆ :
ಆಕರ್ಷಣಿ ಫ್ರೌಢಶಾಲೆ ಯ ಮಕ್ಕಳ ದುಸ್ಥಿಯ ಬಗ್ಗೆ ವರದಿ ಮಾಡಿ ನಂತರ ಲೋಕಾಯುಕ್ತದಲ್ಲಿ ಪ್ರಕಣ ದಾಖಲು ಮಾಡಿ ಬಡ ಕುಟುಂಬಗಳ ಹಿನ್ನೆಲೆ ಯಿಂದ ಬಂದ ಮಕ್ಕಳ ದುಸ್ಥಿಯ ಬದುಕಿನಿಂದ ಕಾಪಾಡಿದ ಸಪ್ತಸ್ವರ ಮಾದ್ಯಮ ಕ್ರಮ ಕ್ಕೆ ಉಪ ಲೋಕಾಯುಕ್ತ ನ್ಯಾಯಮೂರ್ತಿಗಳಾದ ಬಿ.ವೀರಪ್ಪ ನವರು ಪ್ರಶಂಸಿದರು.
ಸಭೆಯಲ್ಲಿ ಕರ್ನಾಟಕ ಲೋಕಾಯುಕ್ತ ಉಪನಿಬಂಧಕ ಅರವಿಂದ ಎನ್.ವಿ., ತುಮಕೂರು ಲೋಕಾಯುಕ್ತ ಪೆÇಲೀಸ್ ಅಧೀಕ್ಷಕ ಲಕ್ಷ್ಮೀನಾರಾಯಣ, ಅಪರ ಜಿಲ್ಲಾಧಿಕಾರಿ ಡಾ: ಎನ್.ತಿಪ್ಪೇಸ್ವಾಮಿ, ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಸಂಜೀವಪ್ಪ, ಮಧುಗಿರಿ ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ತಹಸಿಲ್ದಾರ್ ಶ್ರೀನಿವಾಸ ಸೇರಿದಂತೆ
