IMG 20220108 WA0027

ಪಾವಗಡ: ನಾಗಲಮಡಿಕೆ ಸುಬ್ರಹ್ಮಣ್ಯೇಶ್ವರ ಸ್ವಾಮಿ ರಥೋತ್ಸವ…!

ಪಾವಗಡ: ಕೋವಿಡ್- 19 ರ ಪ್ರಯುಕ್ತ ನಾಗಲಮಡಿಕೆ ಸುಬ್ರಹ್ಮಣ್ಯೇಶ್ವರ ಸ್ವಾಮಿ ರಥೋತ್ಸವದ ಸರಳ ರೀತಿಯಲ್ಲಿ ಆಚರಣೆ ಮಾಡಲಾಯಿತು. ಪಾವಗಡ: ಅಂತ್ಯ ಸುಬ್ರಹ್ಮಣ್ಯ ಎಂದೆ ಪ್ರಚಲಿತವಾಗಿರುವ ನಾಗಲಮಡಿಕೆ ಸುಬ್ರಹ್ಮಣ್ಯೇಶ್ವರ ಸ್ವಾಮಿ ರಥೋತ್ಸವದ ಪ್ರಯುಕ್ತ ಶನಿವಾರ ದೇಗುಲದಲ್ಲಿ ಸರಳವಾಗಿ ರೀತಿಯಲ್ಲಿ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಯಿತು. ಲಕ್ಷಾಂತರ ಭಕ್ತಾದಿಗಳ ಸಮ್ಮುಖದಲ್ಲಿ ನಡೆಯಬೇಕಿದ್ದ ರಥೋತ್ಸವ ಕೋವಿಡ್ ನಿಯಮಾವಳಿಗಳ ಕಾರಣ  ಸರಳವಾದ ರೀತಿಯಲ್ಲಿ ನಡೆಯಿತು. ಹೂವಿನಿಂದ ಅಲಂಕಾರಗೊಂಡ ರಥದಲ್ಲಿ ಮೆರವಣಿಗೆ ಮೂಲಕ ಉತ್ಸವ ಮೂರ್ತಿಯನ್ನು ಕರೆತಂದು ಪ್ರಧಾನ ಅರ್ಚಕರಾದ ಪಿ.ಬದರಿನಥ್ ಪ್ರತಿಷ್ಠಾಪಿಸಿದರು. ತಹಶೀಲ್ದಾರ್ ಕೆ.ಆರ್.ನಾಗರಾಜು, […]

Continue Reading
IMG 20220106 WA0041

ಪಾವಗಡ:ಹಿರಿಯರಿಗೆ ಸನ್ಮಾನ…!

ಪಾವಗಡ:  ಸನ್ಮಾನ ಕಾರ್ಯಕ್ರಮ  ಪಟ್ಟಣದಲ್ಲಿ ಗುರುವಾರ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಆಯೋಜಿಸಿದ್ದ `75 ವರ್ಷ ಪೂರ್ಣಗೊಂಡ ಹಿರಿಯರಿಗೆ ಸನ್ಮಾನ, ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ವೆಂಕಟರವಣಪ್ಪ ಮಾತನಾಡುತ್ತಾ.  ಸರ್ಕಾರಿ ನೌಕಕರಿಗೆ ನಿವೃತ್ತಿ ಇದೆ. ಆದರೆ ಸಮಾಜ ಸೇವೆ, ಹೋರಾಟ, ರಾಜಕಾರಣದಲ್ಲಿ ನಿವೃತ್ತಿ ಕಷ್ಟ ಸಾಧ್ಯ. ಜೀವನ ಪರ್ಯಂತ ಸೇವೆ ಮುಂದುವರೆಸಲೇ ಬೇಕು. ಜೀವ ಇರುವವರೆಗೆ ಪ್ರತಿಯೊಬ್ಬರು ಬದುಕಲು ಹೋರಾಟ ಮುಂದುವರೆಸಬೇಕು ಎಂದರು. ಸರ್ಕಾರಿ ನೌಕರರು ನಿವೃತ್ತಿಯ ನಂತರ ಕೈಲಾದ ಅಳಿಲು ಸೇವೆ ಮಾಡಬೇಉ. ಹಿರಿಯ […]

Continue Reading
IMG20220105111334 scaled

ಪಾವಗಡ:ನಾಗಲಮಡಿಕೆ ಸುಬ್ರಹ್ಮಣ್ಯ ಸ್ವಾಮಿ ದೇಗುಲ ಜೀರ್ಣೋದ್ಧಾರ ಕ್ಕೆ ಆಗ್ರಹ….!

ಪಾವಗಡ: ಅಂತ್ಯ ಸುಬ್ರಮಣ್ಯ ಎಂದೇ ಪ್ರಸಿದ್ಧವಾಗಿರುವ ನಾಗಲಮಡಿಕೆ ಸುಬ್ರಹ್ಮಣ್ಯ ಸ್ವಾಮಿ ದೇಗುಲ ಜೀರ್ಣೋದ್ಧಾರ ಮಾಡಬೇಕು ಎಂದು ಒತ್ತಾಯಿಸಿ ವಿವಿಧ ಸಂಘಟನೆಗಳು ಗ್ರೇಡ್ 2 ತಹಶೀಲ್ದಾರ್ ಚಂದ್ರಶೇಖರ್ ಅವರಿಗೆ ಮನವಿ ಸಲ್ಲಿಸಿದರು.  ನಾಗಲಮಡಿಕೆಯ ಸುಬ್ರಮಣ್ಯೇಶ್ವರ ದೇವಸ್ಥಾನಕ್ಕೆ ಸುಮಾರು 500 ವರ್ಷಗಳ ಇತಿಹಾಸವಿದ್ದು, ನಾಗಲಮಡಿಕೆ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಾಲಯ ಶಿಥಿಲಾವಸ್ಥೆ ತಲುಪಿದೆ ಹಾಗೂ ಮೂಲಭೂತ ಸೌಕರ್ಯಗಳಾದ  ಶೌಚಾಲಯ, ಕುಡಿಯುವ ನೀರು, ವಸತಿ ಗೃಹ, ಸ್ನಾನಗೃಹ  ಸೌಕರ್ಯಗಳಿಲ್ಲದೆ ಭಕ್ತಾದಿಗಳಿಗೆ ಸಮಸ್ಯೆಯಾಗುತ್ತಿದೆ ಎಂದು ಆರೋಪಿಸಿದರು. ಉತ್ತರಪಿನಾಕಿನಿ ನದಿಗೆ ಕಟ್ಟಲಾದ ಚೆಕ್ ಡ್ಯಾಂ ತುಂಬಿದೆ. […]

Continue Reading
04 pvgd photo 01

ಪಾವಗಡ..ಹಾಸ್ಟೆಲ್ ಗಳ ಪರಿಶೀಲನೆ

ಪಾವಗಡ..ಹಾಸ್ಟೆಲ್ ಪರಿಶೀಲನೆ.                          ಪಾವಗಡ ಪಟ್ಟಣದಲ್ಲಿನ ವಿವಿಧ ವಿದ್ಯಾರ್ಥಿ ನಿಲಯಗಳಲ್ಲಿ ನ ಅವ್ಯವಸ್ಥೆಯ ಬಗ್ಗೆ ಖಚಿತ ಮಾಹಿತಿ ಪಡೆದು ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಶ್ರೀನಿವಾಸ್ ನಾಯಕ್ ರವರು ಇಂದು ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿದರು. ಪಟ್ಟಣದ y.e ರಂಗಯ್ಯ ಶೆಟ್ಟಿ ಕಾಲೇಜು ಆವರಣದ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದ ಅವರು ಮೆನು ಪ್ರಕಾರ ಊಟ ಸ್ವಚ್ಛತೆ ಮೂಲಭೂತ ಸೌಕರ್ಯದ […]

Continue Reading
bac829ddf2eb42bf8ea70e716d2cd7cc

ಪಾವಗಡ: ಕೋವಿಡ್- 19  ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ

ಕೋವಿಡ್- 19  ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ……………..          ಪಾವಗಡ… ಇಂದು ಬೆಳಿಗ್ಗೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ 15ರಿಂದ 18 ವರ್ಷ ಮಕ್ಕಳಿಗೆ ಕೋವಿಡ್ -19 ಲಸಿಕಾ ಕಾರ್ಯಕ್ರಮಕ್ಕೆ ಶಾಸಕ ವೆಂಕಟರಮಣಪ್ಪ ಚಾಲನೆ ನೀಡಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ವೆಂಕಟರವಣಪ್ಪನವರು ಎಲ್ಲಾ ಮಕ್ಕಳು  ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು, ಲಸಿಕೆ ಹಾಕಿಸಿಕೊಂಡರೆ ಮಾತ್ರ ಮುಂದಿನ ದಿನಗಳಲ್ಲಿ ಬರುವಂತಹ ವೈರಸ್ ಗಳ ಹಾವಳಿಯಿಂದ ತಪ್ಪಿಸಿಕೊಳ್ಳಬಹುದು. ಮತ್ತು ನೀವು ಶೈಕ್ಷಣಿಕವಾಗಿ ಮುಂದುವರೆಯಬಹುದು , ಎಲ್ಲಾ ಮಕ್ಕಳು ಲಸಿಕೆ ಹಾಕಿಸಿಕೊಳ್ಳುವ […]

Continue Reading
IMG 20220103 WA0075

ಪಾವಗಡ :- ಪಾಠ-ಪ್ರವಚನ ಕುಂಠಿತ ವಿದ್ಯಾರ್ಥಿಗಳ ಪರದಾಟ…..

ಪಾವಗಡ :- ಪಾಠ-ಪ್ರವಚನ ಕುಂಠಿತ ವಿದ್ಯಾರ್ಥಿಗಳ ಪರದಾಟ………..  ಪಾವಗಡದ ಸರ್ಕಾರಿ ವೈ ಈ ಆರ್ ಪ್ರಥಮ ದರ್ಜೆ ಕಾಲೇಜಿನ  ವಿದ್ಯಾರ್ಥಿಗಳು ಮತ್ತು ಯುವಜನ ವಿದ್ಯಾರ್ಥಿಗಳ ಒಕ್ಕೂಟ ಸಂಘದ ಸಹಕಾರದೊಂದಿಗೆ ಇಂದು ಕಾಲೇಜಿನಿಂದ ತಹಶೀಲ್ದಾರ್ ಕಚೇರಿವರೆಗೂ ಜಾಥಾ ನಡೆಸಿ ತಹಶೀಲ್ದಾರ್ ನಾಗರಾಜ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು,ಕಳೆದ ಡಿಸೆಂಬರ್ 10ನೇ ತಾರೀಕಿನಿಂದ ಕರ್ನಾಟಕ ರಾಜ್ಯಾದ್ಯಂತ ಅತಿಥಿ ಉಪನ್ಯಾಸಕರು ಮುಷ್ಕರವನ್ನು ಕೈಗೊಂಡ ಹಿನ್ನೆಲೆ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪಾಠ ಪ್ರವಚನದಲ್ಲಿ ತುಂಬಾ ತೊಂದರೆ ಯಾಗಿದೆ ದೂರದ ಊರುಗಳಿಂದ ಬಸ್ […]

Continue Reading
IMG 20211228 WA0057

ಪಾಟರಿ ಟೌನ್ ಮೆಟ್ರೋ ನಿಲ್ದಾಣಕ್ಕೆ ಪುನೀತ್ ರಾಜ್ ಕುಮಾರ್ ಹೆಸರಿಡಲು ಮನವಿ…!

ಬೆಂಗಳೂರು : ಹೊಸದಾಗಿ ನಿರ್ಮಾಣವಾಗುತ್ತಿರುವ ಪಾಟರಿ ಟೌನ್ ಮೆಟ್ರೋ ನಿಲ್ದಾಣಕ್ಕೆ ಪುನೀತ್ ರಾಜ್ ಕುಮಾರ್ ರವರ ಹೆಸರನ್ನು ನಾಮಕರಣ ಮಾಡಬೇಕೆಂದು ಕರ್ನಾಟಕ ಬಹುಜನ ಫೆಡರೇಷನ್ ವತಿಯಿಂದ ಸ್ಥಳೀಯ ಶಾಸಕರಾದ ಅಖಂಡ ಶ್ರೀನಿವಾಸಮೂರ್ತಿ ಹಾಗೂ ಬಿಬಿಎಂಪಿ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ವೇಳೆ ಕರ್ನಾಟಕ ಬಹುಜನ ಫೆಡರೇಷನ್ ಸಂಸ್ಥಾಪಕ ಅಧ್ಯಕ್ಷರಾದ ಜಿ ಎಚ್ ಶಂಕರ್ ಮಾತನಾಡಿ ಕರುನಾಡಿನ ಹೆಮ್ಮೆಯ ಪುತ್ರ ಜನಮೆಚ್ಚುಗೆ ಪಡೆದು ಅಪ್ಪು ಎಂದೇ ಪ್ರಖ್ಯಾತಿ ಪಡೆದಿರುವ ಪುನೀತ್ ರಾಜ್ ಕುಮಾರ್ ಅವರು ಅಕಾಲಿಕ ಮರಣಕ್ಕೆ […]

Continue Reading
IMG 20211227 WA0020

ಪಾವಗಡ: ಪೆಟ್ರೋಲ್ ಬಂಕ್ ಕಾಮಗಾರಿ ಸ್ಥಗಿಸುಂತೆ ಮನವಿ…

ಪಾವಗಡ. ಪೆಟ್ರೋಲ್ ಬಂಕ್ ಕಾಮಗಾರಿ ಸ್ಥಗಿಸುಂತೆ ಮನವಿ………. ಪಾವಗಡ: – ಇಂದು ಅಕ್ರಮ ಪೆಟ್ರೋಲ್ ಬಂಕ್ ಗಳ ಕಾಮಗಾರಿ ಸ್ಥಗಿಸುಂತೆ ಗ್ರಾಮಸ್ಥರು ಮತ್ತು ರೈತ ಮುಖಂಡರು ತಹಸೀಲ್ದಾರ್ ಕೆಆರ್ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದರು, ಪಟ್ಟಣ ನಗರ ಪ್ರದೇಶದಲ್ಲಿ 100 ಮೀಟರ್ ಗ್ರಾಮೀಣ ಪ್ರದೇಶದಲ್ಲಿ 300 ಮೀಟರ್ ಒಳಗೆ ಹಾಗೂ ಸುರಕ್ಷತಾ ದೃಷ್ಟಿಯಿಂದ ಒಂದು ಪೆಟ್ರೋಲ್ ಬಂಕ್ ಪಕ್ಕ ಮತ್ತೊಂದು ಪೆಟ್ರೋಲ್ ಬಂಕ್ ಇರಬಾರದೆಂಬ ನಿಯಮವಿದ್ದರೂ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ವೈಎನ್ ಹೊಸಕೋಟೆ ಮತ್ತು ದೊಡ್ಡಹಳ್ಳಿ […]

Continue Reading
IMG 20211226 WA0041

ಪಾವಗಡ:ಅಧಿಕಾರಿಗಳ ನಿರ್ಲಕ್ಷಕ್ಕೆ ಯುವಕ ಬಲಿ…!

ಪಾವಗಡ: ಅಪರಿಚಿತ ವೃದ್ಧನ ಮೃತ ದೇಹ ತಾಲ್ಲೂಕಿನ ಕಡಪಲಕೆರೆ ಬಳಿಯ ಜಮೀನಿನಲ್ಲಿ  ಭಾನುವಾರ ಪತ್ತೆಯಾಗಿದೆ.  ಸುಮಾರು 60 ರಿಂದ 65 ವರ್ಷ ವಯಸ್ಸಿನ ವೃದ್ಧ ಸ್ವೆಟ್ಟರ್ ಧರಿಸಿದ್ದಾರೆ. ಪಾವಗಡ ಪಟ್ಟಣ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದರು.              ಪಾವಗಡ ಕ್ರೈಂ ನ್ಯೂಸ್. 2 ಅಧಿಕಾರಿಗಳ ನಿರ್ಲಕ್ಷಕ್ಕೆ ಯುವಕ ಬಲಿ………ಭಾನುವಾರ ನಾಗಲಮಡಿಕೆ ಡ್ಯಾಂ ನಲ್ಲಿ ಮುಳುಗಿ ಯುವಕನೋರ್ವ ಮೃತಪಟ್ಟಿದ್ದಾನೆ.  ಆಂಧ್ರದ ಕಲ್ಯಾಣದುರ್ಗ ತಾಲ್ಲೂಕು ತಿಪ್ಪನಹಳ್ಳಿ ಗ್ರಾಮದ  ನಿರಂಜನ(21)  ಮೃತ ಯುವಕನಾಗಿದ್ದು. […]

Continue Reading
IMG 20211225 WA0020

ಪಾವಗಡ: ಕ್ರಿಸ್ ಮಸ್ ಹಬ್ಬ ಅಚರಣೆ

ಪಾವಗಡ  ತಾಲ್ಲೂಕಿನ  ವಿವಿಧ ಚರ್ಚ್ ಗಳಲ್ಲಿ ಕ್ರಿಸ್ ಮಸ್ ಪ್ರಯುಕ್ತ ಶುಕ್ರವಾರ, ಶನಿವಾರ ವಿಶೇಷ ಪ್ರಾರ್ಥನೆ ನಡೆಸಲಾಯಿತು. ಚರ್ಚ್ ಗಳನ್ನು ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು,   ಯೇಸು ಜನನ ಸಂದೇಶವನ್ನು ಗೊಂಬೆಗಳ ಮೂಲಕ ಪ್ರದರ್ಶಿಸಲಾಗಿತ್ತು, ಮತ್ತು ಕ್ರಿಸ್ಮಸ್ ಟ್ರೀ’ಗಳು ಹಾಗೂ ಆಗಸವನ್ನು ಚುಂಬಿಸಲು ಹೊರಟ ನಕ್ಷತ್ರಾಕಾರದ ಆಕಾಶ ಬುಟ್ಟಿಗಳ ಸಾಲು ಪಟ್ಟಣದ ಚರ್ಚ್ ಗಳ ಮುಂಭಾಗ ಕಣ್ಮನ ಸೆಳೆದವು. ಶಿರಾ ರಸ್ತೆಯಲ್ಲಿರುವ ಬೇಥೇಲ್ ಬ್ರದರನ್ ಚರ್ಚ್ ಸೇರಿದಂತೆ ಪಟ್ಟಣದ ಚರ್ಚ್ ಗಳಲ್ಲಿ ಶುಕ್ರವಾರ ರಾತ್ರಿ ವಿಶೇಷ ಪ್ರಾರ್ಥನೆಗಳು […]

Continue Reading