IMG 20240918 WA0000

ಬೆಂಗಳೂರು : ಡಾ. ಅಗರ್ವಾಲ್ಸ್ ಐ ಹಾಸ್ಪಿಟಲ್‍ನ ಮೊದಲ ಐ ಕ್ಲಿನಿಕ್ ಆರಂಭ….!

BUSINESS

ಡಾ. ಅಗರ್ವಾಲ್ಸ್ ಐ ಹಾಸ್ಪಿಟಲ್‍ನ ಮೊದಲ ಐ ಕ್ಲಿನಿಕ್ ಬೆಂಗಳೂರಿನ ಕೆಂಗೇರಿಯಲ್ಲಿ ಆರಂಭ

• 31 ಅಕ್ಟೋಬರ್ 2024 ರ ವರೆಗೆ ಸಾರ್ವಜನಿಕರಿಗೆ ಉಚಿತ ಕಣ್ಣಿನ ತಪಾಸಣೆ

ಬೆಂಗಳೂರು, 18 ಸೆಪ್ಟೆಂಬರ್ 2024: ಸಮಗ್ರ ಕಣ್ಣಿನ ಆರೈಕೆ ಸೇವೆಗಳನ್ನು ಒದಗಿಸುವ ಭಾರತದ ಪ್ರಮುಖ ಆಸ್ಪತ್ರೆಗಳಲ್ಲಿ ಒಂದಾಗಿರುವ ಡಾ. ಅಗರ್ವಾಲ್ಸ್ ಗ್ರೂಪ್ ಆಫ್ ಐ ಹಾಸ್ಪಿಟಲ್ಸ್ ಇಂದು ತನ್ನ ಪ್ರಥಮ ಐ ಕೇರ್ ಸೆಂಟರ್ ಡಾ. ಅಗರ್ವಾಲ್ಸ್ ಐ ಕ್ಲಿನಿಕ್ ಅನ್ನು ಬೆಂಗಳೂರಿನ ಕೆಂಗೇರಿಯಲ್ಲಿ ತೆರೆಯುವುದಾಗಿ ಘೋಷಿಸಿದೆ. ಈ ಹೊಸ ಘಟಕವು ವಿಶೇಷ ಹಾಗೂ ಸಮಗ್ರ ಕಣ್ಣಿನ ಆರೈಕೆಯನ್ನು ಸ್ಥಳೀಯ ಸಮುದಾಯಕ್ಕೆ ಕೈಗೆಟಕುವ ದರದಲ್ಲಿ ಒದಗಿಸುತ್ತದೆ.
ಕ್ಲಿನಿಕ್ ಅನ್ನು ಶಾಸಕ ಶ್ರೀ ಎಸ್‍ಟಿ ಸೋಮಶೇಖರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಉದ್ಘಾಟನೆ ಮಾಡಿದರು ಮತ್ತು ಇವರ ಜೊತೆಗೆ ಬೆಂಗಳೂರು ಪಶ್ಚಿಮ ವಿಭಾಗದ ಡೆಪ್ಯುಟಿ ಪೆÇಲೀಸ್ ಕಮೀಷನರ್ ಎಸ್ ಗಿರೀಶ್ ಭಾಗವಹಿಸಿದ್ದರು. ಅಲ್ಲದೆ, ಮಾವೆರಿಕ್ ರೋಟರಿ ಕೆಂಗೇರಿ ಉಪನಗರದ ವೊಕೇಶನಲ್ ಸರ್ವೀಸ್ ಡೈರೆಕ್ಟರ್ ಮತ್ತು ಸಿಎಸ್‍ಆರ್ ಶ್ರೀ ಎಚ್ ಸೀತಾರಾಮ ಶರ್ಮಾ, ಮಾವೆರಿಕ್ ರೋಟರಿ ಕೆಂಗೇರಿ ಉಪನಗರದ ಅಧ್ಯಕ್ಷ ಶ್ರೀ ವಾಸು ಪ್ರಸಾದ್, ಮಾವೆರಿಕ್ ರೋಟರಿ ಕೆಂಗೇರಿ ಉಪನಗರದ ಸಮುದಾಯ ಸೇವೆ ನಿರ್ದೇಶಕಿ ಸ್ನೇಹಾ ಸುರೇಶ್, ಡಾ. ಅಗರ್ವಾಲ್ಸ್ ಐ ಹಾಸ್ಪಿಟಲ್ಸ್‍ನ ಕ್ಲಿನಿಕಲ್ ಸರ್ವೀಸಸ್‍ನ ಪ್ರಾದೇಶಿಕ ಮುಖ್ಯಸ್ಥ ಡಾ. ಶ್ರೀಪತಿ ಡಿ.ಕೆ. ಮತ್ತು ಡಾ. ಅಗರ್ವಾಲ್ಸ್ ಗ್ರೂಪ್ ಆಫ್ ಹಾಸ್ಪಿಟಲ್ಸ್‍ನ ಕಾರ್ಯಾಚರಣೆಗಳು ಮತ್ತು ವಹಿವಾಟು ವಿಭಾಗದ ಎವಿಪಿ ಶ್ರೀ ಧೀರಜ್ ಇ.ಟಿ ಭಾಗವಹಿಸಿದ್ದರು.

IMG 20240918 WA0001
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ಅತಿಥಿ ಶ್ರೀ ಎಸ್ ಟಿ ಸೋಮಶೇಖರ್ “ಈ ಹೊಸ ಕ್ಲಿನಿಕ್ ಅನ್ನು ಉದ್ಘಾಟನೆ ಮಾಡುತ್ತಿರುವುದು ನನಗೆ ಸಂತೋಷ ತಂದಿದೆ. ಈ ರೀತಿಯ ಸೌಲಭ್ಯಗಳು ಬೆಂಗಳೂರಿನ ಆರೋಗ್ಯಸೇವೆ ವಲಯವನ್ನು ಇನ್ನಷ್ಟು ಸುಧಾರಿಸುತ್ತದೆ. ತಮ್ಮ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಜನರಿಗೆ ಸಹಾಯ ಮಾಡುತ್ತದೆ. ಜೀವನದ ಪ್ರತಿ ಹಂತದಲ್ಲೂ ಕಣ್ಣಿನ ಆರೋಗ್ಯವು ಮುಖ್ಯವಾಗಿದೆ ಮತ್ತು ದೃಷ್ಟಿ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಆಗಾಗ್ಗೆ ತಪಾಸಣೆ ಮಾಡಿಸಿಕೊಳ್ಳುತ್ತಿರಬೇಕು.”
ಕೆಂಗೇರಿಯಲ್ಲಿನ ಡಾ. ಅಗರ್ವಾಲ್ಸ್ ಐ ಕ್ಲಿನಿಕ್ ಸುಧಾರಿತ ತಂತ್ರಜ್ಞಾನವನ್ನು ಹೊಂದಿದೆ ಮತ್ತು ಸಮಗ್ರ ಕಣ್ಣಿನ ಆರೋಗ್ಯ ಸೇವೆಯನ್ನು ಒದಗಿಸುತ್ತದೆ. ನಿಖರ ಕಣ್ಣು ಒತ್ತಡ ಮಾಪನ, ರಿಫ್ರಾಕ್ಷನ್ ಟೆಸ್ಟಿಂಗ್, ವಿಶುವಲ್ ಆಕ್ಯೂಯಿಟಿ ತಪಾಸಣೆ, ಕ್ಯಾಟರ್ಯಾಕ್ಟ್ ಸಮಸ್ಯೆ ಪತ್ತೆಯನ್ನು ಇದು ಮಾಡುತ್ತದೆ. ಉದ್ಘಾಟನೆಯ ಹಿನ್ನೆಲೆಯಲ್ಲಿ 2024 ಅಕ್ಟೋಬರ್ 31 ರ ವರೆಗೆ ಜನಸಾಮಾನ್ಯರಿಗೆ ಉಚಿತ ಕಣ್ಣಿನ ತಪಾಸಣೆಯನ್ನು ಕ್ಲಿನಿಕ್‍ನಲ್ಲಿ ನಡೆಸಲಾಗುತ್ತದೆ. ಆಯ್ದ ಫ್ರೇಮ್‍ಗಳಲ್ಲಿ ವಿಶೇಷ ಬೈ ಒನ್ ಗೆಟ್ ಒನ್ ಆಫರ್ ಅನ್ನು ನೀಡಲಾಗುತ್ತದೆ. ಯಾರು ಬೇಕಾದರೂ ಕ್ಲಿನಿಕ್‍ಗೆ ಬಂದು ಉಚಿತವಾಗಿ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳಬಹುದಾಗಿದೆ.

ಡಾ. ಅಗರ್ವಾಲ್ಸ್ ಐ ಹಾಸ್ಪಿಟಲ್ಸ್‍ನ ಕ್ಲಿನಿಕಲ್ ಸರ್ವೀಸಸ್‍ನ ಪ್ರಾದೇಶಿಕ ಮುಖ್ಯಸ್ಥ ಡಾ. ಶ್ರೀಪತಿ ಡಿ.ಕೆ ಮಾತನಾಡಿ “ಡಾ. ಅಗರ್ವಾಲ್ಸ್ ಐ ಕ್ಲಿನಿಕ್ ಅನ್ನು ಕೆಂಗೇರಿಯಲ್ಲಿ ಉದ್ಘಾಟನೆ ಮಾಡಿರುವುದು ಸಮಗ್ರ ಕಣ್ಣು ಆರೋಗ್ಯ ಸೇವೆಯನ್ನು ಜನರಿಗೆ ಒದಗಿಸಬೇಕು ಎಂಬ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ. ತರಬೇತಿ ಹೊಂದಿರುವ ನೇತ್ರಶಾಸ್ತ್ರಜ್ಞರು ಮತ್ತು ಪರಿಣಿತ ವೈದ್ಯರಿಂದ ಉನ್ನತ ಗುಣಮಟ್ಟದ ಸೇವೆಯನ್ನು ಒದಗಿಸುವುದು ನಮ್ಮ ಗುರಿಯಾಗಿದ್ದು, ಸಮುದಾಯದ ಕಣ್ಣಿನ ಆರೋಗ್ಯ ಸೇವೆ ಅಗತ್ಯಗಳನ್ನು ಈ ಮೂಲಕ ನಾವು ಪೂರೈಸುತ್ತೇವೆ.”
ಡಾ. ಅಗರ್ವಾಲ್ಸ್ ಗ್ರೂಪ್ ಆಫ್ ಐ ಹಾಸ್ಪಿಟಲ್ಸ್‍ನ ಆಪರೇಶನ್ಸ್ ಮತ್ತು ಬ್ಯುಸಿನೆಸ್ ಎವಿಪಿ ಶ್ರೀ ಧೀರಜ್ ಇ.ಟಿ ಮಾತನಾಡಿ “ಬೆಂಗಳೂರಿನಲ್ಲಿ ನಮ್ಮ ಪ್ರಥಮ ಐ ಕೇರ್ ಸೆಂಟರ್ ಅನ್ನು ಉದ್ಘಾಟಿಸುತ್ತಿರುವುದು ಮಹತ್ವದ ಸಾಧನೆಯಾಗಿದೆ. ನಗರದಲ್ಲಿ ಕೈಗೆಟಕುವ ದರದಲ್ಲಿ ಕಣ್ಣಿನ ಆರೈಕೆ ಬೇಡಿಕೆಯನ್ನು ಇದು ಪೂರೈಸುತ್ತದೆ. ಕರ್ನಾಟಕದ ಎಲ್ಲ ಕಡೆ ನಮ್ಮ ಸೇವೆಗಳನ್ನು ವಿಸ್ತರಿಸುತ್ತೇವೆ ಮತ್ತು 2ನೇ ಮತ್ತು 3ನೇ ಹಂತದ ನಗರಗಳಿಗೂ ಕೂಡಾ ಉನ್ನತ ಗುಣಮಟ್ಟದ ಕಣ್ಣಿನ ಆರೈಕೆ ಸೇವೆಗಳನ್ನು ನಾವು ಒದಗಿಸುತ್ತೇವೆ.

ವಲಗೇರಹಳ್ಳಿ, ಜ್ಞಾನಭಾರತಿ, 2ನೇ ಹಂತ, ಕೆಂಗೇರಿ, ಬೆಂಗಳೂರಿನಲ್ಲಿ ಇರುವ ಡಾ. ಅಗರ್ವಾಲ್ಸ್ ಐ ಕ್ಲಿನಿಕ್ ವಿಶಾಲ ಶ್ರೇಣಿಯ ಸೇವೆಗಳನ್ನು ಒದಗಿಸುತ್ತದೆ. ಇದರಲ್ಲಿ ಸಮಗ್ರ ಕಣ್ಣಿನ ತಪಾಸಣೆಗಳು, ಪರಿಣಿತ ವೈದ್ಯರಿಂದ ಸಮಾಲೋಚನೆ, ಕ್ಯಾಟರ್ಯಾಕ್ಟ್ ತಪಾಸಣೆ ಮತ್ತು ವಿವಿಧ ಬ್ರ್ಯಾಂಡೆಡ್ ಆಪ್ಟಿಕಲ್ ಉತ್ಪನ್ನಗಳು ಮತ್ತು ಸನ್‍ಗ್ಲಾಸ್‍ಗಳನ್ನು ಇದು ಒದಗಿಸುತ್ತದೆ.

Leave a Reply

Your email address will not be published. Required fields are marked *