ಭೀಕರ ರಸ್ತೆ ಅಪಘಾತ: ಇನೋವಾ ಕಾರು ಚಾಲಕ ಸಾವು.
ಪಾವಗಡ : ಎ.ಪಿ.ಎಸ್. ಆರ್. ಟಿ. ಸಿ ಮತ್ತು ಇನೋವಾ ಕಾರು ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರು ಚಾಲಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲ್ಲೂಕಿನ ಕಡಮಲಕುಂಟೆ ಕೈಗಾರಿಕಾ ಪ್ರದೇಶದ ತಿರುವಿನ ಬಳಿ ಶನಿವಾರ ಬೆಳಿಗ್ಗೆ ನಡೆದಿದೆ.
ತಾಲ್ಲೂಕಿನ ಮೇಡಿಹಳ್ಳಿ ಗ್ರಾಮದ ಚಂದ್ರಶೇಖರ್ ರೆಡ್ಡಿ (45) ಮೃತ ಕಾರು ಚಾಲಕ.ಪಾವಗಡ ದಿಂದ ಆಂಧ್ರ ಪ್ರದೇಶದ ಧರ್ಮವರಂಗೆ ಹೋಗುತ್ತಿದ್ದಇನೋವಾ ಕಾರು ಮತ್ತು ಪೆನುಕೊಂಡದಿಂದ ಪಾವಗಡದ ಕಡೆ ಬರುತ್ತಿದ್ದ ಎ.ಪಿ.ಎಸ್.ಆರ್.ಟಿ.ಸಿ ಬಸ್ ನಡುವೆ ಕಡಮಲಕುಂಟೆ ಕೈಗಾರಿಕಾ ಪ್ರದೇಶದ ತಿರುವಿನ ಬಳಿ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು. ಅಪಘಾತದ ರಭಸಕ್ಕೆ ಇನೋವಾ ಕಾರು ನುಜ್ಜು ನುಜ್ಜಾಗಿ ಹೋಗಿದೆ.
ಬಸ್‌ನಲ್ಲಿ ಸುಮಾರು 30 ಪ್ರಯಾಣಿಕ್ಕೂ ಹೆಚ್ಚಿನ
ಪ್ರಯಾಣಿಕರಿದ್ದು ಚೆನ್ನೆಕೊತಪಲ್ಲಿ ಬಲರಾಮ್ ರೆಡ್ಡಿ ಮತ್ತು ಪೆನುಕೊಂಡ ರಂಗಮ್ಮ ಗಂಭೀರವಾಗಿ ಗಾಯಗೊಂಡಿದ್ದು. ಕೆಲ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು. ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.
ವಿಷಯ ತಿಳಿದ ನಂತರ ಪಾವಗಡ ಠಾಣೆಯಸಿ. ಐ ಸುರೇಶ್ ಮತ್ತು ಸಿಬ್ಬಂದಿ ವರ್ಗದವರು ಕೇಸ್ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.
ವರದಿ : ಎ.ಶ್ರೀನಿವಾಸಲು. ಪಾವಗಡ
