IMG 20260117 WA0009

ಪಾವಗಡ : ಬೈಕ್, ಟಿಪ್ಪರ್ ನಡುವೆ ಡಿಕ್ಕಿ ಓರ್ವ ಸಾವು ಮತ್ತೊಬ್ಬರಿಗೆ ಗಂಭೀರ ಗಾಯ….!

DISTRICT NEWS ತುಮಕೂರು

ಬೈಕ್, ಟಿಪ್ಪರ್ ನಡುವೆ ಡಿಕ್ಕಿ ಓರ್ವ ಸಾವು ಮತ್ತೊಬ್ಬರಿಗೆ ಗಂಭೀರ ಗಾಯ.

ಪಾವಗಡ: ಬೈಕ್ ಮತ್ತು ಟಿಪ್ಪರ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ವ್ಯಕ್ತಿಯೋರ್ವ ಮೃತಪಟ್ಟಿದ್ದು, ಮತ್ತೊಬ್ಬ ವ್ಯಕ್ತಿ ತೀವ್ರವಾಗಿ ಗಾಯಗೊಂಡ ಘಟನೆ ಶನಿವಾರ ಬೆಳಗ್ಗೆ ತಾಲೂಕಿನ ರಾಜವಂತಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.

ಪಟ್ಟಣದ ಕನುಮನ ಕೆರೆಯ ವಾಸಿ ಅಂಬರೀಶ್ (22) ಮೃತ ವ್ಯಕ್ತಿ.
ಮತ್ತೊಬ್ಬ ವ್ಯಕ್ತಿ ಭಾಸ್ಕರ್ ಗೆ ಗಂಭೀರ ಗಾಯಗಳಾಗಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ತೆರಳಿಸಿದ್ದಾರೆ ಎಂದು ತಿಳಿದುಬಂದಿದೆ.

ಅಂಬರೀಶ್ ಮತ್ತು ಭಾಸ್ಕರ್ ತುಮಕೂರಿನಲ್ಲಿ ಯಲ್ಲಿ ಕೋರ್ಟ್ ಕೇಸ್ ಇರುವುದರಿಂದ ಪಾವಗಡದಿಂದ ತುಮಕೂರಿಗೆ ತೆರಳುವಾಗ
ಮಡಕಶಿರ ಕಡೆಯಿಂದ ರಾಜವಂತಿಯ ಬಳಿ ರೈಲ್ವೆ ಕಾಮಗಾರಿಗಾಗಿ ಜಲ್ಲಿ ತುಂಬಿಕೊಂಡು ಬಂದಿದ್ದ ಟಿಪ್ಪರ್ ರಾಜವಂತಿಯ ಹೊರವಲಯದಲ್ಲಿ ತಿರುವು ಪಡೆಯುವಾಗ ಟಿಪ್ಪರ್ ಗೆ ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಅಂಬರೀಶ್ ಸಾವನ್ನಪ್ಪಿ, ಹಿಂಬದಿಯ ಸವಾರ ಭಾಸ್ಕರ್ ಗೆ ತೀವ್ರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ವಿಷಯ ತಿಳಿದ ನಂತರ ಪಟ್ಟಣ ಠಾಣೆಯ ಸಿಐ ಸುರೇಶ್ ಮತ್ತು ಡಿ ವೈ ಎಸ್ ಪಿ ಮಂಜುನಾಥ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕೇಸ್ ದಾಖಲಿಸಿಕೊಂಡಿ ದ್ದಾರೆ.

ವರದಿ : ಶ್ರೀನಿವಾಸಲು ಎ