ನಾಯಿಗಳು ದಾಳಿ: 20 ಕುರಿಮರಿಗಳು ಸಾವು.
ಪಾವಗಡ: ನಾಯಿಗಳು ದಾಳಿ ನಡೆಸಿದ ಪರಿಣಾಮ 20 ಕುರಿಮರಿ ಗಳು ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಕ್ಯಾತಗಾನಚೆರ್ಲುದಲ್ಲಿ ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದೆ.
ಗ್ರಾಮದ ಚಾಕಲಿ ವೆಂಕಟೇಶ್ಎಂಬುವವರಿಗೆ ಸೇರಿದ ಕುರಿಮರಿಗಳು ಕೊಟ್ಟಿಗೆಯಲ್ಲಿ ಇದ್ದ ವೇಳೆ ನಾಯಿಗಳು ದಾಳಿ ನಡೆಸಿಕೊಂದು ಹಾಕಿವೆ. ಘಟನೆಯಿಂದ ಕುರಿಗಾಹಿ ಬೆಚ್ಚಿ ಬಿದ್ದಿದ್ದು, ಘಟನೆ ಹಿನ್ನಲೆ ತೀವ್ರ ನಷ್ಟ ಉಂಟಾಗಿದೆ.
ಜೀವನಾಧಾರಕ್ಕಾಗಿ ಸಾಲ ಮಾಡಿ ಕುರಿಗಳನ್ನು ಸಾಕುತ್ತಿದ್ದು,
ಚಾಕಲಿ ವೆಂಕಟೇಶ್ ಅವರಿಗೆ ಇತ್ತೀಚಿಗೆ ಪಾರ್ಶ್ವವಾಯುವಿನಿಂದ ಬಳಯುತ್ತಿದ್ದು, ಹೆಂಡತಿಯು ಕುರಿಗಳನ್ನು ಮೇಯಿಸುತ್ತಾ ಜೀವನವನ್ನು ಸಾಗಿಸುತ್ತಿದ್ದರು.
ವಿಷಯ ತಿಳಿದ ನಂತರ ಪಶು ವೈದ್ಯಾಧಿಕಾರಿ ಮೇಘನಾ ಸಂಘಟನಾ ಸ್ಥಳಕ್ಕೆ ಭೇಟಿ ನೀಡಿ, ಮರಣ ಹೊಂದಿದ ಕುರಿ ಮರಿಗಳಾಗಿ ಪೋಸ್ಟ್ ಮಾರ್ಟನ್ ನಿರ್ವಹಿಸಿದರು.
ಸರ್ಕಾರವು ಈ ಕೂಡಲೇ ಕುರಿಗಾಹಿ ಕುಟುಂಬಕ್ಕೆ ಸಹಾಯ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ವರದಿ: ಶ್ರೀನಿವಾಸಲು. ಎ
