Screenshot 20251121 1912062

ಲೋಕಾಯುಕ್ತ: ಗ್ರಾಮಪಂಚಾಯತಿ‌ ಸದಸ್ಯೆ ಯ ರಸ್ತೆ ಒತ್ತುವರಿ – ಕಾಂಪೌಂಡ್ ತೆರವಿಗೆ‌ ಗಡವು….!

DISTRICT NEWS ತುಮಕೂರು
  • PDO ಶ್ರೀರಾಮನಾಯಕ್‌ಗೆ ಲೋಕಾಯುಕ್ತ ನ್ಯಾಯಮೂರ್ತಿಗಳ‌ ತರಾಟೆ
  • ಸುಳ್ಳು ಹೇಳಿ ತಗಲಾಕಿಕೊಂಡ PDO
  • ರಸ್ತೆ-ಯ ಕಾಂಪೌಂಡ್ ತೆರವು-  ಅಕ್ರಮ ಇ- ಸ್ವತ್ತು ತನಿಖೆ ಗೆ EO   ಸಮ್ಮತಿ

ಪಾವಗಡ, ಸಿರಾ, ಮತ್ತು ಮಧುಗಿರಿ ತಾಲೂಕುಗಳಿಗೆ ಸಂಬಂಧಿಸಿದ ಪ್ರಕರಣ ಗಳಲ್ಲಿ 140 ಪ್ರಕಣಗಳ ವಿಚಾರಣೆ ವಿಲೇವಾರಿ  ಮಧುಗಿರಿ  ಪಟ್ನಟಣ ದ ಕನ್ನಡ ಭವನ ದಲ್ಲಿ ನಡೆಯಿತು.

ಪಾವಗಡ  ಪ್ರಕರಣಗಳು : 

ಪಾವಗಡ ತಾಲ್ಲೂಕಿನ ಸಾರ್ವಜನಿಕ ಹಿತಾಸಕ್ತಿ ಯುಳ್ಳ ಮೂರು ಪ್ರಕರಣಗಳು ಪ್ರಮುಖ ವಾಗಿದ್ದವು. ಈ ಮೂರು ಪ್ರಕರಣಗಳು ವೈ ಎನ್ ಹೊಸಕೋಟೆ  ಹೋಬಳಿ ಗೆ ಸಂಬಂಧಿಸಿದ ಪ್ರಕರಣಗಳು.

  • ಆಕರ್ಷಣಿ ಫ್ರೌಢಶಾಲೆ ಮಕ್ಕಳ ದುಸ್ಥಿತಿ
  •  ಗ್ರಾಮಪಂಚಾಯತಿ ಸದಸ್ಯೆ ಸರ್ಕಾರಿ ರಸ್ತೆ ಗಳ ಒತ್ತುವರಿ- ಕಾಂಪೌಡ್ ನಿರ್ಮಾಣ
  • ಕೋಟೇಶ್ವವರ ದೇವಸ್ಥಾನ ( ಸರ್ಕಾರಿ ) ಜಮೀನುಒತ್ತುವರಿಪ್ರಕರಣ.

ಸರ್ಕಾರಿ ರಸ್ತೆ ಒತ್ತುವರಿ ಮತ್ತು ಕಾಂಪೌಡ್ ನಿರ್ಮಾಣ :

ವೈ. ಎನ್ ಹೊಸಕೋಟೆ ಡಿ ಬ್ಲಾಕ್ ನ Assessment No 2421/1549 ಮತ್ತು 2415/1543 ನ ಎರಡು ಸರ್ಕಾರಿ ರಸ್ತಗಳನ್ನು ಸಂಪೂರ್ಣವಾಗಿ ಒತ್ತುವರಿ ಮಾಡಿಕೊಂಡು ಕಾಂಪೌಡ್ ನ್ನು ಹಾಲಿ ಗ್ರಾಮಪಂಚಾಯತಿ ಸದಸ್ಯೆ ಕಾಮಾಕ್ಷಮ್ನ ಮತ್ತು ಡಾನ್ ಸೀನ್ ಅಲಿಯಾಸ್ ಶ್ರೀನಿವಾಸ ಕಟ್ಟಿದ್ದಾರೆ ಜೊತೆಗೆ ತಮ್ಮ ವಾಸದ ಮನೆ ಯ ವಿಸ್ತೀರ್ಣಕ್ಕೆ ಸರ್ಕಾರಿ ರಸ್ತೆಯ ವಿಸ್ತೀರ್ಣ ವನ್ನು ಸೇರಿಸಿ   ಇ- ಸ್ವತ್ತು ಮಾಡಿಸಿಕೊಂಡಿದ್ದಾರೆ ಎಂಬ ಆರೋಪ‌ ಇವರ ಮೇಲಿದೆ

ಲೋಕಾಯುಕ್ತದ ಪ್ರಕರಣ ಕ್ಕೆ‌ ಅಂತ್ಯವಾಡಲು ದೂರು ದಾರ ಅಜಿತ್ ಕುಮಾರ್‌ ಅವರ‌ ನಿವೇಶನವನ್ನು‌ ಡಾನ್ ಸೀನ ಖರೀದಿಸಿದ್ದಾನೆ. ಲೊಕಾಯುಕ್ತದಲ್ಲಿ ಒಮ್ನೆ ಪ್ರಕರಣ ದಾಖಲು‌ ಮಾಡಿದರೆ ದೂರು ದಾರನಿಗೂ ವಾಪಸ್ಸು ಪಡೆಯುವ ಆಧಿಕಾರ‌  ಇರುವುದಿಲ್ಲ. . ಎಂಬ ಸಾಮಾನ್ಯ ಜ್ಞಾನ ಇವರಿಗೆ ಇಲ್ಲ. ಮತ್ತು  ಹಣ ವಿದೆ ಎಂದು‌ ರಸ್ತೆ ಯ ಅಕ್ಕ – ಪಕ್ಕದ ನಿವೇಶಗಳನ್ಬು ಖರೀದಿಸಿದರು‌ ಸಾರ್ವಜನಿಕ ರಸ್ತೆ ಒತ್ತುವರಿ ಮಾಡಲು – ರಸ್ತೆ ಗೆ ಕಾಂಪೌಡ್‌ ನಿರ್ಮಾಣ‌ ಮಾಡಲು ಕಾನೂನಿಲ್ಲಿ‌ ಅವಕಾಶವಿಲ್ಲ. ಸಾರ್ವಜನಿಕ ರಸ್ತೆ ಸದಾ ಸಾರ್ವಜನಿಕರು ಓಡಾಟ ಕ್ಕೆ  ಮುಕ್ತ ಅವಕಾಶ ಇರಬೇಕು.

ಲೋಕಾಯುಕ್ತ ಪ್ರಕರಣ :

ವೈ.ಎನ್ ಹೊಸಕೋಟೆ PDO ಶ್ರೀರಾಮನಾಯಕ್ ಅವರಿಗೆ ಈ ರಸ್ತೆ ಗೆ ಹೊಂದಿಕೊಂಡ ನಿವೇಶನ ದಾರರು ಒತ್ತುವರಿ ತೆರವು ಗೊಳಿಸುವಂತೆ ಹಲವಾರು ಬಾರಿ ಮನವಿ ಸಲ್ಲಿಸಿದರು  ಜಿಲ್ಲಾಪಂಚಾಯತಿ ಯಿಂದ ಪತ್ರ ಬಂದರು PDO ಕ್ರಮ ವಹಿಸದ ಹಿನ್ನೆಲೆಯಲ್ಲಿ ಲೋಕಾಯುಕ್ತದಲ್ಲಿ ಈ ರಸ್ತೆ  ಒತ್ತುವರಿ ಮತ್ತು ಅಕ್ರಮ ಇ-ಸ್ವತ್ತು ಮಾಡಿರುವ ಸಬಂಧ 3  ಪ್ರಕರಣಗಳು ದಾಖಲಾಗಿವೆ.

ಲೋಕಾಯುಕ್ತ ಕ್ಕೆ ಸುಳ್ಳು ವರದಿ ನೀಡಿದ PDO :

ಲೋಕಾಯುಕ್ತದಲ್ಲಿ ದಾಖಲಾದ ಮೂರು ಪ್ರಕರಣಗಳ ಪೈಕಿ ಅಜಿತ್ ಕುಮಾರು ನೀಡಿದ್ದ ಪ್ರಕರಣದ ವಿಚಾರಣೆ ಮಧುಗಿರಯಲ್ಲಿ ನಡೆಯಿತು.

ವಿಚಾರಣೆ ಗೆ ಹಾಜರಾದ PDO ಶ್ರೀರಾಮನಾಯಕ್ ಲೋಕಾಯುಕ್ತ ನ್ಯಾಯಮೂರ್ತಿ ಗಳನ್ಬು ಯಾಮಾರಿಸಲು ಮುಂದಾದರು ( ಸುಳ್ಳು)  ಹೇಳಲು ಮುಂದಾಗುತ್ತಾರೆ

PDO ಡ್ರಾಮ :

ಈ ಹಿಂದೆ ಒತ್ತುವರಿ ಯಾದ ರಸ್ತೆ ಕಂಪೌಡ್ ಬಳಿ ಬಂದು ಗೇಟ್ ತೆಗಲು ಡಾನ್ ಸೀನ ನಿಗೆ  ತಿಳಿಸಿ ತೆಗೆದ ನಂತರ ಗೇಟ್ ಮುಂದೆ PDO ಮತ್ತು EO ಜಾನಕೀರಾಮ್ ಬಂದು PHOTO ತೆಗಸಿಕೊಂಡು ಹೋಗಿ ಲೋಕಾಯುಕ್ತಕ್ಜೆ  ತೆರವು ಗೊಳಿಸಿದ್ದೇವೆ ಎಂಬ ಸುಳ್ಳು ವರದಿಯನ್ನು ಸಲ್ಲಿಸುತ್ತಾರೆ.

ಡಾನ್ ಸೀನ ಕುಟುಂಬ  ರಸ್ತೆ  ಗೆ ಕಾಂಪೌಡ್ ಗೇಟ್ ನ್ನು ಮತ್ತೆ. ಇಡುತ್ತಾರೆ ಮತ್ತೆ ಗೇಟ್ ಇಡುವ.  ಸಂಧರ್ಭದಲ್ಲಿ ಹಲವಾರು ಬಾರಿ  PDO ಗೆ ಮೌಖಿಕವಾಗಿ ತಿಳಿಸಿದರು ಶ್ರೀರಾಮ ನಾಯಕ್ ಕ್ರಮ ಕೈಗೊಳ್ಳುವುದಿಲ್ಲ ಆದರೆ ಲೋಕಾಯುಕ್ತರಿಗೆ ರಸ್ತೆ ಮತ್ತು ಕಾಂಪೌಡ್ ತೆರವುಗೊಳಿಸಿದ್ದೇವೆ ಎಂದು ಸುಳ್ಳು ಹೇಳಲು ಮುಂದಾಗುತ್ತಾರೆ.IMG 20251121 111809 936

PDO ಶ್ರೀರಾಮ ನಾಯಕ್ ಗೆ ಲೋಕಾಯುಕ್ತರ ತರಾಟೆ:

ಲೋಕಾಯುಕ್ತ ದಲ್ಲಿ  ಅಜಿತ್ ಕುಮಾರ್ ಪ್ರಕರಣ ವಿಚಾರಣೆ ಸಂಧರ್ಭದಲ್ಲಿ  PDO ಅವರು ತೆರವು ಗೊಳಿಸಿದ್ದೇವೆ ಎಂದು‌ ಸುಳ್ಳು ಹೇಳುತ್ತಿದ್ದ ಸಂಧರ್ಭದಲ್ಲಿ‌  ಈ ರಸ್ತೆ ಗೆ ಸಂಭಂದಿಸಿದಂತೆ ಇನ್ನು‌ ಎರಡು ಪ್ರಕರಣ ದಾಖಲಿಸಿದ್ದ ದೂರುದಾರು  ಹಾಜರಿದ್ದು PDO ಶ್ರೀರಾಮನಾಯಕ್ ನಿಜ ಬಣ್ಣವನ್ನು ಲೋಕಾಯುಕ್ರರ ಮುಂದೆ ಬಯಲು ಮಾಡುತ್ತಾರೆ

ಸುಳ್ಳಿನ ಕಥೆ ಕೇಳಿದ ತಕ್ಷಣ  ಗರಂ ಆದ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ ವೀರಪ್ಪ ನವರು ವೈ ಎನ್ ಹೊಸಕೋಟೆ ಪೋಲೀಸರಿಗೆ  ತಕ್ಷಣ ದೂರಿನಲ್ಲಿ ಉಲ್ಲೇಖಿ ರಸ್ತೆ ಬಳಿ ಹೋಗಿ Video ಕಾಲ್ ಮಾಡಿ ತೋರಿಸಿ ಇಲ್ಲ PHOTO ತೆಗೆದುಕಳುಹಿಸಲು ಪಕ್ಕದಲ್ಲಿ‌ ಇದ್ದ ಹಿರಿಯ ಪೋಲೀಸ್ ಅಧಿಕಾರಿಗಳಿ ಗೆ ನಿರ್ದೇಶನ ನೀಡುತ್ತಾರೆ.

ಈ ರೀತಿ ನ್ಯಾಯಮೂರ್ತಿ ಗಳು ಆದೇಶಿಸುತ್ತಿದ್ದಂತೆ ತಬ್ಬಿಬ್ಬಾಗುತ್ತಾರೆ  PDO ಶ್ರೀರಾಮನಾಯಕ್, ಕೆಲವತ್ತಿನಲ್ಲೆ Live PHOTo ಬರುತ್ತದೆ.PDO ಸಾಹೇಬರ ಕಳ್ಳಾಟ ಬಯಲಾಗುತ್ತದೆ.

ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ ವೀರಪ್ಪ  ನವರಿಗೆ ಸ್ಥಳ‌ ಪರಿಶೀಲನೆ ನಡೆಸಿ ರಸ್ತೆ ಗಳ ಒತ್ತುವರಿ ತೆರವು ಗೊಳಿಸುತ್ತೇನೆ ಮತ್ತು ಅಕ್ರಮ ವಾಗಿ ಇ- ಸ್ವತ್ತು ಮಾಡಿದ್ದರೆ ತನಿಖೆ ಮಾಡಿ ರದ್ದುಪಡಿಸುತ್ತೇನೆ ಎಂದು ಪಾವಗಡ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಉತ್ತಮ್ ಅವರು ತಿಳಿಸಿದ್ದಾರೆ.

ಡಾನ್ ಸೀನ ಕ್ರಿಮಿನಲ್ ಹಿನ್ನಲೆ‌ ಇರುವ ವ್ಯಕ್ತಿ ಆದ್ದರಿ.ದ ಪೋಲಿಸ್ ಭದ್ರತೆ ಪಡೆದು‌ ಕಾರ್ಯನಿರ್ವಹಿಸುವಂತೆ ತೀರ್ಮಾನ ಮಾಡುತ್ತಾರೆ.

ಗ್ರಾಮಪಂಚಾಯತಿ ಸದಸ್ಯರಾಗುವುದು ಜನರ ಸೇವೆ ಮಾಡಲು ಹೊರತು ಸರ್ಕಾರಿ‌ ರಸ್ತೆ ಬೇರೆಯವರ ನಿವೇಶನ ಕಬಳಿಸಲು‌ ಅಲ್ಲ.

ಮಾಜಿ ಗ್ರಾಮಪಂಚಾಯತಿ  ಸದಸ್ಯ ಡಾನ್ ಸೀನ  ಮತ್ತು ಆತನ ಸತಿಮಣಿ ಹಾಲಿ ಗ್ರಾಮಪಂಚಾಯತಿ ಸದಸ್ಯೆ  ಕಾಮಾಕ್ಷಮ್ಮ ನವರು ಸರ್ಕಾರ  ದ ಎರಡು ಸಾರ್ವಜನಿಕ ರಸ್ತೆ ಒತ್ತುವರಿ ಮಾಡಿಕೊಂಡು‌    ಆ ರಸ್ತೆ ಗಳಿಗೆ ಕಾಂಪೌಂಡ್  ಹಾಕಿಕೊಳ್ಳಲು ಹಾಗೂ ಬೇರೆಯವರ ನಿವೇಶನ ಗಳ ವಿಸ್ತೀರ್ಣ ಕಬಳಿಸಿ ಇ- ಸ್ವತ್ತು ಮಾಡಿಸಿಕೊಳ್ಳಲು ಇವರು ಗ್ರಾಮ ಪಂಚಾಯತಿ ಸದಸ್ಯ ರಾಗಿದ್ದಾರೆ ಎಂಬ ಅಂಶ‌ ಬೆಳಕಿಗೆ‌ ಬಂದಿದೆ.ಇಂತಹ ಸದಸ್ಯ ರಿ ಗೆ PDO ಗಳು ಸಾಥ್ ನೀಡುತ್ತಿದ್ದಾರೆ.

ಇವರಿಗೆ ಮತ ನೀಡಿದ ವೈ ಎನ್ ಹೊಸಕೋಟೆ ಡಿ ಬ್ಲಾಕ್ ಮತದಾರರು ಎಂತಹ ವ್ಯಕ್ತಿ ಗೆ  ಮತ ನೀಡಿದ್ದೇವೆ ಎಂದು ಒಮ್ಮೆ ಯೋಚಿಸುವ ಕಾಲ ಬಂದಿದೆ ಅಲ್ಲವೆ….?