ಗ್ರಾಮ ಪಂಚಾಯತಿ ಸದಸ್ಯೆ ರಸ್ತೆ ಗಳ ಒತ್ತುವರಿ ತೆರವಿಗೆ ಚಾಲನೆ
ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶ್ರೀರಾಮನಾಯಕ್ ರಿಂದ ನೋಟೀಸ್ ಜಾರಿ
ಪಾವಗಡ : ವೈ ಎನ್ ಹೊಸಕೋಟೆ ಗ್ರಾಮಪಂಚಾಯತಿ ವ್ಯಾಪ್ತಿಯ ಡಿ ಬ್ಲಾಕ್ ನಲ್ಲಿ ಇದೇ ಬ್ಲಾಕ್ ನ ಗ್ರಾಮಪಂಚಾಯತಿ ಸದಸ್ಯೆ ಕಾಮಾಕ್ಷಮ್ಮ ಮತ್ತು ಡಾನ್ ಸೀನ ಅಲಿಯಾಸ್ ಶ್ರೀನಿವಾಸ್ ಇವರು ಗ್ರಾಮಪಂಚಾಯತಿ ಗೆ ಸೇರಿದ ಎರಡು ರಸ್ತೆಗಳನ್ನು ಒತ್ತುವರಿ ಮಾಡಿಕೊಂಡು ರಸ್ತೆ ಗೆ ಕಾಂಪೌಂಡ್ ನಿರ್ಮಾಣ ಮಾಡಿದ್ದಾರೆ. ಈ ಸಂಬಂಧ ಮೂರು ದೂರುಗಳು ಲೋಕಾಯುಕ್ತ ಸಂಸ್ಥೆ ಯಲ್ಲಿ ದಾಖಲಾಗಿತ್ತು.
ಪಾವಗಡ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಉತ್ತಮ್ ಮತ್ತು ಪಿಡಿಒ ಶ್ರೀರಾಮನಾಯಕ್ ಅವರು ತಮ್ಮ ಸಿಬ್ಬಂದಿಯೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು.
ಈ ಜಾಗ ದ ಸುತ್ತ ಮುತ್ತ ಇರುವ ನಿವೇಶನಗಳು ಎಲ್ಲಾ ನಮಗೆ ಸೇರಿದ್ದು ಇಲ್ಲಿ ಬೇರೆ ಯಾರ ನಿವೇಶಗಳು ಇಲ್ಲ ಆದ್ದರಿಂದ ನಾವು ಕಾಂಪೌಂಡ್ ನಿರ್ಮಾಣ ಮಾಡಿಕೊಂಡಿದ್ದೇವೆ ಎಂದು ಗ್ರಾಮಪಂಚಾಯತಿ ಸದಸ್ಯೆ ಕುಟುಂಬ ಇಒ ಉತ್ತಮ್ ಅವರಿಗೆ ಉತ್ತರ ಕೊಟ್ಟಿದ್ದಾರೆ.
ಇಲ್ಲಿರುವ ನಿವೇಶಗಳನ್ನು ನೀನು ಖರೀದಿ ಮಾಡಿರಬಹುದು ಆದರೆ ಗ್ರಾಮಪಂಚಾಯತಿ ರಸ್ತೆಯನ್ನು ಖರೀದಿ ಮಾಡಿದ್ದೀಯ. ಎಂದು ಇಒ ಪ್ರಶ್ನಿಸುತ್ತಾರೆ…?
ಈ ರಸ್ತೆ ನನ್ನದು ಅಂದರೆ ಸರ್ಕಾರದ್ದು, ಕಾಂಪೌಂಡ್ ಹಾಕಲು ನೀನು ಯಾರು…? ಸಾರ್ವಜನಿಕರು ಓಡಾಡಲು ರಸ್ತೆ ಇರುವುದು ಎಂದಾಗ ಮೌನ ಕ್ಕೆ ಜಾರಿದನಂತೆ ಈ ಒತ್ತುವರಿ ಗಿರಾಕಿ
ಒತ್ತುವರಿ ಗಿರಾಕಿ ತಕ್ಷಣ ಪಾವಗಡದ ತನ್ನ ವಕೀಲನಿಗೆ ಪೋನ್ ಮಾಡಿ ಇಒ ಉತ್ತಮ್ ಅವರಿಗೆ ಕೊಟ್ಟನಂತೆ, ವಕೀಲ ವಿವೇಶನ ಕ್ಕೆ ಸಂಬಂಧಿಸದ ವಿಷಯ ನ್ಯಾಯಾಲಯದಲ್ಲಿ ಕೇಸ್ ನಡೆಯುತ್ತಿದೆ ನೀವು ಅಲ್ಲಿ ಯಾವ ಪ್ರಕ್ರಿಯೆ ನಡೆಸ ಬಾರದು ಎಂದನಂತೆ… ಆಗ .ನ್ಯಾಯಾಲಯದಲ್ಲಿ ಕೇಸ್ ಇದ್ದರೆ ಅದು ಅವರ ವಯಕ್ತಿಕ ಆಸ್ತಿ ವಿವಾದ, ಇದು ಗ್ರಾಮಪಂಚಾಯತಿ ಗೆ ಸೇರಿದ( ಸರ್ಕಾರಿ ರಸ್ತೆ) ಒತ್ತುವರಿ ತೆರುವಿನ ವಿಷಯ ಎಂದು ವಕೀಲ್ ಸಾಬ್ ಗೆ ಖಡಕ್ ಹಾಗೆ ಉತ್ತರ ಕೊಟ್ಟರಂತೆ ಇಒ ಸಾಹೇಬರು.
ನಿವೇಶನ ದಾರರಿಗೆ ನೋಟೀಸ್ ನೀಡುತ್ತಿದ್ದೇವೆ ತಮ್ಮ ದಾಖಲೆಗಳನ್ನು ಮೂರು ದಿನಗಳೊಳಗೆ ನೀಡಬೇಕು ನಂತರ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಸ್ಥಳ ದಲ್ಲಿ ಇದ್ದ ಶ್ರೀನಿವಾಸ್ ಕುಟುಂಬಕ್ಕೆ ತಿಳಿಸಿದಧಾರೆ.
ಉಪಲೋಕಾಯುಕ್ತ ನ್ಯಾಯಮೂರ್ತಿಗಳಾದ ವೀರಪ್ಪ ಅವರು 21-11-2025 ರಂದು ಮಧುಗಿರಿಯಲ್ಲಿ ವಿಚಾರಣೆ ನಡೆಸಿದರು ಆ ಸಂದರ್ಭದಲ್ಲಿ ರಸ್ತೆ ಒತ್ತುವರಿ ದೂರು ವಿಚಾರಣೆಗೆ ಬಂದಿತ್ತು ಪಾವಗಡ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಉತ್ತಮ್ ಮತ್ತು ವೈ ಎನ್ ಹೊಸಕೋಟೆ ಗ್ರಾಮಪಂಚಾಯತಿ ಪಿಡಿಒ ಶ್ರೀ ರಾಮನಾಯಕ್ ನವರಿಗೆ ರಸ್ತೆ ತೆರವು ಗೊಳಿಸುವುದಾಗಿ ತಿಳಿಸಿದ್ದರು
ಪ್ರಕರಣ – 1 : ದಾಯಾದಿ ಕಲಹ
ಡಾನ್ ಸೀನ ಅಲೀಯಸ್ ಶ್ರೀನಿವಾಸ್ ಮತ್ತು ನಾಗರಾಜು (ಚಂದ್ರಬಾಬು) ಆಸ್ತಿ ವಿವಾದ ಸುಮಾರು ವರ್ಷಗಳಿಂದ ನಡೆಯುತ್ತಿದೆ. ಪಾವಗಡ ಸಿವಿಲ್ ಜಡ್ಜ ಹಿರಿಯ ನ್ಯಾಯಾಲಯ ಪ್ರಕರಣ ಸಂಖ್ಯೆ -ಆರ್ ಎ ೧೦೭/೯೯ ಮೂಲಕ ಆಸ್ತಿ ಹಂಚಿಕೆ ಹಾಗಿದೆ ಈ ನಿವೇಶನಗಳಿಗೆ ಸಂಬಂದಿಸಿದಂತೆ ಕೋರ್ಟ್ ಪ್ರಕಾರ ಪೂರ್ವ – ಪಶ್ಚಿಮ 40 ಅಡಿ – ಉತ್ತರ – ದಕ್ಷಿಣ 14 ವರೆ ಅಡಿ ಇವರ ಬಾಗ ಕ್ಜೆ ಬಂದಿರುವುದು ಆದರೆ ಇ- ಸ್ವತ್ತು ಮಾಡಿಸಿ ಕೊಳ್ಳುವಾಗ ಗೋಲ್ ಮಹಲ್ ನಡೆದಿದೆ ಎನ್ನುತ್ತಾರೆ ಇವರ ದಾಯದಿಗಳು
ಅವರು ನಮ್ಮ ನಿವೇಶನದ ದಾರಿ ಬಂದ್ ಮಾಡಿ ಕಾಂಪೌಂಡ್ ನಿರ್ಮಾಣ ಮಾಡಿದ್ದಾರೆ ಎಂಬುದು ಅವರ ಆರೋಪ
ಕೋರ್ಟ್ ಆದೇಶದ ಪ್ರತಿ
ಡಾನ್ ಸೀನ ಗ್ರಾಮಪಂಚಾಯತಿ ಸದಸ್ಯನಾಗಿದ್ದ ವೇಳೆ ವಾಸದ ಮನೆಯ ನಿವೇಶನ ಕ್ಕೆ ಗ್ರಾಮಪಂಚಾಯತಿ ಸೇರಿದ ರಸ್ತೆಯನ್ನು ತಮ್ಮ ಮನೆಯ ವಿಸ್ತೀರ್ಣಕ್ಕೆ ಸೇರಿಸಿ ಇ – ಸ್ವತ್ತು ಮಾಡಿಸಿಕೊಂಡಿದ್ದಾನೆ ( ಇ- ಸ್ವತ್ತು ಸಂಖ್ಯೆ152500003300102370 ) ನಾನು ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿದ್ದೇನೆ ಎಂದು ನಾಗರಾಜ್ ಸಪ್ತ ಸ್ವರ ಕ್ಕೆ ತಿಳಿಸಿದ್ದಾರೆ.
ಪ್ರಕರಣ – 2 – ಅತಿ ಆಸೆ
ಈ ರಸ್ತೆ ಗೆ ಹೊಂದಿಕೊಂಡಂತೆ ಅಜಿತ್ ಕುಮಾರ್ ಎಂಬುವವರ ಮನೆ/ನಿವೇಶನ ವಿತ್ತು, ಇವರು ತುಮಕೂರಿನಲ್ಲಿ ವಾಸವಿದ್ದ ಕಾರಣ ಮನೆಯನ್ನುಬಾಡಿಗೆ ನೀಡಲು ಮುಂದಾಗುತ್ತಾರೆ. ಆದರೆ ಡಾನ್ ಸೀನ ಕುಟುಂಬ ಬಾಡಿಗೆ ಬಂದವರಿಗೆ ತೊಂದರೆ ನೀಡುತ್ತಿದ್ದರು ರಸ್ತೆ ಗೆ ಕಾಂಪೌಂಡ್ ನಿರ್ಮಾಣ ಮಾಡಿದ್ದರಿಂದ ಬಾಡಿಗ ದಾರರಿಗೆ ತೊಂದರೆ ಯಾಗುತ್ತಿತ್ತು ಇದನ್ನು ಸ್ಥಳೀಯ ಅಧಿಕಾರಿಗಳು ರಸ್ತೆ ತೆರವು ಗೊಳಿಸದ ಕಾರಣ ಅಜಿತ್ ಕುಮಾರ್ ಲೋಕಾಯುಕ್ತದಲ್ಲಿ ಪ್ರಕರಣ ದಾಖಲು ಮಾಡುತ್ತಾರೆ.
ಪ್ರಕರಣ ದಾಖಲಾದ ಕೆಲ ತಿಂಗಳ ನಂತರ ಡಾನ್ ಸೀನ ಅಲಿಯಾಸ್ ಸ್ರೀನಿವಾಸ್ ಅಜಿತ್ ಕುಮಾರ್ ನಿವೇಶನವನ್ನು ಖರೀದಿ ಮಾಡುತ್ತಾನೆ. ನಿವೇಶನವನ್ನು ಹಣ ವಿದೆ ಎಂದು ಖರೀದಿ ಮಾಡಬಹುದು ಆದರೆ ಲೋಕಾಯುಕ್ತ ಪ್ರಕರಣವ್ವು ಖರೀದಿ ಮಾಡಲು ಆಗುವುದಿಲ್ಲ.
ಪ್ರಕರಣ -3 : ಜಾತಿ ದುರುಪಯೋಗ – ಹಣದ ಮದ
ಇ-ಸ್ವತ್ತು ಸಂಖ್ಯೆ (152500603300102378
ಡಾನ್ ಸೀನ ಮತ್ತೊಂದು ನಿವೇಶನಕ್ಕೆ ಹೊಂದಿಕೊಂಡಂತೆ ಮೂಲ ಉಜ್ಜಯನಿ ಸಂಸ್ಥಾನ ಸುಮಾರು400 ವರ್ಷ ಇತಿಹಾಸ ಹೊಂದಿರುವ ಮಠ ದ ಜಾಗ ಇದೆ ಈ ಮಠ ಕ್ಕೆ ಸೇರಿದ ಸುಮಾರು 5-10 ಅಡಿ ಜಾಗ ಒತ್ತುವರಿ ಮಾಡಿಕೊಂಡು ಇ ಸ್ವತ್ತು ಮಾಡಿಸಿಕೊಂಡಿದ್ದಾನೆ.
ಡಾನ್ ಸೀನ ಈ ನಿವೇಶನವನ್ನು ಕಾನೂನು ಬಾಹಿರ ವಾಗಿ ಖಾತೆ ಮಾಡಿಸಿಕೊಂಡಿದ್ದಾನೆ. ಬದರೀನಾಥ್ ವೈಶ್ಯ ಸಮುದಾಯದವರಿಂದ ನಾಯಕ ಸಮುದಾಯದ ಡಾನ್ ಸೀನ ದಾನ ಪತ್ರದ ಮೂಲಕ ಇ-ಸ್ವತ್ತು ಮಾಡಿಸಿ ಕೊಂಡಿದ್ದಾನೆ. ಈ ದಾನ ಪತ್ರ ಕಾನೂನಿನ ವಿರುದ್ಧ.
ಈ ನಿವೇಶನ ಮೂಲ ತ ಬಧರೀನಾಥ್ ಅವರದ್ದು ಅಲ್ಲ ಈ ಹಿಂದೆ ಮಹಂತೀನ ಮಠ ಕ್ಕೆ ಸೇರಿದ್ದು. ಚಿತ್ತಯ್ಯ ಎಂಬುವರು ಅಲ್ಲಿ ಗುಡಿಸಲು ಹಾಕಿ ಕೊಂಡು ಜೀವನ ನಡೆಸುತ್ತಿದ್ದರು. ಚಿತ್ತಯ್ಯ ಕುಟುಂಬಕ್ಕೆ ಜಾಗವನ್ನು ಮಠ ದ ಹಿರಿಯರು ಬಿಟ್ಟು – ಬಿಟ್ಟಿರುತ್ತಾರೆ ಕಾರಣ ಆ ಸಮಯ ದಲ್ಲಿ ಅವರದ್ದು ಬಡ ಕುಟುಂಬವಂತೆ. ಅದೇ ರೀತಿ ಮಠ ದ ಜಾಗಗಳನ್ನು ಸುಮಾರು ಜನರು ಒತ್ತುವರಿ ಮಾಡಿಕೊಂಡಿರುವುದನ್ನು ಪ್ರಸ್ತುತ ಕಾಣಬಹುದು. ಸದ್ಯ ಚಿತ್ತಯ್ಯ ಕುಟುಂಬ ವರ್ಗ ದ ಅವರ ಬಳಿ ಯಾವ ದಾಖಲೆಗಳು ಲಭ್ಯವಿಲ್ಲವಂತೆ
ಚಿತ್ತಯ್ಯ ಅವರು ಬದರೀನಾಥ್ ಅವರ ತಾತ ನ ಹತ್ತಿರ ಸಾಲ ಪಡೆದು ವಾಪಸ್ಸು ನೀಡದ ಕಾರಣ ಸಾಲ ವಸೂಲಾತಿ ಪ್ರಕ್ರಿಯೆಯಲ್ಲಿ ಆ ನಿವೇಶನ ಬದರಿನಾಥ್ ಅವರ ತಾತ ನವರು ವಶ ಕ್ಕೆ ಪಡೆದಿರುತ್ತಾರೆ.
ಮಠ ದ ಮೂಲ ದಾಖಲೆಗಳ ಪ್ರಕಾರ ಆ ನಿವೇಶನ ಮಠ ಕ್ಕೆ ಸೇರುತ್ತದೆ, ಈ ಸಂಬಂಧ ಕೋರ್ಟ್ ಆದೇಶವು ಇದೆ ಎಂಬ ಮಾಹಿತಿ ಲಭ್ಯವಾಗಿದೆ
ಪೋಲೀಸಪ್ಪ ನ ಅಟ್ಟಹಾಸ :
ಮಠ ವಂಶಸ್ಥರಿಗೆ ವೈ ಎನ್ ಹೊಸಕೋಟೆ ಪೋಲೀಸ್ ಠಾಣೆಯ ಪೋಲೀಸ್ ಸಿ ಎಚ್ ಸಿ- 360 ಮಂಜುನಾಥ್ ಮೂಲಕ ಕಿರುಕುಳ ನೀಡಿಸುತ್ತಾನೆ. ಹಿರಿಯ ನಾಗರೀಕರಾದ ಷಣ್ಮುಖಮೂರ್ತಿ ಕುಟುಂಬವನ್ನು ಅವರನ್ನು ಪೋಲೀಸ್ ಠಾಣೆ ಗೆ ಕರೆಸುತ್ತಾರೆ ಮಂಜುನಾಥ್ ಸಮ್ಮುಖ ದಲ್ಲೆ ಧಮ್ಕಿ ಹಾಕುತ್ತಾನೆ , ಸಿಸಿ ಟಿವಿ ಯಲ್ಲಿ ಎಲ್ಲಾ ರೆಕಾರ್ಡ್ ಆಗಿದೆ
ಪೋಲೀಸಪ್ಪ ನ ಮೂಲಕ ನಿಮ್ಮ ಮೇಲೆ ಜಾತಿ ನಿಂದನೆ ಕೇಸ್ ಹಾಕುತ್ತೇನೆ ಎಂದು ಭಯ ಪಡಿಸುತ್ತಾರೆ.
ಸಿವಿಲ್ ವಿಚಾರಕ್ಕೂ ಪೋಲೀಸರಿ ಗೂ ಸಂಬಂಭವಿಲ್ಲ
ಜಾತಿ ನಿಂದನೆ ಕೇಸ್ ದಾಖಲಿಸಲು ಹೈಕೋರ್ಟ್ – ಸುಪ್ರಿಂಕೋರ್ಟ್ ಹಲವಾರು ನಿಯಮಗಳನ್ನು ನೀಡಿವೆ.
ಮಠದ ಮಂದಿ ಇವನ ಕಾಟ ಕ್ಕೆ ಹೈರಾಣಾಗಿ ಹೋಗುತ್ತಾರೆ. ಈತನ ಕಿರುಕುಳದಿಂದ ಮಾನಸಿಕ ಒತ್ತಡಕ್ಕೆ ಹೊಳಗಾಗಿ ಮಠ ಕ್ಕೆ ಸೇರಿದ ಹಿರಿಯ ಜೀವ ಮಸಣ ಕ್ಕೆ ಸೇರುವಂತಾಗುತ್ತದೆ ಎಂಬ ವಿಷಯವನ್ನು ವಂಶಸ್ಥರು ತಿಳಿಸುತ್ತಾರೆ.
ಪೋಲೀಸ್ ಸಿ ಎಚ್ ಸಿ- 360 ಮಂಜುನಾಥ್ ಮೇಲೆ ಕ್ರಮ :
ವೈ ಎನ್ ಹೊಸಕೋಟೆ ಪೋಲೀಸ್ ಠಾಣೆ ಯ ಪೋಲೀಸ್ ಸಿ ಎಚ್ ಸಿ- 360 ಮಂಜುನಾಥ್ ದೂರು ನೀಡದೆ ಇದ್ದರು ಪೋಲೀಸ್ ಠಾಣೆಗೆ ಕರೆಯಿಸಿ ಕಿರುಕುಳ ನೀಡಿದ್ದರಿಂದ ಮಾನವಹಕ್ಕು ಗಳ ಆಯೋಗದಲ್ಲಿ ಪೋಲೀಸ್ ಮೇಲೆ ದೂರು ದಾಖಲಿಸಲಾಗುತ್ತದೆ
ಜಿಲ್ಲಾ ಪೋಲೀಸ್ ವರಿಷ್ಠ ಅಧಿಕಾರಿಯಿಂದ ತನಿಖೆ ಗೆ ಆದೇಶ ವಾಗುತ್ತದೆ, ತನಿಖೆಯಲ್ಲಿ ಸಿ ಎಚ್ ಸಿ- 360 ಮಂಜುನಾಥ್ ದೂರು ನೀಡದೆ ಇದ್ದರು ವಿನಾಕಾರಣ ಪೋಲೀಸ್ ಠಾಣೆ ಗೆ ಕರೆಸಿರುವುದು ಸಾಬೀತಾಗುತ್ತದೆ.
ದೂರು ನೀಡಿಲ್ಲ ಎಂದು ಹೇಳುವ ಪೋಲೀಸರ ಪ್ರತಿ
ಪೋಲೀಸ್ ಮೇಲೆ ಕ್ರಮ ಕ್ಜೆ ಆದೆಶ :
ಯಾವುದೇ ದೂರು ಇಲ್ಲದೆ ನಿಮ್ಮನ್ನು ವಿಚಾರಣೆಗಾಗಿ ಪೋಲೀಸ್ ಠಾಣೆ ಗೆ ಕರೆಯಿಸಿದ್ದು ಇವರ ಈ ಕರ್ತವ್ಯ ನಿರ್ಲಕ್ಷತನಕ್ಕಾಗಿ ಸದರಿಯವರಿಗೆ ಕರ್ನಾಟಕ ರಾಜ್ಯ ಪೋಲೀಸ್ ( ಶಿಸ್ತು ನಡವಳಿ) 1965/89 ರ ನಿಯಮ 7 ರ ಅನ್ವಯ ಇಲಾಖಾ ಶಿಸ್ತು ಕ್ರಮ ಕೈಗೊಂಡಿರುತ್ತದೆ ಎಂಬ ಹಿಂಬರಹ ಡಿವೈಎಸ್ ಪಿ ಮಧುಗಿರಿ ಅವರು ನೀಡಿರುತ್ತಾರೆ.
ಡಿವೈಎಸ್ ಪಿ ಆದೇಶ
ಸುಳ್ಳು ಜಾತಿ ನಿಂದನೆಕೇಸ್ :
ಸುಳ್ಳು ಜಾತಿ ನಿಂದನೆ ಕೇಸ್ ಹಾಕುತ್ತೇನೆ ಎಂದು ಭಯ ಹುಟ್ಟಿಸುವ ಜನರ ಸಂಖ್ಯೆ ಬಹಳಷ್ಟು ಇದೆ. ದೇಶದಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗುತ್ತಿರುವುವ ಹಿನ್ನೆಲೆ ಯಲ್ಲಿ ಹೈಕೋರ್ಟ್ – ಸುಪ್ರೀಂಕೋರ್ಟ್ ಪೋಲೀಸರು ಕೇಸ್ ದಾಖಲಿಸುವ ಬಗ್ಗೆ ಬಹಳಷ್ಟು ತೀರ್ಪು ಗಳನ್ನು ನೀಡಿವೆ
ಯಾರಿಗೂ ಭಯ ಬೇಡ ಸುಳ್ಳು ದೂರು ನೀಡುವವರ ವಿರುದ್ಧ ಹೋರಾಟದ ಛಲ ಬೇಕು……!
ರೌಡಿ ಶೀಟರ್ ಒಪನ್ ….?
ಹೆಸರೇ ಹೇಳುವಂತೆ ಡಾನ್ ಸೀನ ಅಂದರೆ ಡಾನ್ ತನ್ನ ಮನೆಯ ಗೋಡೆ ಮೇಲು ಡಾನ್ ಸೀನ ಎಂಬ ನಾಮ ಫಲಕವನ್ನು ಕಾಣಬಹುದು ಈ ತನ ಮೇಲೆ ಹಲವಾರು ಕೇಸ್ ಗಳು ದಾಖಲಾಗಿವೆ 1995 FIR -94/95 ( sec – 143,307.147.323.324 ಇತ್ಯಾದಿ) ಥಾಮಸ್ ಅವರ ಅವಧಿಯಲ್ಲಿ ಕಿಡ್ಯಾಪ್ ಕೇಸ್, ನಾಗರಾಜ್ ಅವಧಿಯಲ್ಲಿ ಕೆಇಬಿ ನೌಕರ ನಮೇಲೆ ಹಲ್ಲೆ ಕೇಸ್ ದಾಖಲಾಗಿತ್ತು 33/2022. 72/2024 ರಿಂದ ದಾಖಲಾಗಿವೆ ಎಂಬ ಮಾಹಿಯನ್ನು ಸ್ಥಳಿಯರು ಮತ್ತು ಪೋಲೀಸರು ಸಪ್ತಸ್ವರ ಕ್ಕೆ ಮಾಹಿತಿ ನೀಡಿದ್ದಾರೆ.
ಇವರ ಆರ್ಥಿಕ ವ್ಯವಹಾರ ಮೀಟರ್ ಬಡ್ಡಿ ಗೆ ಹಣ ನೀಡುವುದು ಸರಿಯಾದ ಸಮಯಕ್ಕೆ ಹಣ ವಾಪಸ್ಸು ನೀಡದವರ ಮೇಲೆ ದೌರ್ಜನ್ಯ ಮಾಡುತ್ತಾರೆ ಎಂಬ ವಿಷಯ ವೈ ಎನ್ ಹೊಸಕೋಟೆ ಹಾದಿ- ಬೀದಿಗಳಲ್ಲಿ ಕೇಳಬರುವ ಮಾತುಗಳು…..
ಡಾನ್ ಸೀನ ಮತ್ತು ಮಗ ಉದಯ್ ಕುಮಾರ್ ಚಟುವಟಿಕೆಗಳ ಸಮಗ್ರ ತನಿಖೆ ನಡೆಸಿದ ಪೋಲೀಸರು ಅಂತಿಮವಾಗಿ ರೌಡಿ ಶೀಟರ್ ಓಪನ್ ಮಾಡಿದ್ದಾರೆ ಎಂಬ ಮಾಹಿತಿ ಪೋಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಡಾನ್ ಸೀನ ಆತನ ಮಗ ಉದಯ್ ಕುಮಾರ್ ಮುಂದಿನ ದಿನಗಳಲ್ಲಿ ಸಾರ್ವಜನಿಕ ಜೀವನದಲ್ಲಿ ಸಭ್ಯ ವ್ಯಕ್ತಿಗಳಾಗಿ ಜೀವನ ನಡೆಸಬೇಕು.
ಹಾದಿ-ಬೀದಿಗಳಲ್ಲಿ ಗಲಾಟೆ ಮಾಡುವುದು.ಅವ್ಯಾಚ್ಚ ಶಬ್ದಗಳಲ್ಲಿ ನಿಂದಿಸುವುದು, ದೌರ್ಜನ್ಯ ವೆಸಗುವುದು ಮತ್ತೆ ಮುಂದುವರೆಸಿದರೆ ಈ ಸಂಬಂಧ ಒಂದು ದೂರು ಬಂದರು ಅವರಿಬ್ಬರನ್ನು ಪಾವಗಡ ತಾಲ್ಲೂಕಿನಿಂದ ಗಡಿಬಾರು ಮಾಡಲು ಅವಕಾಶವಿರುತ್ತದೆ ಎಂಬ ಮಾಹಿತಿಯನ್ನು ಪೋಲೀಸ್ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ನಿವೇಶನ ಗಳ ಒತ್ತುವರಿ , ರಸ್ತೆ ಗೆ ಕಾಂಪೌಂಡ್ ನಿರ್ಮಾಣ ಮಾಡಿರುವುದರ ವಿರುದ್ಧ ಲೋಕಾಯುಕ್ತದಲ್ಲಿ ಮೂರು ಪ್ರಕರಣ ದಾಖಲಲಾಗಿವೆ. ಕೇಸ್ ನಂ – LOK BD -3487/2024 , UPLOK/BD 12881/2024, LOK/BD/2040/2025
ನೋಟೀಸ್ ಜಾರಿ :
ಉಪ ಲೋಕಾಯುಕ್ತ ನ್ಯಾಯಮೂರ್ತಿಗಳ ಸಮ್ಮುಖದಲ್ಲಿ ಒಂದು ವಾರದೊಳಗೆ ರಸ್ತೆ ಒತ್ತುವರಿ ತೆರವು ಗೊಳಿಸುವುದಾಗಿ ತಿಳಿಸಿದ್ದ ಇಒ ಉತ್ತಮ್ ಅವರು ವೈ ಎನ್ ಹೊಸಕೋಟೆ ಪಡಿಒ ಅವರಿಗೆ ನೋಟೀಸ್ ನೀಡಲು ನಿರ್ದೇಶಿಸಿದ್ದಾರೆ, ನಿನ್ನೆ ಅಷ್ಟೆ ಸ್ಥಳ ಪರಿಶೀಲನೆಯನ್ನು ನಡೆಸಿದ್ದರು
ನೋಟೀಸ್ ಪ್ರತಿ
ಒಂದು ವಾರದಲ್ಲಿ ಗ್ರಾಮ ಪಂಚಾಯತಿಗೆ ಸೇರಿದ ಎರಡು ರಸ್ತೆಗಳ ಒತ್ತುವರಿ ತೆರವು ಮತ್ತು ಕಾಂಪೌಂಡ್ ಹೊಡೆದು ಹಾಕಿ ಸಾರ್ವಜನಿಕರ ಓಡಾಡಲು ಮುಕ್ತ ಅವಕಾಶ ಮಾಡಿಕೊಡಬೇಕಾಗಿರುವುದರಿಂದ ವೈ ಎನ್ ಹೊಸಕೋಟೆ ಗ್ರಾಮಪಂಚಾಯತಿ ಪಿಡಿಒ ಶ್ರೀರಾಮನಾಯಕ್ ಅವರು ಡಾನ್ ಸೀನ ನ ಕುಟುಂಬ ವರ್ಗ ಕ್ಕೆ ಮತ್ತು ಶಿರವಳಪ್ಪ ಅವರಿಗೆ ನೋಟೀಸ್ ಜಾರಿ ಮಾಡಿದ್ದು ಮೂರು ದಿನಗಳ ಒಳಗೆ ನಿವೇಶನ ದ ದಾಖಲೆಗಳನ್ನು ನೀಡಬೇಕಾಗಿ ನೋಟೀಸ್ ನಲ್ಲಿ ತಿಳಿಸಲಾಗಿದೆ.