ಆತ್ಮಸ್ಥೈರ್ಯದಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಎದುರಿಸಿ, ಕ್ಷೇತ್ರ ಶಿಕ್ಷಣಾಧಿಕಾರಿ ರೇಣುಕಮ್ಮ.
ಪಾವಗಡ : ಎಸ್.ಎಸ್.ಎಲ್.ಸಿ ಪರೀಕ್ಷೆಯು ಜೀವನದ ಒಂದು ಸಾಮಾನ್ಯ ಹಂತವಾಗಿದ್ದು, ಯಾವುದೇ ಆತಂಕವಿಲ್ಲದೆ ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ರೇಣುಕಮ್ಮ ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಓದಿದ್ದನ್ನು ಪುನರ್ಮನನ ಮಾಡಿ, ಧನಾತ್ಮಕ ಚಿಂತನೆ, ಸಮರ್ಪಕ ಸಮಯದ ಯೋಜನೆ, ಮತ್ತು ಆರೋಗ್ಯಕರ ಆಹಾರದ ಮೂಲಕ ಉತ್ತಮ ಅಂಕಗಳನ್ನು ಪಡೆಯಬಹುದೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಎಸ್. ಎಸ್. ಎಲ್. ಸಿ ಪರೀಕ್ಷೆ ಮಾರ್ಚ್18ರಿಂದ ಏಪ್ರಿಲ್ 2ರವರೆಗೆ ರಾಜ್ಯದಾದ್ಯಂತ ನಡೆಯಲಿದ್ದು. ಎಸ್.ಎಸ್.ಎಲ್.ಸಿ ಪರೀಕ್ಷೆಗೆ ತಾಲೂಕಿನಾದ್ಯಂತ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು
ತಾಲೂಕಿನಲ್ಲಿ ಈ ಬಾರಿ 1677 ಬಾಲಕರು, 1417 ಬಾಲಕಿಯರು ಒಟ್ಟು 3094 ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆಗೆ ನೊಂದಣಿಯಾಗಿದದ್ದು. ಸಿ.ಸಿ.ಇ.ಆರ್‌ಎಫ್.2498. ಸಿಸಿ ಇ ಆರ್ ಆರ್ ಆರ್ 544 , ಸಿ.ಸಿ. ಇ ಪಿ.ಎಫ್ 46, ಸಿ.ಸಿ.ಇ.ಪಿ ಆರ್ 06 ವಿದ್ಯಾರ್ಥಿಗಳ ನೋಂದಣಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ತಾಲೂಕಿನಾದ್ಯಂತ 12 ಪರೀಕ್ಷಾ ಕೇಂದ್ರ ಗಳು ಸ್ಥಾಪಿಸಲಾಗಿದ್ದು, ಅದರಲ್ಲಿ ಪಟ್ಟಣ ಪ್ರದೇಶದಲ್ಲಿ 3 ಹಾಗೂ ಗ್ರಾಮೀಣ ಪ್ರದೇಶ ದಲ್ಲಿ 9 ಕೇಂದ್ರಗಳು ಕಾರ್ಯ ನಿರ್ವ ಹಿಸಲಿವೆ ಎಂದು ತಿಳಿಸಿದರು.
ಪರೀಕ್ಷಾ ಪಾವಿತ್ರತೆ ಯನ್ನು ಕಾಪಾಡುವ ನಿಟ್ಟಿನಲ್ಲಿ12 ಪರೀಕ್ಷೆ ಕೇಂದ್ರಗಳಲ್ಲಿ ಸಿಸಿಟಿವಿ ವೆಬ್ ಕ್ಯಾಸ್ಟಿಂಗ್ ಅಳವಡಿಸಲಾಗಿದ್ದು ಪ್ರತಿ ಪರೀಕ್ಷೆ ಕೇಂದ್ರದಲ್ಲಿ ಸಿಸಿಟಿವಿ ವೀಕ್ಷಣೆಗೆ ಒಬ್ಬ ಅಧಿಕಾರಿಯನ್ನು ನೇಮಿಸಿದ್ದು, ತುಮಕೂರಿನ ಜಿಲ್ಲಾ ಪಂಚಾಯಿತಿಯಲ್ಲಿ ಜಿಲ್ಲಾ ಹಂತದಲ್ಲಿ ಸಿ.ಸಿ.ಟಿ.ವಿ ವೀಕ್ಷಣೆಗೆ ಅಧಿಕಾರಿಗಳು ನೇಮಕಗೊಂಡಿದ್ದಾರೆ ಎಂದರು.
ತಾಲೂಕು ಹಂತದಲ್ಲಿ ತಹಶೀಲ್ದಾರ್ ನೇತೃತ್ವದ ಜಾಗೃತ ದಳ,
ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ನೇತೃತ್ವದ ಜಾಗೃತದಳ, ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದ ಜಾಗೃತದಳದ ತಂಡ ರಚನೆ ಮಾಡಲಾಗಿದೆ ಎಂದು.
ಮಕ್ಕಳ ಹಿತ ದೃಷ್ಟಿಯಿಂದ, ಪರೀಕ್ಷಾ ಕೇಂದ್ರಗಳಿಗೆ ಆರೋಗ್ಯ ಸಹಾಯಕ ಸಿಬ್ಬಂದಿಗಳನ್ನು, ಕಳಿಸಿಕೊಡುವಂತೆ ತಾಲೂಕು ವೈದ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದರು.
ಪ್ರತಿ ಪರೀಕ್ಷಾ ಕೇಂದ್ರಕ್ಕೆ ಭದ್ರತೆಗಾಗಿ ಇಬ್ಬರು ಆರಕ್ಷಕರನ್ನು ಕಳುಹಿಸುವಂತೆ ಪೊಲೀಸ್ ಇಲಾಖೆಗೆ ಮನವಿ ಮಾಡಲಾಗಿದೆ ಎಂದರು.
ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ನೋಂದಣಿ ಸಂಖ್ಯೆ ಬರೆಯುತ್ತಿರುವ ಶಿಕ್ಷಕ ವರ್ಗ
ವರದಿ : ಶ್ರೀನಿವಾಸಲು ಎ
