ಕಳ್ಳತನ ಆರೋಪಿ ಬಂಧನ: ನಗದು, ಚಿನ್ನಾಭರಣ ವಶ.
ಪಾವಗಡ: ಪಟ್ಟಣದ ವಿವಿಧ ಕಡೆಗಳಲ್ಲಿ ಮನೆ ಮತ್ತು ಅಂಗಡಿ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಪಾವಗಡ ಠಾಣೆಯ ಪೊಲೀಸರು ಪತ್ತೆ ಹಚ್ಚಿ, ನಗದು ಮತ್ತು ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ.
ಆಂಧ್ರಪ್ರದೇಶದ ಹಿಂದೂಪುರಂ ಟೌನ್ ನ ರೆಹಮತ್ ಪುರ ಬಡಾವಣೆಯ ನಿವಾಸಿ ಸೈಯದ್ ನೂರಲ್ಲಾ.(38) ಬಂಧಿತ ಆರೋಪಿ.
ಮತ್ತೊಬ್ಬ ಆರೋಪಿ ತಲೆಮರಿಸಿಕೊಂಡಿದ್ದು. ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ
- ಬಂಧಿತ ಆರೋಪಿಯು ಪಟ್ಟಣದ ಕನಕ ವೃತ್ತ ಬಳಿಯಿರುವ ಗಂಗಾಎಂಟರ್ ಪ್ರೈಸಸ್ ಅಂಗಡಿಯಲ್ಲಿ ಏಪ್ರಿಲ್ 9ರಂದು 82.000/- ರೂ ನಗದು ಹಣವನ್ನು ಕಳ್ಳತನಮಾಡಿದ್ದ ಎನ್ನಲಾಗಿದೆ.
- ಜೂನ್ 8ರಂದು ತಾಲ್ಲೂಕಿನ ಗುಂಡಾರಹಳ್ಳಿ ಗ್ರಾಮದ ನವೀನ್ ಎನ್ನುವರ ಮನೆಯಲ್ಲಿ 16 ಗ್ರಾಂ ಬಂಗಾರದ ಚೈನುನನ್ನು ಕಳ್ಳತನ ಮಾಡಿದ್ದರು.
- ಜುಲೈ 1ರಂದು ಪಟ್ಟಣದ ಶ್ರೀದೇವಿ ಲೇಔಟ್ ನ ಚಾಂದ್ ಬಾಷ ರವರ ಮನೆಯಲ್ಲಿ 15 ಗ್ರಾಂ ಚಿನ್ನದ ಚೈನ್ ಮತ್ತು ಶೀಮಾಭಾನು ರವರ ವಾಸದ ಮನೆಯಲ್ಲಿ 15 ಗ್ರಾಂ ಬಂಗಾರ 2 ಜೊತೆ ಕಿವಿ ಓಲೆಗಳನ್ನು ಅನ್ನು ಕಳ್ಳತನ ಮಾಡಿದ್ದರು.
ಆರೋಪಿಗಳ ಖಚಿತ ಮಾಹಿತಿಯ ಮೇರೆಗೆ ಪಾವಗಡ ಪಟ್ಟಣ ಠಾಣೆಯ ಸಿ ಐ ಸುರೇಶ್ ನೇತೃತ್ವದಲ್ಲಿ ಎ.ಎಸ್. ಐ ತಿಮ್ಮರಾಜು, ಕೇಶವರಾಜು, ತಳವಾರ ರಾಜು, ಶಿವಶೇಖರ್, ಸಂಪತ್ ಕುಮಾರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಹಿಂದುಪುರದಲ್ಲಿ ಕಳ್ಳತನ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯಿಂದ ಒಟ್ಟು 47 ಗ್ರಾಂ ಬಂಗಾರದ ಓಡವೆಗಳು ಮತ್ತು 18,000/- ರೂ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.]
ಬಂಧಿತ ಆರೋಪಿಯನ್ನು ಮಧುಗಿರಿಯ ಜೈಲಿಗೆ ಕಳಿಸಲಾಗಿದೆ..
ವರದಿ : ಶ್ರೀನಿವಾಸಲು ಎ
