IMG 20251126 WA0059

ಪಾವಗಡ : ಭಾರತದ ಸಂವಿಧಾನ ಅಂಬೇಡ್ಕರ್ ನೀಡಿದ ಪ್ರಮುಖ ಕೊಡುಗೆ…!

DISTRICT NEWS ತುಮಕೂರು

ಭಾರತದ ಸಂವಿಧಾನ ಅಂಬೇಡ್ಕರ್ ನೀಡಿದ ಪ್ರಮುಖ ಕೊಡುಗೆ . ಹಿರಿಯ ಸಿವಿಲ್ ನ್ಯಾಯಾಧೀಶ ವಿ. ಮಾದೇಶ್.

ಪಾವಗಡ: ಭಾರತ ಸಂವಿಧಾನವನ್ನು 1949ರ ನವೆಂಬರ್ 26ರಂದು ಅಧಿಕೃತವಾಗಿ ಅಳವಡಿಸಿಕೊಳ್ಳಲಾಯಿತು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ವಿ ಮಾದೇಶ್ ತಿಳಿಸಿದ್ದಾರೆ.

ಪಟ್ಟಣದ ತಾಲೂಕು ನ್ಯಾಯಾಲಯದ ಆವರಣದಲ್ಲಿ ಬುಧವಾರ ತಾಲ್ಲೂಕು ಕಾನೂನು ಸೇವಾ ಸಮಿತಿ ಮತ್ತು ತಾಲ್ಲೂಕು ವಕೀಲರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಹಾಗೂ ನ್ಯಾಯದ ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಸಂವಿಧಾನ ರಚನೆಯಲ್ಲಿ ಹಲವಾರು ವ್ಯಕ್ತಿಗಳು ಶ್ರಮವಹಿಸಿದ್ದು ಇಂದು ಅವರನ್ನು ನೆನೆಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ವಿಶ್ವದಲ್ಲಿಯೇ ಮೌಲ್ಯಯುತವಾದ ಸಂವಿಧಾನವನ್ನು ಹೊಂದಿದ್ದು.
ಶಾಸಕಾಂಗ, ಕಾರ್ಯಂಗ, ನ್ಯಾಯಾಂಗಗಳು ಸಂವಿಧಾನದ ಅಡಿಯಲಿ ಕಾರ್ಯನಿರ್ವಹಿಸುತ್ತವೆ ಎಂದರು.

ಇತರೆ ದೇಶದಲ್ಲಿರುವ ಪ್ರಮುಖ ಅಂಶಗಳನ್ನು ಸಂಗ್ರಹಿಸಿ ನಮ್ಮ ದೇಶಕ್ಕೆ ಅನುಗುಣವಾಗಿ ಸಂವಿಧಾನವನ್ನು ರಚಿಸಲಾಗಿದೆ ಎಂದರು.

ಸಂವಿಧಾನ ರಚನೆ ಯಲ್ಲಿ ಸಂವಿಧಾನ ರಚನಾ ಸಮಿತಿ ಪ್ರಮುಖ ಪಾತ್ರ ವಹಿಸಿದೆ ಎಂದು.
ಸಂವಿಧಾನದ ಪೂರ್ವ ಪೀಠಿಕೆಯು ಸಂವಿಧಾನದ ತಾತ್ಪರ್ಯವನ್ನು ತಿಳಿಸುತ್ತದೆ ಎಂದರು.
ಕಾರ್ಯಕ್ರಮ ಉದ್ದೇಶಿಸಿ ಅಧಿಕ ಸಿವಿಲ್ ನ್ಯಾಯಾಧೀಶರಾದ ಸಿ.ಎನ್ ಮುನಿರತಮ್ಮ ಮಾತನಾಡಿ.
ನ್ಯಾಯಾಂಗ ವ್ಯವಸ್ಥೆ ಹಕ್ಕುಗಳ ರಕ್ಷಕನಾಗಿ ಕೆಲಸ ಮಾಡುತ್ತದೆ, ನ್ಯಾಯಾಂಗ ಇಲ್ಲದಿದ್ದರೆ ಹಕ್ಕುಗಳಿಗೆ ರಕ್ಷಣೆ ಇಲ್ಲದಂತಾಗುತ್ತದೆ ಎಂದರು.

ಸಮಾಜ ಶಾಂತಿಯುತವಾಗಿ ಇರಬೇಕಾದರೆ ಸಂವಿಧಾನದ ರಕ್ಷಣೆ ಮತ್ತು ಪಾಲನೆ ಆಗಬೇಕು ಎಂದರು.
ರಾಜ್ಯ ನಿರ್ದೇಶಕ ತತ್ವಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಪ್ರಮುಖ ಕರ್ತವ್ಯಗಳನ್ನು ನೀಡಿದ್ದು.
ಆಯಾ ಕಾಲಕ್ಕೆ ತಕ್ಕಂತೆ ಕಾನೂನು, ನೀತಿಗಳನ್ನು ನಿಯಮಗಳನ್ನು ರಚನೆ ಮಾಡಿ ಪಾಲನೆ ಮಾಡಬೇಕಾದ ಕೆಲಸ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲಿದೆ ಎಂದರು.

ಈ ಸಂದರ್ಭದಲ್ಲಿ ವಕೀಲ ಸಂಘದ ಅಧ್ಯಕ್ಷ ರಂಗಪ್ಪ, ಕಾರ್ಯದರ್ಶಿ ಚಂದ್ರಪ್ಪ, ಸಹಾಯಕ ಸರ್ಕಾರಿ ಅಭಿಯೋಜಕರಾದ ಸಣ್ಣೀರಪ್ಪ,ರಮೇಶ್ ಬಾಬು, ವಕೀಲ ನಾಗೇಂದ್ರಪ್ಪ, ಪ್ಯಾನಲ್ ಮತ್ತು ಮಧ್ಯಸ್ಥಿಕೆ ವಕೀಲರುಗಳು ಹಾಜರಿದ್ದರು.

ವರದಿ : ಶ್ರೀನಿವಾಸಲು ಎ