IMG 20201029 WA0011

ಪಾವಗಡ: ನೂತನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅಧಿಕಾರ ಸ್ವೀಕಾರ….!

ಪಾವಗಡದ ಲೋಕೋಪಯೋಗಿ ಇಲಾಖೆಗೆ ನೂತನವಾಗಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ಅನಿಲ್ ಕುಮಾರ್ ರವರು ಅಧಿಕಾರ ಸ್ವೀಕಾರ ಮಾಡಿದರು. ಹತ್ತು ವರ್ಷಗಳ ಕಾಲ ಲೋಕೋಪಯೋಗಿ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತ ಬಂದಿರುವ ಅಧಿಕಾರಿ ಅನಿಲ್ ಕುಮಾರ್ ರವರು ಚಳ್ಳಕೆರೆಯಲ್ಲಿ ಎ.ಇ.ಇ ಯಾಗಿ ಕಾರ್ಯನಿರ್ವಹಿಸಿ ಪ್ರಸ್ತುತ ಪಾವಗಡದ ಲೋಕೋಪಯೋಗಿ ಇಲಾಖೆಯಲ್ಲಿ ಅಧಿಕಾರ ಸ್ವೀಕರಿಸಿರುವುದು ಜನರಲ್ಲಿ ಉತ್ತಮ ಅಭಿಪ್ರಾಯ ಮೂಡಿದೆ. ಇದೇ ಸಂದರ್ಭದಲ್ಲಿ ಮಾತನಾಡಿದ ಎ .ಇ.ಇ ಅನಿಲ್ ಕುಮಾರ್ ರವರು ಲೋಕೋಪಯೋಗಿ ಇಲಾಖೆಯಲ್ಲಿನ ಕಾಮಗಾರಿಗಳು ಅತಿ ಗುಣಮಟ್ಟದಿಂದ ಕೂಡಿರುವಂತೆ ಎಚ್ಚರವಹಿಸುತ್ತ […]

Continue Reading
IMG 20201029 WA0003

ವಾರ್ತಾ ಇಲಾಖೆ ಜಂಟಿ ನಿರ್ದೇಶಕರಿಗೆ ಆತ್ಮೀಯ ಬೀಳ್ಕೊಡುಗೆ….!  

ಬೆಂಗಳೂರು:- ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಜಂಟಿ ನಿರ್ದೇಶಕರಾಗಿ ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸಿ ಸ್ವಯಂ ನಿವೃತ್ತಿ ಹೊಂದಿದ ಎ. ಆರ್. ಪ್ರಕಾಶ್ ಅವರಿಗೆ ಇಲಾಖೆಯಲ್ಲಿ ಇಂದು ಆತ್ಮೀಯವಾಗಿ ಬೀಳ್ಕೊಡಲಾಯಿತು. ಜಂಟಿ ನಿರ್ದೇಶಕರಾದ ಡಿ.ಪಿ.ಮುರಳೀಧರ್, ಇಲಾಖೆಯ ಇತರ ಅಧಿಕಾರಿಗಳು ಹಾಗೂ ಸಿಬ್ಬಂದಿ ಈ ಸಂದರ್ಭದಲ್ಲಿ ಹಾಜರಿದ್ದರು. ಇವರು ಕಳೆದ 30 ವರ್ಷಗಳಲ್ಲಿ ಹೊಸಪೇಟೆ, ಕಲಬುರಗಿ, ಮೈಸೂರು ಮತ್ತು ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಅಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದರು.

Continue Reading
IMG 20201029 WA0008

ಪಾವಗಡ: ಟೆನಿಸ್ ಕ್ರಿಕೆಟ್ ಟೂರ್ನಿಮೆಂಟ್ ಆಯೋಜನೆ…!

ಪಾವಗಡ ತಾಲ್ಲೂಕಿನ ಬಿ.ಹೊಸಹಳ್ಳಿ ಗ್ರಾಮದಲ್ಲಿ ಟೆನಿಸ್ ಕ್ರಿಕೆಟ್ ಟೂರ್ನಿಮೆಂಟ್ ನ್ನ ಗ್ರಾಮಸ್ಥರ ಸಮ್ಮುಖದಲ್ಲಿ ಆಯೋಜಿಸಲಾಗಿತ್ತು. ಆಧುನಿಕ ಜಗತ್ತು ಬೆಳೆದಂತೆ ಗ್ರಾಮೀಣ ಭಾಗದಲ್ಲಿ ಕ್ರೀಡೆಗಳು ಹಾಗೂ ಯುವಕರಲ್ಲಿನ ಕ್ರೀಡೆಯ ಆಸಕ್ತಿ ಕಳೆಗುಂದುತ್ತಿದೆ, ಆದರೆ ಈ ಗ್ರಾಮದಲ್ಲಿ ಯುವಕರಿಗೆ ಗ್ರಾಮಸ್ಥರು ಕ್ರೀಡಾ ಚಟುವಟುಕೆಗಳಲ್ಲಿ ಭಾಗವಹಿಸುವಂತೆ ಚೈತನ್ಯ ತುಂಬುತ್ತಿರೋದು ನಿಜಕ್ಕೂ ಮಾದರಿಯಾಗಿದೆ. ತಾ.ಪಂ.ಸದಸ್ಯರು ಮತ್ತು ಮಾಜಿ ಕಬ್ಬಡ್ಡಿ, ಕ್ರಿಕೆಟ್ ಕ್ರೀಡಾಪಟುವಾಗಿದ್ದ ಅಂಜನ್ ನಾಯಕರವರು ಮಾತನಾಡುತ್ತ ಇಂದಿನ ಯುವ ಶಕ್ತಿ ಮಾನಸಿಕವಾಗಿ ದೈಹಿಕವಾಗಿ ಬಲಗೊಳ್ಳಬೇಕಾದರೆ ಇಂತಹ ಕ್ರೀಡಾ ಚಟುವಟಿಕೆಗಳಲ್ಲಿ ತಮ್ಮನ್ನ ತೊಡಗಿಸಿಕೊಳ್ಳಬೇಕು. ನಿಮ್ಮ […]

Continue Reading
IMG 20201027 WA0056

ಮಡದಿಯ ಮೋಹಕ್ಕೆ ಗಂಡನ ಅಡ್ಡಿ, ಖಲಾಸ್..!

ವೈ ಎನ್ ಹೊಸಕೋಟೆ  ಯ ಆಂಧ್ರ ಗಡಿ: ಮಡದಿಯ ಮೋಹಕ್ಕೆ ಗಂಡನ ಅಡ್ಡಿ, ಖಲಾಸ್..! ಪಾವಗಡ :-  ಅಕ್ಟೋಬರ್ 1 ನೇ ತಾರೀಖು ಪಾವಗಡದ ವೈ ಎನ್ ಹೊಸಕೋಟೆ ಹೋಬಳಿಯ ಮಂದಿ ಪ್ರಶಾಂತಮಯವಾಗಿದ್ದರು. ಆದರೆ ಇದ್ದಕ್ಕಿದ್ದಂತೆ ವೈ.ಎನ್ ಹೊಸಕೋಟೆ ಪೊಲೀಸ್ ಠಾಣೆಗೆ ಪೋನ್ ಕರೆಯೊಂದು ಬಂದು ಇಲ್ಲೊಂದು ಶವ ಬಿದ್ದಿದೆ ಅನ್ನುವ ಸುದ್ದಿ ಯಾವಾಗ ರವಾನೆಯಾಯ್ತೊ ವೈ ಎನ್ ಹೊಸಕೋಟೆ ಪೊಲೀಸರು ಅಲರ್ಟ್ ಆಗಿ ಸಬ್ ಇನ್ಸ್ಪೆಕ್ಟರ್ ರಾಮಯ್ಯ ಸಾಹೇಬ್ರ ನಿರ್ದೇಶನದಂತೆ ಎಎಸ್ಐ ಹನುಮಾನಾಯ್ಕ ಮತ್ತು ಸಿಬ್ಬಂಧಿಗಳು […]

Continue Reading
IMG 20201027 WA0035

ಜಯಚಂದ್ರ ಅವರನ್ನು ಗೆಲ್ಲಿಸಲು ಶಿರಾ ಮತದಾರರು ನಿರ್ಧರಿದ್ದಾರೆ; ಡಿ.ಕೆ.ಶಿ

  ತುಮಕೂರು :- ಕಾಂಗ್ರೆಸ್ ಹಾಗೂ ಟಿ.ಬಿ ಜಯಚಂದ್ರ ಅವರು ಈ ಕ್ಷೇತ್ರಕ್ಕೆ ಮಾಡಿರುವ ಕೆಲಸಗಳನ್ನು ಮೆಚ್ಚಿರುವ ಶಿರಾ ಕ್ಷೇತ್ರದ ಮತದಾರರು ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಗೆಲ್ಲಿಸಲು ನಿರ್ಧರಿಸಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ. ಶಿರಾ ಕ್ಷೇತ್ರದ ಭೂವನಕಹಳ್ಳಿ, ಸೋರೆಗುಂಟೆ, ಪಂಜಿಗಾನಹಳ್ಳಿ, ದ್ವಾರಾಳು ಗೇಟ್, ಚನ್ನನಕುಂಟೆ, ಹೊನ್ನಗೊಂಡನಹಳ್ಳಿ, ಮಾಗೋಡು ಗೊಲ್ಲರಹಟ್ಟಿ, ಮಾಗೋಡು, ಯರಗುಂಟೆ ಗೇಟ್, ಗುಳಿಗೇನಹಳ್ಳಿ, ತಗ್ಗಿಹಳ್ಳಿ ಪದ್ಮಾಪುರ, ಯಲಿಯೂರು ಗೇಟ್ ಮತ್ತಿತರ ಕಡೆ ಅಭ್ಯರ್ಥಿ ಜತೆ ಮಂಗಳವಾರ ಬಿರುಸಿನ ಪ್ರಚಾರ ನಡೆಸಿದ ಡಿ.ಕೆ […]

Continue Reading
IMG 20201027 WA0009

ಪಾವಗಡ: ನಿಡಗಲ್ ದಸರಾ ಉತ್ಸವ….!

  ಪಾವಗಡ ತಾಲ್ಲೂಕಿನ ನಿಡಗಲ್ ಗ್ರಾಮದಲ್ಲಿ ವಾಲ್ಮೀಕಿ ಜಾಗೃತಿ ವೇದಿಕೆ ಹಾಗೂ ಮಹರ್ಷಿ ವಾಲ್ಮೀಕಿ ಆಶ್ರಮದ ನೇತೃತ್ವದಡಿಯಲ್ಲಿ ನಿಡಗಲ್ ದಸರಾ ಉತ್ಸವ ವನ್ನು ವಿಶೇಷವಾಗಿ ಆಚರಿಸಲಾಯಿತು. ಹಿಂದೆ ರಾಜ ಮಹಾರಾಜರ ಕಾಲದಿಂದಲೂ ನಿಡಗಲ್ ಸಂಸ್ಥಾನದಲ್ಲಿ ನಿಡಗಲ್ ದಸರಾ ಉತ್ಸವ ಪ್ರಾತಿನಿಧ್ಯ ಪಡೆದುಕೊಂಡಿತ್ತು.ಆದರೆ ಕಾಲಕ್ರಮೇಣ ಈ ಒಂದು ಉತ್ಸವ ಕಣ್ಮರೆಯಾಗತೊಡಗಿತ್ತು. ಇಂದು ಸಾಂಪ್ರದಾಯಿಕವಾಗಿ ನಡೆಸಲಾದ ನಿಡಗಲ್ ದಸರಾ ಉತ್ಸವಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಶ್ರೀ ವಾಲ್ಮೀಕಿ ಆಶ್ರಮದ ಪೀಠಾಧ್ಯಕ್ಷರು ಸಂಜಯ್ ಕುಮಾರ ಸ್ವಾಮೀಜಿಗಳು ದಸರಾ ನವರಾತ್ರಿ ಉತ್ಸವಕ್ಕೆ […]

Continue Reading
IMG 20201013 WA0005

ಸಂಕಷ್ಟದಲ್ಲಿ ಅನ್ನದಾತ : ಕುಸಿದ ಶೇಂಗಾ ಬೆಲೆ, ಮಲಗಿರುವ ಸರಕಾರ….!

ಸಂಕಷ್ಟದಲ್ಲಿ ಅನ್ನದಾತ ಕುಸಿದ ಶೇಂಗಾ ಬೆಲೆ, ಮಲಗಿರುವ ಸರಕಾರ….! ಪಾವಗಡ :-  ರಾಜ್ಯದಲ್ಲಿ ಈ ಬಾರಿ ಸಕಾಲದಲ್ಲಿ ಮಳೆಯಾಗಿದ್ದರಿಂದ ಮತ್ತು ಕೊರೋನಾ ಸೋಂಕಿನ ಕಾರಣದಿಂದ ನಗರ ಜೀವನ ಬಿಟ್ಟು ಸ್ವಂತ ಊರುಗಳಿಗೆ ಹೋದ ಬಹಳಷ್ಟು ಮಂದಿ ತಮ್ಮ ಜಮೀನುಗಳಲ್ಲಿ ಬೆಳೆಗಳನ್ನು ಬೆಳೆಯಲು ಮುಂದಾದ ಕಾರಣ ಎಲ್ಲೆಡೆ ಬೆಳೆಗಳು ಪ್ರಮಾಣ ಹೆಚ್ಚಾಗಿದೆ. ರಾಜ್ಯದಲ್ಲಿ ಹಲವೆಡೆ ಶೇಂಗಾ ಬೆಳೆ ಕಟಾವು ಹಾಗುತ್ತಿದೆ ಆದರೆ ಬೆಲೆಗಳು ಮಾತ್ರ ಕುಸಿದಿದೆ,ಕೇಂದ್ರ ಸರ್ಕಾರ 2020-21 ರ ಸಾಲಿನ ಶೇಂಗಾ ಬೆಳೆಯ ಮುಂಗಾರು ಕಟಾವಿನ ಬೆಂಬಲ […]

Continue Reading
IMG 20201021 WA0024

ಜನರ ಕಷ್ಟಕ್ಕೆ ಸ್ಪಂದಿಸಲು ರಾಜ್ಯದಲ್ಲಿ ಸರ್ಕಾರವೇ ಇಲ್ಲ…!

*ಜನರ ಕಷ್ಟಕ್ಕೆ ಸ್ಪಂದಿಸಲು ರಾಜ್ಯದಲ್ಲಿ ಸರ್ಕಾರವೇ ಇಲ್ಲ: ಡಿ.ಕೆ ಶಿವಕುಮಾರ್* ತುಮಕೂರು: ಪ್ರವಾಹ ಪೀಡಿತ ಪ್ರದೇಶಗಳಿಗೆ ಮಂತ್ರಿಗಳು ಹಿಂದೆಯೂ ಹೋಗಿಲ್ಲ, ಈಗಲೂ ಹೋಗುವುದಿಲ್ಲ. ಒಬ್ಬರು ಪ್ರವಾಹ ಬಂದಿಲ್ಲ ಅಂತಾರೆ, ಮತ್ತೊಬ್ಬರು ಆರೋಗ್ಯ ಸರಿ ಇಲ್ಲ ಅಂತಾರೆ, ಮತ್ತೊಬ್ಬರು ತಮಗೆ ಸಮಸ್ಯೆ ಇದೆ ಅಂತಾರೆ. ಇನ್ನು ಶಿರಾದಲ್ಲಿ ರೈತರು ಬೆಳೆದ ಕಡಲೆಕಾಯಿ ಮಳೆಯಿಂದ ಕೊಚ್ಚಿಕೊಂಡು ಹೋಗುತ್ತಿದ್ದರೂ ಆ ಬಗ್ಗೆ ಮಾತನಾಡುತ್ತಿಲ್ಲ. ಹೀಗಾಗಿ ರಾಜ್ಯದಲ್ಲಿ ಜನರ ಸಂಕಷ್ಟಕ್ಕೆ ಸ್ಪಂದಿಸಲು ಸರ್ಕಾರವೇ ಇಲ್ಲದಂತಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ. […]

Continue Reading
IMG 20201021 215736

ಸದ್ಯಕ್ಕೆ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ….!

ಸದ್ಯಕ್ಕೆ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ: ಬಿ.ಸಿ.ಪಾಟೀಲ್ ಕೊಪ್ಪಳ,ಅ.21: ಸದ್ಯಕ್ಕೆ ಮುಖ್ಯಮಂತ್ರಿ ಹುದ್ದೆ ಖಾಲಿಯಿಲ್ಲ. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಇನ್ನೂ ಮೂರು ವರ್ಷ ಇರಲಿದ್ದು, ಮೂರುವರ್ಷ ನಂತರ ಚುನಾವಣೆ ನಡೆದಾಗ ಶಾಸಕಾಂಗ ಸಭೆ ಬಳಿಕ ಯಾರು ಮತ್ತೆ ಮುಖ್ಯಮಂತ್ರಿಗಳಾಗುತ್ತಾರೆ ಎನ್ನುವುದು ತೀರ್ಮಾನವಾಗುತ್ತದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ. ಕೊಪ್ಪಳದ ಕೋಳೂರಿನಲ್ಲಿ ಸುದ್ದಿಗಾರರು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಯತ್ನಾಳ್ ಪಕ್ಷದ ಶಾಸಕರಾಗಿ ಈ ರೀತಿ ಮುಖ್ಯಮಂತ್ರಿ […]

Continue Reading
IMG 20201021 WA0000

ಕಾಂಗ್ರೆಸ್ ಅಧಿಕಾರಕ್ಕೆ ಬರುವ ಸಂದೇಶ ಶಿರಾದಿಂದಲೇ ರವಾನೆ…!

ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಸಂದೇಶ ಶಿರಾದಿಂದಲೇ ರವಾನೆ: ಡಿ.ಕೆ ಶಿವಕುಮಾರ್ ತುಮಕೂರು: ಈ ಉಪಚುನಾವಣೆಯಿಂದ ರಾಜ್ಯ ಸರ್ಕಾರವಾಗಲಿ, ಕೇಂದ್ರ ಸರ್ಕಾರ ಆಗಲಿ ಬೀಳುವುದಿಲ್ಲ. ಆದರೆ ಶಿರಾ ಕ್ಷೇತ್ರದ ಜನ ಭವಿಷ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ಸಂದೇಶವನ್ನು ರವಾನಿಸಲಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಶಿರಾ ಉಪಚುನಾವಣೆ ನಿಮಿತ್ತ ಕ್ಷೇತ್ರದ ವಿವಿಧ ಗ್ರಾಮಗಳಿಗೆ ಮಂಗಳವಾರ ತೆರಳಿ ವ್ಯಾಪಕ ಪ್ರಚಾರ ನಡೆಸಿದ ಡಿ.ಕೆ ಶಿವಕುಮಾರ್ ಅವರು ಒಟ್ಟಾರೆ ಹೇಳಿದ್ದಿಷ್ಟು: ‘ನಾಮಪತ್ರ ಸಲ್ಲಿಸಿದ […]

Continue Reading