IMG 20211120 WA0033

ಪಾವಗಡ: ತುಂಬಿ ಹರಿಯುತ್ತಿರುವ ಉತ್ತರ ಪಿನಾಕಿನಿ….!

ಪಾವಗಡ : ತಾಲೂಕಿನ ನಾಗಲಮಡಿಕೆ ಬಳಿ ಉತ್ತರ ಪಿನಾಕಿನಿ ಚೆಕ್ ಡ್ಯಾಂ ತುಂಬಿ ಹರಿಯುತ್ತಿರುವ ಹಿನ್ನೆಲೆ ಶಾಸಕ ವೆಂಕಟರವಣಪ್ಪ ಶನಿವಾರ ಬಾಗಿನ ಸಮರ್ಪಿಸಿದರು. ಪೂಜೆ ಸಲ್ಲಿಸಿ ಮಾತನಾಡಿದ ಅವರು, ಡ್ಯಾಂ ನಿರ್ಮಾಣದ ವೇಳೆ ವಿರೋಧ ವ್ಯಕ್ತವಾಗಿತ್ತು. ವಿರೋಧದ ನಡುವೆಯೇ ಸುಮಾರು 12 ಕೋಟಿ ರೂ ವೆಚ್ಚದಲ್ಲಿ ಡ್ಯಾಂ ನಿರ್ಮಾಣ ಪೂರ್ಣಗೊಳಿಸಲಾಯಿತು. ಇದೀಗ ಚೆಕ್ ಡ್ಯಾಂ ನಿಂದ ನಾಗಲಮಡಿಕೆ ಹೋಬಳಿ ಜನತೆಗೆ ಅನುಕೂಲವಾಗುತ್ತಿದೆ ಎಂದರು. ಅಂತರ್ಜಲ ವೃದ್ಧಿಯಾಗಿ, ನೀರಿನಲ್ಲಿದ್ದ ಫ್ಲೋರೈಡ್ ಅಂಶ ಕಡಿಮೆಯಾಗಿದೆ. ಪೈಪ್ ಲೈನ್ ಮೂಲಕ ಪಟ್ಟಣಕ್ಕೆ […]

Continue Reading
IMG 20211119 WA0057

ಪಾವಗಡ- ವರುಣನ ಆರ್ಭಟಕ್ಕೆ ಜನ ಜೀವನ ಅಸ್ತ- ವ್ಯಸ್ತ….!

ಇಂದು ಪಾವಗಡ ತಾಲೂಕಿನಾದ್ಯಂತ ಸುರಿದ ಮಳೆಯ ಪರಿಣಾಮ ಕೆರೆ-ಕುಂಟೆಗಳು ನೀರಿನಿಂದ ತುಂಬಿದ್ದು ತಾಲೂಕಿನಲ್ಲಿ ಮಲೆನಾಡಿನ ವಾತಾವರಣ ಸೃಷ್ಟಿಯಾಗಿತ್ತು. ವೆಂಕಟಾಪುರ —-ಹಲವಾರು ವರ್ಷಗಳಿಂದ ನೀರಿಲ್ಲದೆ ಬತ್ತಿ ಹೋಗಿದ್ದ ಮಣಿ ಮುಕ್ತಾವತಿ ನದಿಯು ಇಂದು ಸುರಿದ ಮಳೆಯ ಪರಿಣಾಮದಿಂದಾಗಿ ಮಣಿ ಮುಕ್ತಾವತಿ ನದಿಯು ಪ್ರವಾಹದಂತೆ ಹರಿಯಿತು ಪರಿಣಾಮ ಬತ್ತಿಹೋದಂತಹ ಬೋರ್ವೆಲ್ ಗಳಿಗೆ ಮರು ಜೀವ ಬಂದಂತಾಯಿತು ಎಂದು ವೆಂಕಟಾಪುರದ ಸತ್ಯಪ್ರಕಾಶ್ ತಿಳಿಸಿದರು. ಬಾಲಮ್ಮ ನಹಳ್ಳಿ ——. ಇಂದು ಸುರಿದ ಮಳೆಯ ಪರಿಣಾಮ ಗುಂಡಾರ್ಲಹಳ್ಳಿಯ ಕೆರೆ ತುಂಬಿ ಹರಿಯಿತು ಪರಿಣಾಮವಾಗಿ ಬಾಲಮ್ಮ […]

Continue Reading
IMG 20211118 WA0025

ಪಾವಗಡ: ಮದ್ಯದ ಅಂಗಡಿ ಸ್ಥಳಾಂತರಿಸಲು ಆಗ್ರಹಿಸಿ ಪ್ರತಿಭಟನೆ….!

 ಪಾವಗಡ: -ಅರಸೀಕೆರೆ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ವ್ಯಾಪ್ತಿಯ ಗ್ರಾಮಸ್ಥರು, ಮುಖಂಡರು, ಮಹಿಳಾ ಸಂಘಟನೆಗಳು  ಸೇರಿ ಅರಸೀಕೆರೆ ಗ್ರಾಮದಲ್ಲಿರುವ ಶ್ರೀಮಾತಾ ವೈನ್ ಸೆಂಟರ್ ಅನ್ನು ಊರಿನಿಂದ ಹೊರಗೆ ಸ್ಥಳಾಂತರಿಸಲು ಅರಸೀಕೆರೆ ಗ್ರಾಮದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು ಪ್ರತಿಭಟನೆ ಮಾಡುವ ಸ್ಥಳಕ್ಕೆ ಪಾವಗಡ ಅಬಕಾರಿ ಇಲಾಖೆ ಅಧಿಕಾರಿಗಳು ಆಗಮಿಸಿ ಮನವಿ ಪತ್ರ ಸ್ವೀಕರಿಸಿದರು ಅನಂತರ ಮಾತನಾಡಿದ ಅಬಕಾರಿ ಇಲಾಖೆಯ ಅಧಿಕಾರಿಗಳು ಇನ್ನು ಎರಡು ತಿಂಗಳೊಳಗೆ ಸ್ಥಳಾಂತರಿಸಲಾಗುವುದು ಎಂದು ತಿಳಿಸಿದರು ಈ ಸಂದರ್ಭದಲ್ಲಿ ಅರಸೀಕೆರೆ ಗ್ರಾಮದ  ಕಾಂಗ್ರೆಸ್ ಮುಖಂಡರಾದ ಮಲ್ಲೇಶ್ ಹಾಗೂ […]

Continue Reading
IMG 20211117 WA0050

ಪಾವಗಡ: ಮಳೆಯಿಂದ ಕೆಲವೆಡೆ ಬೆಳೆ ಹಾನಿ….!

ಪಾವಗಡ: ತಾಲ್ಲೂಕಿನಾದ್ಯಂತ ಮಂಗಳವಾರ ರಾತ್ರಿ ಬಿದ್ದ ಮಳೆಯಿಂದ ಕೆಲವೆಡೆ ಬೆಳೆ ಹಾನಿಯಾಗಿದೆ. ತಾಲ್ಲೂಕಿನ ಸುಂಕಾರ್ಲಕುಂಟೆ ಪದ್ಮಾವತಿ ಎಂಬುವರ 3 ಎಕರೆ ಜಮೀನಿನಲ್ಲಿ ಬೆಳೆಯಲಾದ ಮೆಕ್ಕೆ ಜೋಳ ಬೆಳೆ ಸಂಪೂರ್ಣ ನೆಲ ಕಚ್ಚಿದೆ. ಸುಮಾರು 2 ಲಕ್ಷ ರೂ ನಷ್ಟವಾಗಿರುವುದಾಗಿ ಅಂದಾಜಿಸಲಾಗಿದೆ. ಗುಂಡ್ಲಹಳ್ಳಿ ಗ್ರಾಮದ ಲಿಂಗಾನಾಯಕ ಅವರ 12 ಎಕರೆ ಜಮೀನಿನಲ್ಲಿ ಕಟಾವಿಗೆ ಬಂದಿದ್ದ ಶೇಂಗಾ ಸಂಪೂರ್ಣ ಹಾನಿಯಾಗಿದೆ. ಮೇವಿಗೆ ಬರುತ್ತಿದ್ದ ಶೇಂಗಾ ಬಳ್ಳಿಯೂ ಸಹ ಹಾಳಾಗಿದೆ. ಸುಮಾರು 3 ಲಕ್ಷ ನಷ್ಟವಾಗಿರುವುದಾಗಿ ರೈತ ತಿಳಿಸಿದ್ದಾರೆ. ಮಳೆಯಿಂದ ಕಡಮಲಕುಂಟೆ […]

Continue Reading
17 11 21 Ramanashree Award presented to Swami Japanandaji 2

ಪಾವಗಡ: ಸ್ವಾಮಿ ಜಪಾನಂದಜೀ ಮಹಾರಾಜ್ ರವರಿಗೆ ಪ್ರತಿಷ್ಠಿತ ರಮಣಶ್ರೀ ಶರಣ ಪ್ರಶಸ್ತಿ….!

ಪೂಜ್ಯ ಸ್ವಾಮಿ ಜಪಾನಂದಜೀ ಮಹಾರಾಜ್ ರವರಿಗೆ ಪ್ರತಿಷ್ಠಿತ ರಮಣಶ್ರೀ ಶರಣ ಪ್ರಶಸ್ತಿ ಪ್ರದಾನ ಬೆಂಗಳೂರು: –  ನಗರದ ಪ್ರತಿಷ್ಠಿತ ಹೋಟೆಲ್ ಆದ ರಮಣಶ್ರೀ ರಿಚ್ಮಂಡ್‍ನ ಅದ್ಧೂರಿ ಸಭಾಂಗಣದಲ್ಲಿ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ರವರು “ರಮಣಶ್ರೀ ಶರಣ ಪ್ರಶಸ್ತಿಯನ್ನು” ಪ್ರದಾನ ಮಾಡಿದರುಪೂಜ್ಯ ಸ್ವಾಮಿ ಜಪಾನಂದಜೀ ರವರಿಗೆ ಈ ಪ್ರತಿಷ್ಠಿತ ಪ್ರಶಸ್ತಿ, ಫಲಕ ಹಾಗೂ ಗೌರವ ಸಮರ್ಪಣೆಯನ್ನು ಮಾನ್ಯ ಮುಖ್ಯಮಂತ್ರಿಗಳು ನೆರೆದ ಗಣ್ಯರ ಸಮ್ಮುಖದಲ್ಲಿ ಪ್ರದಾನ ಮಾಡಿದರು. ಅಖಿಲ ಭಾರತ ಶರಣ ಸಾಹಿತ್ಯ ಹಾಗೂ ಶ್ರೀ ರಮಣಶ್ರೀ […]

Continue Reading
images 16

ಪಾವಗಡ: ಮಹಿಳೆ ಬರ್ಬರ ಹತ್ಯೆ…!

ಪಾವಗಡ: ತಾಲ್ಲೂಕಿನ ಮುರಾರಾಯನಹಳ್ಳಿಯಲ್ಲಿ ಮಂಗಳವಾರ ಬೆಳಗಿನ ಜಾವ ಮಹಿಳೆಯೋರ್ವರನ್ನು ಹತ್ಯೆ ಮಾಡಲಾಗಿದೆ. ಇದೇ ಗ್ರಾಮದ ಲಕ್ಷ್ಮಿನರಸಮ್ಮ(52) ಹತ್ಯೆಗೀಡಾದವರು. ಕುತ್ತಿಗೆಗೆ ವೈರ್ ಬಿಗಿದು, ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಲಾಗಿದೆ. ಮಹಿಳೆಗೆ ಸೇರಿದ ಕುರಿಗಳು ಗಾಬರಿಗೊಂಡು ಕೂಗುವುದನ್ನು ಕೇಳಿಸಿಕೊಂಡು ನೆರೆ ಹೊರೆಯವರು ಸ್ಥಳಕ್ಕೆ ಬಂದಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಮಹಿಳೆ ನರಳಾಡುವುದನ್ನು ಗಮನಿಸಿ, ನೀರು ಕುಡಿಸಿ ಮಹಿಳೆಯನ್ನು ರಕ್ಷಿಸಲು ಗ್ರಾಮಸ್ಥರು ಯತ್ನಿಸಿದ್ದಾರೆ. ಆದರೆ ಅಷ್ಟರಲ್ಲಿ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಪೊಲೀಸ್ ಇನ್ ಸ್ಪೆಕ್ಟರ್ ಲಕ್ಷ್ಮಿಕಾಂತ್, ಸಿಬ್ಬಂದಿ ಸ್ಥಳ […]

Continue Reading
IMG 20211116 WA0007

ಪಾವಗಡ ಪುರಸಭೆಗೆ ನೂತನ ಅಧ್ಯಕ್ಷರ ಆಯ್ಕೆ…!

ಪಾವಗಡ :-  ಪಾವಗಡ ಪುರಸಭೆಯ ನೂತನ ಅಧ್ಯಕ್ಷ ರಾಗಿ ಗಂಗಮ್ಮ ಅವಿರೋಧವಾಗಿ ಆಯ್ಕೆಯಾದರು. ಇತ್ತೀಚೆಗೆ ಅಧ್ಯಕ್ಷ ರಾಗಿದ್ದ ರಾಮಾಂಜಿನಪ್ಪ ಅವರ ರಾಜಿನಾಮೆ ನೀಡಿದ್ದರಿಂದ ಸ್ಥಾನವು ತೆರವಾಗಿದ್ದರಿಂದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಪಾವಗಡದ ತಹಶೀಲ್ದಾರ್ ನಾಗರಾಜುರವರು ಚುನಾವಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು ಪಾವಗಡ ಪಟ್ಟಣದಲ್ಲಿ 23 ವಾರ್ಡ್ ಗಳಿದ್ದು. 20 ವಾರ್ಡ್ ಗಳಲ್ಲಿ ಕಾಂಗ್ರೆಸ್ ಸದಸ್ಯರಿದ್ದು. 2 ವಾರ್ಡ್ ಗಳಲ್ಲಿ ಜೆಡಿಎಸ್ ಸದಸ್ಯರಿದ್ದು. 01 ವಾರ್ಡಿನಲ್ಲಿ ಸ್ವತಂತ್ರ ಅಭ್ಯರ್ಥಿ ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ  ಗಂಗಮ್ಮ ಅವರು ಮಾತ್ರ […]

Continue Reading
IMG 20211115 WA0035

ಪಾವಗಡ: ತಹಶಿಲ್ದಾರ್ ವಿರುದ್ದ ಪ್ರತಿಭಟನೆ….!

  ಪಾವಗಡ ತಾಲೂಕು ಆಡಳಿತ ಕಚೇರಿ ಮುಂದೆ ಗ್ರೇಡ್ 2 ತಹಶೀಲ್ದಾರ್ ಸುಮತಿ ಅವರ ಕಾರ್ಯವೈಖರಿಯನ್ನು ಪ್ರಶ್ನಿಸಿ ಪ್ರತಿಭಟನೆ. ಪಾವಗಡ:  ಗ್ರೇಡ್‌ 2 ತಹಶಿಲ್ದಾರ್ ಸುಮತಿ  ಅವರು ಅಂಗವಿಕಲ ವೇತನ ಪಡೆಯಲು ಅರ್ಜಿ ಸಲ್ಲಿಸಲು ಬರುವ ಅಂಗವಿಕಲರಿಗೆ ಕೆಲಸವನ್ನು ಮಾಡಿಕೊಡದೆ ಸದಾ ಅಲೆಸುತ್ತಾರೆ .ವಿದ್ಯಾರ್ಥಿಗಳ ಶಾಲಾ ದಾಖಲಾತಿ ವರ್ಜಿನಲ್ ಕೊಡಬೇಕು. ನಕಲು ಪ್ರತಿಗಳನ್ನು ಸ್ವೀಕರಿಸಲಾಗುವುದಿಲ್ಲ. ಶಾಲಾ ದಾಖಲಾತಿ ವರ್ಜಿನಲ್ ಪಡೆಯುವಂತೆ ಸರ್ಕಾರದ ಆದೇಶವಿದೆ ಎಂದು ಸದಾ ಪೋಷಕರು ಮತ್ತು ವಿದ್ಯಾರ್ಥಿಗಳನ್ನು ಅಲೆದಾಡಿ ಸುವುದು ಸಾಮಾನ್ಯವಾಗಿಬಿಟ್ಟಿದೆ ಜಾತಿ ಮತ್ತು […]

Continue Reading
IMG 20211112 WA0001

ಬೀದಿ ಬದಿ ವ್ಯಾಪಾರಿಗಳು ಸಂಘಟಿತರಾಗಿ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು…..!

ಪಾವಗಡ: ಬೀದಿ ಬದಿ ವ್ಯಾಪಾರಿಗಳು ಸಂಘಟಿತರಾಗಿ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಬೀದಿ ಬದಿ ವ್ಯಾಪಾರಿಗಳ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಂಜಣ್ಣ ತಿಳಿಸಿದರು. ಪಟ್ಟಣದಲ್ಲಿ ಬುಧವಾರ ಬೀದಿ ಬದಿ ವ್ಯಾಪಾರಿಗಳ ಸಂಘ, ಚಿನ್ಮಯ ಸಂಸ್ಥೆ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವ್ಯಾಪಾರ ಮಾಡಿ ಜೀವನ ನಡೆಸುವ ಬೀದಿ ಬದಿ ವ್ಯಾಪಾರಿಗಳು ತಮ್ಮ ತಮ್ಮ ಹಕ್ಕುಗಳನ್ನು ಪಡೆಯಲು ಸಂಘಟಿತರಾಗಬೇಕು. ರಾಜ್ಯ, ಕೇಂದ್ರ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಪಡೆದುಕೊಂಡು ಸಬಲರಾಗಬೇಕು ಎಂದರು. ಪುರಸಭೆ ಮುಖ್ಯಾಧಿಕಾರಿ […]

Continue Reading
IMG 20211108 175521 scaled

ಪಾವಗಡ: ವೆಂಕಟಾಪುರ ಸರ್ಕಾರಿ ಆಸ್ಪತ್ರೆ ಜಾಗ ಒತ್ತುವರಿ….?

* ಪಾವಗಡ: ವೆಂಕಟಾಪುರ ಸರ್ಕಾರಿ ಆಸ್ಪತ್ರೆ ಜಾಗ ಒತ್ತುವರಿ….?    *  ವೆಂಕಟಾಪುರ ಗ್ರಾಮಪಂಚಾಯತಿಯ ಪಡಿಒ ಅಧ್ಯಕ್ಷ ರು ಒತ್ತುವರಿಗೆ ಸಾಥ್ ಆರೋಪ….! ಪಾವಗಡ ತಾಲೂಕು ವೆಂಕಟಾಪುರ ಗ್ರಾಮದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಕಾಂಪೌಂಡ್ ಕಾಮಗಾರಿ ನಡೆಯುತ್ತಿದ್ದು. ಪ್ರಾಥಮಿಕ ಆರೋಗ್ಯ ಕೇಂದ್ರದ ಜಾಗವನ್ನು ಸರ್ವೆ ಮಾಡದೆ ಪಕ್ಕದಲ್ಲಿರುವ ಖಾಸಗಿ ಜಮೀನಿನ ಮಾಲೀಕರಿಗೆ ಅನುಕೂಲವಾಗುವ ರೀತಿಯಲ್ಲಿ ಸುಮಾರು ನಾಲ್ಕರಿಂದ ಐದು ಅಡಿ ಸರ್ಕಾರಿ ಜಾಗವನ್ನು ಖಾಸಗಿ ಜಮೀನಿನವರೆಗೆ ಅನುಕೂಲವಾಗುವಂತೆ ಕಾಂಪೌಂಡ್ ಕಾಮಗಾರಿ ನಡೆಸಲಾಗುತ್ತಿದೆ ಎಂದು ವೆಂಕಟಾಪುರ ಗ್ರಾಮದ ಸತ್ಯಪ್ರಕಾಶ್ […]

Continue Reading