24 6 21 Doctors visit to villages prog SVIRHC 4

ಪಾವಗಡ: “ವೈದ್ಯರ ನಡೆ ಹಳ್ಳಿಯ ಕಡೆ”..!

ಪಾವಗಡ: – “ವೈದ್ಯರ ನಡೆ ಹಳ್ಳಿಯ ಕಡೆ” ಕಾರ್ಯಕ್ರಮ ಅತ್ಯಂತ ಶಿಸ್ತುಬದ್ದವಾಗಿ ಪಾವಗಡದ ಮೆಹರ್ ಬಾಬಾ ಸಮುದಾಯ ಭವನದಲ್ಲಿ ಉದ್ಘಾಟನೆಯಾಯಿತು. ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯನ್ನು ನುಡಿದ ಪೂಜ್ಯ ಸ್ವಾಮಿ ಜಪಾನಂದಜೀ ರವರು ಕೋವಿಡ್19 ಮೂರನೇ ಅಲೆಯ ಹಿನ್ನೆಲೆಯಲ್ಲಿ ಡಾ.ಜಿ.ಪರಮೇಶ್ವರ, ಮಾನ್ಯ ಕುಲಪತಿಗಳು, ಶ್ರೀ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ತುಮಕೂರು ರವರ ಅಮೂಲ್ಯ ಸಹಕಾರದಿಂದ ಪಾವಗಡದ ರೆಡ್‍ಜೋನ್ ಗ್ರಾಮಗಳಲ್ಲಿ ಈ ಕಾರ್ಯಕ್ರಮವನ್ನು ನಡೆಸುವ ಯೋಜನೆಯನ್ನು ತತ್‍ಕ್ಷಣ ಡಾ.ಜಿ.ಪರಮೇಶ್ವರ್ ರವರು ಒಪ್ಪಿಕೊಂಡು ಇಂದು ಹತ್ತು ಮಂದಿ ವೈದ್ಯರ […]

Continue Reading
IMG 20210624 WA0038

Tumkur: ಜಿಲ್ಲೆಯಾದ್ಯಂತ ಜಲ ಜೀವನ್ ಮಿಷನ್ ಯೋಜನೆ ಅನುಷ್ಠಾನ….!

ಜಿಲ್ಲೆಯಾದ್ಯಂತ ಜಲ ಜೀವನ್ ಮಿಷನ್ ಯೋಜನೆ ಅನುಷ್ಠಾನ ಕ್ಕೆ ಕ್ರಿಯಾ ಯೋಜನೆ ತಯಾರಿಸುವಂತೆ ಸೂಚನೆ ತುಮಕೂರು(ಕವಾ)ಜೂ.24: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ಜಲ ಜೀವನ್ ಮಿಷನ್’ ಯೋಜನೆಯನ್ನು ಜಿಲ್ಲೆಯಲ್ಲಿ ಸಂಪೂರ್ಣವಾಗಿ ಅನುಷ್ಠಾನ ಗೊಳಿಸಲು ಕ್ರಿಯಾ ಯೋಜನೆ ತಯಾರಿಸಿ ಮಾಹಿತಿ ಒದಗಿಸುವಂತೆ ಸಂಸದ ಜಿ.ಎಸ್. ಬಸವರಾಜು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಜಲ ಜೀವನ್ ಮಿಷನ್ ಯೋಜನೆಯ ಅನುಷ್ಠಾನ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಜಲಜೀವನ್ ಮಿಷನ್ ಯೋಜನೆಯ ಯಶಸ್ವಿ ಅನುಷ್ಠಾನ ಗ್ರಾಮವಾರು ಕ್ರಿಯಾ […]

Continue Reading
1200px Arachis hypogaea 004

ಪಾವಗಡ :ಪರಿಷ್ಕೃತ ಮಾರಾಟ ದರದಲ್ಲಿ ನೆಲಗಡಲೆ ಬಿತ್ತನೆ ಬೀಜ ವಿತರಣೆ

ಪರಿಷ್ಕೃತ ಮಾರಾಟ ದರದಲ್ಲಿ ನೆಲಗಡಲೆ ಬಿತ್ತನೆ ಬೀಜ ವಿತರಣೆ ತುಮಕೂರು(ಕವಾ)ಜೂ.22: ಕೃಷಿ ಇಲಾಖೆ ಕಾರ್ಯಕ್ರಮದಡಿ 2021ರ ಮುಂಗಾರು ಹಂಗಾಮಿಗೆ ಪರಿಷ್ಕೃತ ರಿಯಾಯಾತಿ ದರದಲ್ಲಿ ನೆಲಗಡಲೆ ಬಿತ್ತನೆ ಬೀಜವನ್ನು ವಿತರಿಸಲಾಗುತ್ತಿದೆ ಎಂದು ಜಂಟಿ ಕೃಷಿ ನಿರ್ದೇಶಕಿ ರಾಜಸುಲೋಚನಾ ತಿಳಿಸಿದ್ದಾರೆ. ಪರಿಷ್ಕೃತ ದರದನ್ವಯ ಪ್ರತಿ ಕ್ವಿಂಟಾಲ್ ಕೆ-6 ಹಾಗೂ ಟಿಎಂವಿ-2 ತಳಿ ನೆಲಗಡಲೆ ಬೀಜವನ್ನು ಹಿಂದಿನ ಮಾರಾಟ ದರಕ್ಕಿಂತ 400 ರೂ.ಗಳಷ್ಟು ಕಡಿಮೆಯಾಗಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.

Continue Reading
IMG 20210622 WA0009

ಪಾವಗಡ: 18+ ಗೆ ಕೋವಿಡ್ ಲಸಿಕೆ ಅಭಿಯಾನ

18+ ಗೆ ಕೋವಿಡ್ ಲಸಿಕೆ ಅಭಿಯಾನ ವೈ.ಎನ್.ಹೊಸಕೋಟೆ : 18-45 ವಯೋಮಾನ ಒಳಗಿನವರಿಗೆ ಸರ್ಕಾರ ಹಮ್ಮಿಕೊಂಡಿರುವ ಕೋವಿಡ್ ಲಸಿಕೆ ಅಭಿಯಾನಕ್ಕೆ ಗ್ರಾಮದಲ್ಲಿ ವಿಶ್ವ ಯೋಗದಿನವಾದ ಸೋಮವಾರದಂದು ಚಾಲನೆ ನೀಡಲಾಯಿತು. ಗ್ರಾಮದ ಅಶ್ವಥನ ಕಟ್ಟೆ ಬಳಿ ಡಾ.ಲಿಂಗರಾಜು ನೇತೃತ್ವದಲ್ಲಿ ನಡೆದ ಅಭಿಯಾನದಲ್ಲಿ ಸುಮಾರು 155ಜನರು ಕೋವಿಡ್ ಪ್ರಥಮ ಲಸಿಕೆ ಪಡೆದರು. ಲಸಿಕೆ ಪಡೆಯಲು ಯುವಜನತೆ ಉತ್ಸಾಹದಿಂದ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಯಾದ ವಿಶ್ವನಾಥ, ವಾಗೇಶ್, ವೆಂಕಟೇಶ್, ಧಪೇದಾರ್ ಶಾಂತಪ್ಪ ಮತ್ತು ಆಶಾ ಕಾರ್ಯಕರ್ತರು ಹಾಜರಿದ್ದರು. ವರದಿ ಸತೀಶ್

Continue Reading
21 6 21 Sanitization and Grocery kits to Auto drivers 2

ಪಾವಗಡ: ಆಟೋ – ಟ್ಯಾಕ್ಸಿ ಗಳಿಗೆ ಔಷಧಿ ಸಿಂಪಡಣೆ…!

ಪಾವಗಡ: ಕಳೆದ ಮೂರು ತಿಂಗಳುಗಳಿಂದ ಏಕಪ್ರಕಾರವಾಗಿ ಕೋವಿಡ್19 ಎರಡನೇ ಅಲೆಯ ಕಾರ್ಯ ಯೋಜನೆಗಳನ್ನು ಅತ್ಯಂತ ಶಿಸ್ತುಬದ್ದವಾಗಿ ತುಮಕೂರು ಜಿಲ್ಲೆಯಾದ್ಯಂತ ಸೇವೆಯನ್ನು ಸಲ್ಲಿಸುವ ಮಹತ್ಕಾರ್ಯವನ್ನು ಯಶಸ್ವಿಯಾಗಿ ನಡೆಸಲಾಗಿದೆ. ಈ ನಿಟ್ಟಿನಲ್ಲಿ ಇಂದು ಸರ್ಕಾರದ ನಿಯಮಗಳ ಪ್ರಕಾರ ಆಟೋಗಳು ಹಾಗೂ ಟ್ಯಾಕ್ಸಿಗಳು ಪ್ರತಿನಿತ್ಯ ಸ್ಯಾನಿಟೈಸರ್ ಮಾಡಿಕೊಂಡೇ ಹೊರಬರಬೇಕು ಎಂಬುದು ಎಲ್ಲರಿಗೂ ತಿಳಿದ ವಿಚಾರವೇ ಸರಿ. ಈಗಾಗಲೇ ಆಟೋಗಳಿಗೆ ಹಾಗೂ ಟ್ಯಾಕ್ಸಿಗಳಿಗೆ ಸ್ಯಾನಿಟೈಸರನ್ನು ಆಗಾಗ್ಗೆ ಮಾಡಿರುವ ಶ್ರೀರಾಮಕೃಷ್ಣ ಸೇವಾಶ್ರಮ ಇಂದು ಮುಂಜಾನೆ ಲಾಕ್‌ಡೌನ್ ತೆರೆದ ಹಿನ್ನೆಲೆಯಲ್ಲಿ ಸರಿಸುಮಾರು 300ಕ್ಕೂ ಹೆಚ್ಚು ಆಟೋಗಳಿಗೆ […]

Continue Reading
DSC 3191 scaled e1624198204784

ತುಮಕೂರು : ಲಾಕ್ ಡೌನ್ ಸಡಿಲಿಕೆ, ಏನೆಲ್ಲಾ ಇರಲಿದೆ…!

ಕೋವಿಡ್ ಪಾಸಿಟಿವಿಟಿ ಪ್ರಮಾಣ ಇಳಿಕೆ: ಲಾಕ್ ಡೌನ್ ಸಡಿಲಿಕೆ- ಜಿಲ್ಲಾಧಿಕಾರಿಗಳು ತುಮಕೂರು,ಜೂ.20(ಕ.ವಾ):ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ಪ್ರಮಾಣದಲ್ಲಿ ಇಳಿಕೆಯಾಗಿರುವುದರಿಂದ ಸರ್ಕಾರದ ಮಾರ್ಗಸೂಚಿಗಳಿಗೊಳಪಟ್ಟು ಕೆಲವು ಲಾಕ್ ಡೌನ್ ನಿಯಮಗಳನ್ನು ಸಡಿಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ಪ್ರಮಾಣ ಶೇ. 5% ಕ್ಕಿಂತ ಕಡಿಮೆ ಇದ್ದರೂ ಸಹ ಸಾಂಕ್ರಾಮಿಕ ರೋಗವನ್ನು ಉದಾಸೀನ ಮಾಡುವಂತಿಲ್ಲ. ಈ ನಿಟ್ಟಿನಲ್ಲಿ ಸರ್ಕಾರವು ಜಿಲ್ಲೆಗೆ ಅನ್ವಯಿಸುವಂತೆ ಪರಿಷ್ಕೃತ ಮಾರ್ಗಸೂಚಿಯನ್ನು ಜಾರಿ ಮಾಡಿದ್ದು ಸಾರ್ವಜನಿಕರು ಈ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ ಕೋವಿಡ್ 19 […]

Continue Reading
20 6 21 grocery kits to Savitha Samaja SRKS PVG 1

ಪಾವಗಡ: ಸವಿತಾ ಸಮಾಜದವರಿಗೆ ದಿನಸಿ ಕಿಟ್ಟುಗಳ ವಿತರಣೆ…!

ಪಾವಗಡ: ಭಾನುವಾರವಾದಾಗ್ಯೂ ಸಹ ತಾಲ್ಲೂಕಿನ ಸಮಸ್ತ ಸವಿತಾ ಸಮಾಜದವರಿಗೆ ದಿನಸಿ ಕಿಟ್ಟುಗಳನ್ನು ವಿತರಣೆ ಮಾಡಲಾಯಿತು. ಸರಿಸುಮಾರು 200ಕ್ಕೂ ಹೆಚ್ಚು ಸವಿತಾ ಸಮಾಜದ ಬಂಧುಗಳು ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರಕ್ಕೆ ಬಂದು ಅತ್ಯಂತ ಶಿಸ್ತು ಬದ್ದವಾಗಿ ದಿನಸಿ ಕಿಟ್ಟುಗಳನ್ನು ಪಡೆದರು. ಈ ಕಾರ್ಯಕ್ರಮದಲ್ಲಿ ಪಾವಗಡದ ಸರ್ಕಾರಿ ಸಹಾಯಕ ಅಭಿಯೋಜಕರಾದ ಶ್ರೀ ಮಂಜುನಾಥ ರವರು ಎಲ್ಲ ಸವಿತಾ ಸಮಾಜದವರಿಗೆ ಶುಚಿತ್ವದ ಬಗ್ಗೆ ಹಾಗೂ ಮುಖಗವಸುಗಳನ್ನು ಉಪಯೋಗಿಸುವ ಬಗ್ಗೆ ಅತ್ಯಂತ ಮನಮುಟ್ಟುವಂತೆ ವಿವರಿಸಿದರು. ಒಟ್ಟಿನಲ್ಲಿ 12000 ಕುಟುಂಬಕ್ಕೂ ಮೀರಿದ […]

Continue Reading
IMG 20210619 WA0001

ಪಾವಗಡ:ಅಕ್ಷರ ದಾಸೋಹ ಸಿಬ್ಬಂದಿಗೆ ದಿನಸಿ ಕಿಟ್ ವಿತರಣೆ….!

ಅಕ್ಷರ ದಾಸೋಹ ಸಿಬ್ಬಂದಿಗೆ ದಿನಸಿ ಕಿಟ್ ವೈ.ಎನ್.ಹೊಸಕೋಟೆ: ಕೋವಿಡ್ ಸಂಕಷ್ಟದಲ್ಲಿರುವ ತಾಲ್ಲೂಕಿನ ಜನತೆಗೆ ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮ ಮತ್ತು ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿಬಾಬಾ ಅನ್ನಪೂರ್ಣೇಶ್ವರಿ ಟ್ರಸ್ಟ್ ಗಳು ಮಾಡುತ್ತಿರುವ ನಿಸ್ವಾರ್ಥ ಸೇವೆ ಮೆಚ್ಚುವಂತಹದ್ದು ಎಂದು ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಹನುಮಂತರಾಯಪ್ಪ ತಿಳಿಸಿದ್ದಾರೆ. ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಶುಕ್ರವಾರದಂದು ಶ್ರೀ ರಾಮಕೃಷ್ಣ ಸೇವಾಶ್ರಮ ಮತ್ತು ಶ್ರೀ ಸತ್ಯಸಾಯಿಬಾಬಾ ಶ್ರಿ ಅನ್ನಪೂರ್ಣ ಟ್ರಸ್ಟ್ ನ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವೈ.ಎನ್.ಹೊಸಕೋಟೆ, ದೊಡ್ಡಹಳ್ಳಿ,ಮರಿದಾಸನಹಳ್ಳಿ ಕ್ಲಸ್ಟರ್ ಶಾಲೆಗಳ […]

Continue Reading
DSC 4870 e1624032985331

ಪಾವಗಡ: ಎರಡನೇ ಡೋಸ್ ಲಸಿಕೆ ಪಡೆಯಲು ಬಾಕಿ ಉಳಿದಿರುವವರೆಲ್ಲರಿಗೂ ಲಸಿಕೆ…!

ಮೊದಲನೇ ಡೋಸ್ ಪಡೆದು ಎರಡನೇ ಡೋಸ್ ಲಸಿಕೆ ಪಡೆಯಲು ಬಾಕಿ ಉಳಿದಿರುವವರೆಲ್ಲರಿಗೂ ಲಸಿಕೆ: ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ* ತುಮಕೂರು ಜೂ.18(ಕವಾ): ಕೋವಿಡ್ ಮೊದಲನೇ ಲಸಿಕೆ ಪಡೆದು 84 ದಿನ ಪೂರೈಸಿ ಎರಡನೇ ಡೋಸ್ ಲಸಿಕೆ ಪಡೆಯಲು ಬಾಕಿ ಉಳಿದಿರುವ ಸಾರ್ವಜನಿಕರು ಸೇರಿದಂತೆ 21592 ಫ್ರಂಟ್‍ಲೈನ್ ಹಾಗೂ ಹೆಲ್ತ್ ಕೇರ್ ವರ್ಕರ್ಸ್‍ಗಳಿಗೆ ಆದ್ಯತೆ ಮೇರೆಗೆ ಶನಿವಾರ ಮತ್ತು ಭಾನುವಾರದಂದು ಹತ್ತಿರದ ಲಸಿಕಾ ಕೇಂದ್ರದಲ್ಲಿ ಲಸಿಕೆ ನೀಡಲು ಅಗತ್ಯ ಕ್ರಮವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿ […]

Continue Reading
17 6 21 Handing over 2 geysers to Tahsildar 1

ಪಾವಗಡ : ಕೋವಿಡ್ ಆರೈಕೆ ಕೇಂದ್ರ ಕ್ಕೆ ಇನ್ಸ್ಟಂಟ್ ಗೀಸರ್‌ ಗಳ ಕೊಡುಗೆ….!

 ಪಾವಗಡ:-  ಕುರುಬರ ಹಳ್ಳಿ ಗೇಟ್ ಬಳಿಯಿರುವ ಕೋವಿಡ್ ಆರೈಕೆ ಕೇಂದ್ರದಲ್ಲಿರುವ ಕೋವಿಡ್ ಸೋಂಕಿತರಿಗೆ ಬಿಸಿ ನೀರನ್ನು ಪಡೆಯುವುದು ಅತ್ಯಂತ ದುಸ್ತರವಾಗಿದ್ದನ್ನು ತಿಳಿದು ಉಪವಿಭಾಗಾಧಿಕಾರಿಗಳಾದ ಶ್ರೀ ಸೋಮಪ್ಪ ಕಡಕೊಳ್ ರವರ ಮನವಿಗೆ ಸ್ಪಂದಿಸಿದ ಪೂಜ್ಯ ಸ್ವಾಮಿ ಜಪಾನಂದಜೀ ರವರು ಶ್ರೀರಾಮಕೃಷ್ಣ ಸೇವಾಶ್ರಮದ ವತಿಯಿಂದ ಎರಡು ಇನ್ಸ್ಟಂಟ್ ಗೀಸರ್‍ಗಳನ್ನು ನೀಡಿದರು. ಈ ನೂತನ ಇನ್ಸ್ಟಂಟ್ ಗೀಸರ್‍ಗಳು ಕೋವಿಡ್ ಸೋಂಕಿತರಿಗೆ ಕುಡಿಯಲು ಹಾಗೂ ಔಷಧಿ ಮಾತ್ರೆಗಳನ್ನು ಸೇವಿಸಲು ಅತ್ಯಂತ ಉಪಯುಕ್ತವಾಗಿರುತ್ತದೆ. ಅಲ್ಲಿಯ ಸೋಂಕಿತರು ಕುಡಿಯಲು ಬಿಸಿನೀರಿಲ್ಲದೆ ಬಳಲುತ್ತಿರುವ ವಿಚಾರವನ್ನು ಉಪವಿಭಾಗಾಧಿಕಾರಿಗಳು ಪೂಜ್ಯ […]

Continue Reading