IMG 20241117 WA0004

ಪಾವಗಡ : ಪೊಲೀಸರ ಕಿರಕುಳ : ದಯಾಮರಣ ಕೊಡಸಿ ಸ್ವಾಮಿ….!

 ಗೃಹಸಚಿವರ ಜಿಲ್ಲೆಯಲ್ಲಿ ಸಾಮಾನ್ಯರಿಗಿಲ್ಲ ರಕ್ಷಣೆ ವೈ ಎನ್‌ ಹೊಸಕೋಟೆ ಪೊಲೀಸರ ಅಟ್ಟಹಾಸ ಸಿವಿಲ್‌ ವ್ಯಾಜ್ಯದಲ್ಲಿ ಪೊಲೀಸರಿಗೆ ಏನು ಕೆಲಸ ಸೆಟಲ್ ಮೆಂಟ್‌ ಅಡ್ಡೆಯಾದ ಪೊಲೀಸ್‌ ಠಾಣೆ ದಯಾಮರಣ ಕೊಡಸಿ ಸ್ವಾಮಿ –  ನೊಂದ ಕುಟುಂಬದ ಆಕ್ರಂದನ…..! ಬೆಂಗಳೂರು : ಪಾವಗಡ ತಾಲ್ಲೂಕಿನ ವೈ ಎನ್‌ ಹೋಸಕೋಟೆ ಕೆಲ ಪೊಲೀಸರ ಅಟ್ಟಹಾಸಕ್ಕೆ ಸಾಮಾನ್ಯ ಜನ ನರಳಿ ಹೋಗುತ್ತಿದ್ದಾರೆ. ವಸೂಲಿ / ಸೆಟಲ್‌ ಮೆಂಟ್‌ ಅಡ್ಡೆಯಾಗಿಗೆ ಪೊಲೀಸ್‌ ಠಾಣೆಗೆ  ಹಣವಂತರು – ಬಲಾಢ್ಯರು ಪೆನ್ನು – ಪೇಪರ್‌ ಇದೆ ಎಂದು […]

Continue Reading
IMG 20241108 WA0002

ಪಾವಗಡ: ಕಾನೂನುಬಾಹಿರುವಾಗಿ ಮಕ್ಕಳನ್ನು ಕೊಳ್ಳುವುದು ಮಾರುವುದು ಶಿಕ್ಷಾರ್ಹ ಅಪರಾಧ….!

ಕಾನೂನುಬಾಹಿರುವಾಗಿ ಮಕ್ಕಳನ್ನು ಕೊಳ್ಳುವುದು ಮಾರುವುದು ಶಿಕ್ಷಾರ್ಹ ಅಪರಾಧ. ಪಾವಗಡ: ಪಟ್ಟಣದ ತಹಶೀಲ್ದಾರ್ ಕಚೇರಿಯ ಮುಂದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರುಗಳ ಸಂಯುಕ್ತಾಶ್ರಯದಲ್ಲಿ ಅಂತಾರಾಷ್ಟ್ರೀಯ ದತ್ತು ಮಾಸಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಜಾಗೃತಿ ಸಪ್ತಾಹ ಹಾಗೂ ಅರಿವು ಕಾರ್ಯಕ್ರಮಕ್ಕೆ ತಹಶೀಲ್ದಾರ್ ವರದರಾಜು ಚಾಲನೆ ನೀಡಿದರು. ಜಾಗೃತಿ ಜಾಥಾ ಕಾರ್ಯಕ್ರಮ ತಹಶೀಲ್ದಾರ್ ಕಛೇರಿಯಿಂದ ನಾಗರಕಟ್ಟೆ ವೃತ್ತ ದವರೆಗೆ ನಡೆಯಿತು ಕಾರ್ಯಕ್ರಮ ಉದ್ದೇಶಿಸಿ ಮಕ್ಕಳ ರಕ್ಷಣಾಧಿಕಾರಿಯಾದ ಶಿವಣ್ಣ ಮಾತನಾಡಿ.ಪ್ರತಿ ವರ್ಷ ನವಂಬರ್ ತಿಂಗಳನ್ನು […]

Continue Reading
IMG 20241106 WA0042

ಪಾವಗಡ : ವಕೀಲರ ಮೇಲೆ ಇನ್‌ಸ್ಪೆಕ್ಟರ್ ಹಲ್ಲೆ ಖಂಡಿಸಿ. ಪ್ರತಿಭಟನೆ….!

ವಕೀಲರ ಮೇಲೆ ಇನ್‌ಸ್ಪೆಕ್ಟರ್ ಹಲ್ಲೆ ಖಂಡಿಸಿ. ಪ್ರತಿಭಟನೆ. ಪಾವಗಡ : ತುಮಕೂರು ನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್‌ ದಿನೇಶ್‌ಕುಮಾರ್‌ ವಕೀಲ ರವಿಕುಮಾರ್ ಮೇಲೆ ಹಲ್ಲೆ ಮಾಡಿದ್ದನ್ನು ಖಂಡಿಸಿ ತಾಲ್ಲೂಕು ವಕೀಲರ ಸಂಘ ಬುಧವಾರ ಕೋರ್ಟ್ ಕಲಾಪಗಳನ್ನು ಬಹಿಷ್ಕರಿಸಿ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಹಶೀಲ್ದಾರ್ ವರದರಾಜು ರವರಿಗೆ ಮನವಿ ಪತ್ರ ಸಲ್ಲಿಸಿದರು. ವಕೀಲರ ಮೇಲೆ ಪೊಲೀಸರ ದಾಳಿಯನ್ನು ಖಂಡಿಸಿ, ತಕ್ಷಣವೇ ಇನ್‌ಸ್ಪೆಕ್ಟರ್‌ ದಿನೇಶ್‌ಕುಮಾರ್‌ ಅಮಾನತು ಮಾಡುವಂತೆ ವಕೀಲರು ಆಗ್ರಹಿಸಿದರು. ಪ್ರತಿಭಟನೆ ಉದ್ದೇಶಿಸಿ ವಕೀಲ ಕೆ.ಆರ್ ಜಯಸಿಂಹ […]

Continue Reading
IMG 20241030 WA0002

ಪಾವಗಡ : ದೊಮ್ಮತಮರಿ ಗ್ರಾಮಪಂಚಾಯತಿ ಗೆ ನೂತನ ಅಧ್ಯಕ್ಷರ ಆಯ್ಕೆ….!

ದೊಮ್ಮತಮರಿ‌ ಗ್ರಾಮಪಂಚಾಯತಿ ಅಧ್ಯಕ್ಷರ ಅವಿರೋಧ ಆಯ್ಕೆ. ಪಾವಗಡ : ತಾಲ್ಲೂಕಿನ ದೊಮ್ಮತಮರಿ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ದೊಮ್ಮತಮರಿ ಗ್ರಾಮದ ಹನುಮಂತರಾಯಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಿಂದಿನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಗಂಗಮ್ಮ ಕೃಷ್ಣಪ್ಪ ನವರ ರಾಜೀನಾಮೆಯಿಂದ ಅಧ್ಯಕ್ಷ ಸ್ಥಾನ ತೆರವಾಗಿದ್ದು.ಅಧ್ಯಕ್ಷ ಸ್ಥಾನಕ್ಕೆ ದೊಮ್ಮತಮರಿ ಗ್ರಾಮದ ಹನುಮಂತರಾಯಪ್ಪ ಮಾತ್ರ ನಾಮ ಪತ್ರ ಸಲ್ಲಿಸಿದ್ದು ಇತರೆ ಯಾವುದೇ ನಾಮಪತ್ರಗಳು ಸಲ್ಲಿಕೆಯಾಗದ ಕಾರಣ ತಹಶೀಲ್ದಾರ್ ವರದರಾಜು ರವರು ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಿ ಅವಿರೋಧ ಆಯ್ಕೆ ಪ್ರಕಟಿಸಿ ಹನುಮಂತರಾಯಪ್ಪ […]

Continue Reading
IMG 20241029 WA0010

ಪಾವಗಡ: ವಿದ್ಯಾರ್ಥಿಗಳಿಗೆ ಕಾನೂನಿನ ಅರಿವು ಅಗತ್ಯ….!

ವಿದ್ಯಾರ್ಥಿಗಳಿಗೆಕಾನೂನಿನ ಅರಿವು ಅಗತ್ಯ. ಹಿರಿಯ ಸಿವಿಲ್ ನ್ಯಾಯಾಧೀಶ ವಿ. ಮಾದೇಶ್ ಪಾವಗಡ : ವಿದ್ಯಾರ್ಥಿಗಳಿಗೆ ಓದಿನ ಜೊತೆ ಸಾಮಾನ್ಯ ಕಾನೂನಿನ ಅರಿವು ಅತಿ ಮುಖ್ಯವೆಂದು ಹಿರಿಯ ಸಿವಿಲ್ ನ್ಯಾಯಾಧೀಶ ವಿ ಮಾದೇಶ್ ತಿಳಿಸಿದರು. ಪಟ್ಟಣದ ಶ್ರೀ ವೆಂಕಟೇಶ್ವರ ಆಂಗ್ಲ ಪ್ರೌಢಶಾಲೆಯಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಮತ್ತು ವಿವಿಧ ಇಲಾಖೆಗಳ ವತಿಯಿಂದ ಏರ್ಪಡಿಸಿದ್ದ ಮಾನಸಿಕ ಆರೋಗ್ಯ ಮತ್ತು ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳಿಗೆ ಯಾವುದು ಸರಿ ಯಾವುದು […]

Continue Reading
WhatsApp Image 2024 10 25 at 5.27.24 PM 1

ತುಮಕೂರು : ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ತಮಟೆ ಚಳವಳಿ……!

ಅ.28ರಂದು ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ತಮಟೆ ಚಳವಳಿ ತುಮಕೂರು:ಸುಪ್ರಿಂಕೋರ್ಟಿನ 2024ರ ಆಗಸ್ಟ್ 01ರ ಆದೇಶದಂತೆರಾಜ್ಯದಲ್ಲಿ ಒಳಮೀಸಲಾತಿ ಜಾರಿಗೊಳಿಸಲು ಹಿಂದೇಟು ಹಾಕುತ್ತಿರುವರಾಜ್ಯ ಸರಕಾರದ ವಿರುದ್ದಅಕ್ಟೋಬರ್ 28ರಂದು ತುಮಕೂರುಜಿಲ್ಲೆಯ ಮಾದಿಗ ಸಮುದಾಯದ ವತಿಯಿಂದತಮಟೆ ಚಳವಳಿ ನಡೆಸಲುಇಂದು ನಡೆದ ಮಾದಿಗ ಮುಖಂಡರ ಸಭೆಯಲ್ಲಿತೀರ್ಮಾನ ಕೈಗೊಳ್ಳಲಾಯಿತು. ಹಿರಿಯರಾದ ನರಸೀಯಪ್ಪ, ವೈಎಚ್ ಹುಚ್ಚಯ್ಯ,ಉದ್ಯಮಿಡಿ.ಟಿ.ವೆಂಕಟೇಶ್,ಕೆoಚಮಾರಯ್ಯ,ಡಾ.ವೈ.ಟಿ.ಬಾಲಕೃಷ್ಣಪ್ಪ, ಡಾ.ಬಸವರಾಜು ಸೂರ್ಯಆಸ್ಪತ್ರೆಡಾ ಲಕ್ಷ್ಮಿಕಾಂತ್ ಪಾವಗಡ ಶ್ರೀರಾಮ್ ಸೇರಿದಂತೆ ಹಲವು ಮುಖಂಡರ ನೇತೃತ್ವದ ಒಳಮೀಸಲಾತಿ ಹೋರಾಟಕುರಿತ ಪೂರ್ವ ಭಾವಿ ಸಭೆಯಲ್ಲಿ ಹಾಜರಿದ್ದ ಬಹುತೇಕರು, ಒಳಮೀಸಲಾತಿ ಹೋರಾಟವನ್ನುಜಿಲ್ಲೆಯಲ್ಲಿ ಮೊದಲಿನಿಂದಲೂ ಮಾದಿಗ ಸಮುದಾಯ ನಡೆಸಿಕೊಂಡು […]

Continue Reading
IMG 20241024 WA0093

ತುಮಕೂರು : ಕೋಟ್ಪಾ ಕಾಯ್ದೆ ಅನುಷ್ಟಾನಕ್ಕೆಸೂಚನೆ

ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕೋಟ್ಪಾ ಕಾಯ್ದೆ ಅನುಷ್ಟಾನಕ್ಕೆಸೂಚನೆ –ಎಡಿಸಿ ತುಮಕೂರು (ಕ.ವಾ.) ಅ.24: ಜಿಲ್ಲೆಯಲ್ಲಿ ಕೋಟ್ಪಾ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಅನುಷ್ಟಾನ ಮಾಡಬೇಕೆಂದು ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ತಮ್ಮ ಕೊಠಡಿಯಲ್ಲಿ ಗುರುವಾರ ಜರುಗಿದ ತಂಬಾಕು  ನಿಯಂತ್ರಣ ಕೋಶನ 2ನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ  ನಡೆಸಿ ಮಾತನಾಡಿದ ಅವರು, ಸಂಬಂಧಿಸಿದ ಇಲಾಖೆಗಳು ಕೋಟ್ಪಾ ಕಾಯ್ದೆಯ ಅನುಷ್ಠಾನವನ್ನು ಕಟ್ಟುನಿಟ್ಟಿನ ಪಾಲನೆ ಮಾಡುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ತಂಬಾಕು ದುಷ್ಪರಿಣಾಮಗಳ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಸೂಚಿಸಿದರು. […]

Continue Reading
6205 13 11 2020 18 51 45 4 DSC8957

ತುಮಕೂರು : ಹೆಚ್ಚು ಶಬ್ದ ಮಾಡುವ ಪಟಾಕಿಗಳ ನಿಷೇಧ….!

ಹಸಿರು ಪಟಾಕಿ ಅಲ್ಲದೆ ಇನ್ನಾವುದೇ ನಿಷೇಧಿತ ಪಟಾಕಿಗಳನ್ನು ದಾಸ್ತಾನು ಮಾಡುವಂತಿಲ್ಲ. ಹೆಚ್ಚು ಶಬ್ದ ಮಾಡುವ ಪಟಾಕಿಗಳ ನಿಷೇಧ  ದೀಪಾವಳಿ : ದೀಪದ ಹಬ್ಬವನ್ನಾಗಿ ಆಚರಿಸಬೇಕು. ತುಮಕೂರು(ಕ.ವಾ.) ಅ.23: ದೀಪಾವಳಿ ಹಬ್ಬವನ್ನು ಪರಿಸರಸ್ನೇಹಿ ಹಬ್ಬವನ್ನಾಗಿ ಆಚರಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ 125 ಡೆಸಿಬಲ್‍ಗಳಿಗಿಂತಲೂ ಹೆಚ್ಚಿನ ಶಬ್ದ ಮಾಡುವ ಪಟಾಕಿಗಳನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸೂಚಿಸಿದ್ದಾರೆ. ಜಿಲ್ಲೆಯ ಸಾರ್ವಜನಿಕರ ಆಸ್ತಿ ಮತ್ತು ಆರೋಗ್ಯದ ಸಂರಕ್ಷಣೆ, ಪರಿಸರ ಮಾಲಿನ್ಯ ಹಾಗೂ ಶಬ್ದ ಮಾಲಿನ್ಯವನ್ನು ನಿಯಂತ್ರಣದಲ್ಲಿಡುವ ಉದ್ದೇಶದಿಂದ ಈ ನಿಷೇಧಕ್ಕೆ ಸೂಚನೆ […]

Continue Reading
23 10 24 Anantapura floodhit areas 12

ಅನಂತಪುರ :ಪರಿಹಾರ ಯೋಜನೆಯ ಚಿಂತನೆಯಲ್ಲಿ  ರಾಮಕೃಷ್ಣ ಸೇವಾಶ್ರಮ….!

ಪ್ರವಾಹ ಪರಿಸ್ಥಿತಿ :   ಪರಿಹಾರ ಯೋಜನೆಗೆ ಚಿಂತನೆಯಲ್ಲಿ  ರಾಮಕೃಷ್ಣ ಸೇವಾಶ್ರಮ, ಪಾವಗಡ ಮತ್ತು ಇನ್ಫೋಸಿಸ್ ಫೌಂಡೇಷನ್…..! ಪಾವಗಡ :ಆಂಧ್ರಪ್ರದೇಶದ ಅನಂತಪುರದಲ್ಲಿ ಕಳೆದ ಎರಡು ದಿನಗಳ ಹಿಂದೆ ಉಂಟಾದ ಭೀಕರ ಪ್ರವಾಹ ಪರಿಸ್ಥಿತಿಯ ಅವಲೋಕನ ಮತ್ತು ಪರಿಹಾರ ಯೋಜನೆಗೆ ಚಿಂತನೆ. ಇಂದು  ಪೂಜ್ಯ ಸ್ವಾಮಿ ಜಪಾನಂದಜೀ ರವರು ಆಂಧ್ರಪ್ರದೇಶದ ಅನಂತಪುರಕ್ಕೆ ಭೇಟಿ ನೀಡಿ ಅಲ್ಲಿಯ ಪರಿಸ್ಥಿತಿಯನ್ನು ಅವಲೋಕಿಸುವುದಕ್ಕೋಸ್ಕರ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು. ಅಂಬೇಡ್ಕರ್ ಕಾಲೋನಿ, ವೈ.ಎಸ್.ಆರ್.ಕಾಲೋನಿ, ಇಂದಿರಾ ಕಾಲೋನಿ ಮುಂತಾದ ಪ್ರದೇಶಗಳಿಗೆ ಭೇಟಿಯಿತ್ತು ಅಲ್ಲಿಯ […]

Continue Reading
IMG 20241022 WA0021

ಪಾವಗಡ: ಅರಸೀಕೆರೆ ಗ್ರಾಮ ಪಂಚಾಯತಿ ಅಧ್ಯಕ್ಷರ ಅವಿರೋಧ ಆಯ್ಕೆ.

ಗ್ರಾಮ ಪಂಚಾಯತಿ ಅಧ್ಯಕ್ಷರ ಅವಿರೋಧ ಆಯ್ಕೆ. ಪಾವಗಡ : ತಾಲ್ಲೂಕಿನ ಅರಸೀಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಜಂಗಮರಹಳ್ಳಿ ಗ್ರಾಮದ ಗೋಪಾಲಕೃಷ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಹಿಂದಿನ ಅಧ್ಯಕ್ಷರಾದ ನಾಗರಾಜು ರವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಗೋಪಾಲಕೃಷ್ಣ ರವರು ಮಾತ್ರ ನಾಮ ಪತ್ರ ಸಲ್ಲಿಸಿದ್ದು. ಬೇರೆ ನಾಮಪತ್ರಗಳು ಸಲ್ಲಿಕೆಯಾಗದ ಕಾರಣ ತಹಶೀಲ್ದಾರ್ ವರದರಾಜು ರವರು ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಿ ಅವಿರೋಧ ಆಯ್ಕೆ ಪ್ರಕಟಿಸಿ ಗೋಪಾಲಕೃಷ್ಣ ಅವರಿಗೆ ಅಧಿಕಾರ ವಹಿಸಿಕೊಟ್ಟರು. ಅರಸೀಕೆರೆ ಗ್ರಾಮ ಪಂಚಾಯಿತಿಯಲ್ಲಿ […]

Continue Reading