IMG 20210125 WA0000

ಪಾವಗಡ:ಪಂಚಾಯತ್ ರಾಜ್ ಗ್ರಾಮೀಣ ಪ್ರಕೋಷ್ಠದ ರಾಜ್ಯ ಸಮಿತಿಗೆ ನೇಮಕ…

ವೈ.ಎನ್.ಹೊಸಕೋಟೆ: ಹೋಬಳಿಯ ಸಿದ್ದಾಪುರ ಗ್ರಾಮದ ಬಿಜೆಪಿ ಮುಖಂಡರಾದ ಜ್ಯೋತಿ ತಿಪ್ಪೇಸ್ವಾಮಿ ರವರನ್ನು ಪಂಚಾಯತ್ ರಾಜ್ ಗ್ರಾಮೀಣ ಪ್ರಕೋಷ್ಠದ ರಾಜ್ಯ ಸಮಿತಿಗೆ ದಾವಣಗೆರೆ ವಿಭಾಗ(ದಾವಣಗೆರೆ, ಚಿತ್ರದುರ್ಗ, ತುಮಕೂರು) ದಿಂದ ಸದಸ್ಯರನ್ನಾಗಿ ಆಯ್ಕೆ ಮಾಡಲಾಗದೆ. ಬಿಜೆಪಿ ರಾಜ್ಯ ಸಂಚಾಲಕರು, ಪಂಚಾಯತ್ ರಾಜ್ ಗ್ರಾಮೀಣ ಪ್ರಕೋಷ್ಠ ,ಬಿ.ಎಂ.ನಾರಾಯಣಸ್ವಾಮಿ ಪತ್ರಿಕಾಾ ಪಕಟಣೆ ಯಲ್ಲಿ ತಿಳಿಸಿದ್ದಾರೆ. ವರದಿ:ಸತೀಶ್, ವೈ ಎನ್ ಹೊಸಕೋಟೆ

Continue Reading
IMG 20210125 WA0001

ಪಾವಗಡ: ‘ ಭರ ‘ವಸೆಯ ಸಂಸದರು…..!

ಗಡಿ ಗ್ರಾಮಗಳಿಗೆ ಸಂಸದರ ಬೇಟಿ ವೈ.ಎನ್.ಹೊಸಕೋಟೆ : ಹೋಬಳಿಯ ಗಡಿ ಗ್ರಾಮಗಳಾದ ನಾಗಲಾಪುರ ಮತ್ತು ಚಿಕ್ಕಹಳ್ಳಿ ಗ್ರಾಮಗಳಿಗೆ ಚಿತ್ರದುರ್ಗ ಕ್ಷೇತ್ರದ ಸಂಸದ ಎ.ನಾರಾಯಣಸ್ವಾಮಿ ಶನಿವಾರದಂದು ಬೇಟಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿ ಅವರು ಈ ಎರಡು ಗ್ರಾಮಗಳಿಗೆ  ಭರವಸೆಯ ಮಹಾಪೂರವನ್ನೇ ಹರಿಸಿದರು ಸಂಸದರ ಭರವಸೆ ಗಳು ಸಿ.ಸಿ.ರಸ್ತೆ, ಸಮುದಾಯ ಭವನ, ವಸತಿ ಸೌಕರ್ಯ, ಐಮ್ಯಾಕ್ಸ್ ವಿದ್ಯುತ್ ದೀಪ, ರೈತರಿಗೆ ಕೊಳವೆಬಾವಿ ವ್ಯವಸ್ಥೆಗಳನ್ನು ಮಾಡಲಾಗುವುದು. ಅಭಿವೃದ್ಧಿ ನಿಗಮ/ ಮಂಡಲಿಗಳಿಂದ ಸಾಲ ಇನ್ನಿತರ ಸೌಲಭ್ಯಗಳನ್ನು ಕೊಡಿಸಿಕೊಡಲಾಗುವುದು ,ದೇವಾಲಯಗಳ ಅಭಿವೃದ್ದಿಗೆ ಅನುದಾನ […]

Continue Reading
IMG 20210124 WA0047

ಪಾವಗಡ: ರಾಷ್ಟ್ರೀಯ ಹೆಣ್ಣು ಮಗು ದಿನಾಚರಣೆ ….!

ಪಾವಗಡ: –   ಹೆಲ್ಪ್ ಸೊಸೈಟಿ  ವತಿಯಿಂದ ಪಾವಗಡ ತಾಲ್ಲೂಕಿನ ಅರ್.ಹೊಸಕೋಟೆ ಗ್ರಾಮದಲ್ಲಿ *ರಾಷ್ಟ್ರೀಯ* ಹೆಣ್ಣು ಮಗು ದಿನಾಚರಣೆ* ಯನ್ನು ಆಚರಿಸಲಾಯಿತು. ಹೆಲ್ಪ್ ಸೊಸೈಟಿ ಅಧ್ಯಕ್ಷರಾದ *ಮಾನಂ* *ಶಶಿಕಿರಣ್* ಮಾತನಾಡಿ ಹೆಣ್ಣುಮಕ್ಕಳಿಗೆ ರಕ್ಷಣೆ ಮತ್ತು ಅವಕಾಶಗಳನ್ನು ನೀಡುವ ನಿಟ್ಟಿನಲ್ಲಿ ಭಾರತ ದೇಶದಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಹೆಣ್ಣು ಮಕ್ಕಳು ಸಮಾಜದಲ್ಲಿ ಅನುಭವಿಸುವ ತೊಂದರೆಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ 2008ರಲ್ಲಿ ಮೊದಲ ಬಾರಿಗೆ ಕೇಂದ್ರ ಸರ್ಕಾರ ಚಿಂತನೆ ಮಾಡಿತು. ‘ನಾರಿ ಮುನಿದರೆ ಮಾರಿ’ ”ಹೆಣ್ಣೊಂದು ಕಲಿತರೆ […]

Continue Reading
IMG 20210123 WA0022

ಪಾವಗಡ: ಶುದ್ಧ ಕುಡಿಯುವ ನೀರಿನ ಘಟಕ ಪುನರ್ ಆರಂಭ….!

ಪಾವಗಡ: – ಪಟ್ಟಣದ ಸುಮಾರು 5 ವಾರ್ಡ್ ಗಳಿಗೆ ಶುಧ್ದ ಕುಡಿಯುವ ನೀರು ಒದಗಿಸುತ್ತಿದ್ದ ಘಟಕ ಕ್ಕೆ ನೀರು ಪೂರೈಸುತ್ತಿದ್ದ ಬೋರ್ ವೆಲ್ ನಲ್ಲಿ ನೀರು ಇಲ್ಲದ ಕಾರಣ ಶುದ್ಧ ಕುಡಿಯುವ ನೀರಿನ ಘಟಕ ವನ್ನು ಮುಚ್ಚಲಾಗಿತ್ತು. ಫುರಸಭೆ 60 ಲಕ್ಷ ವೆಚ್ಚದಲ್ಲಿ  ನಾಗಲಮಡಿಕೆಯ ಕೆರೆಯಿಂದ   ಅಗಸರ ಕೆರೆಗೆ ಪೈಪ್ ಲೈನ್ ಮೂಲಕ ನೀರು ಹರಿಸಿರುವುದರಿಂದ ಪಾವಗಡ ಪಟ್ಟಣದ ಅಂತರ್ಜಲ ವೃದ್ಧಿ ಯಾಗಿದ್ದು ,ಬತ್ತಿದ್ದ ಬೋರ್ ವೆಲ್ ಗಳಲ್ಲಿ ನೀರು ಬರುತ್ತಿರುವುದರಿಂದ ಮುಚ್ಚಲಾಗಿದ್ದ ಶುದ್ಧ ಕುಡಿಯುವ ನೀರಿನ […]

Continue Reading
DSC 3827 scaled

ಪಾವಗಡ: ಅಧ್ಯಕ್ಷ,ಉಪಾಧ್ಯಕ್ಷ ಚುನಾವಣೆಗೆ ಅಧಿಕಾರಿಗಳ ನೇಮಕ….!

ಪಾವಗಡ:   ತಾಲ್ಲೂಕಿನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಗ್ರಾಮ ಪಂಚಾಯತಿ ಚುನಾವಣೆಯ 30 ತಿಂಗಳ ಅಧ್ಯಕ್ಷ , ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ನಡೆಯಬೇಕಿತ್ತು ತುಮಕೂರು ಜಿಲ್ಲಾಧಿಕಾರಿ ರಾಕೇಶ್ ಕುಮಾರ್  ಅವರು  ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆಸಲು ಆಧಿಕಾರಿಗಳನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ. ಪಾವಗಡ ತಾಲ್ಲೂಕಿ ನಲ್ಲಿ 33  ಗ್ರಾಮ ಪಂಚಾಯತಿ ಗಳಿಗೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಯ  30 ತಿಂಗಳ ಮೀಸಲಾತಿ ಈಗಾಗಲೆ ಪ್ರಕಟವಾಗಿದೆ.ಚುನಾವಣಾ ದಿನಾಂಕವನ್ನು ಸಂಬಂಧಪಟ್ಟ ಅಧಿಕಾರಿಗಳು ಪ್ರಕಟಿಸಲಿದ್ದಾರೆ. ವರದಿ: ಬುಲೆಟ್ ವೀರಸೇನ ಯಾದವ್

Continue Reading
IMG 20210122 WA0025

ಪಾವಗಡ: ದೆಹಲಿ ಯ ರೈತರ ಹೋರಾಟ ಬೆಂಬಲಿಸಿ ಧರಣಿ…!

ಪಾವಗಡ. ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟ ಬೆಂಬಲಿಸಿ ಗಣರಾಜ್ಯೋತ್ಸವದ ದಿನವಾದ ಜನವರಿ 26ರಂದು ಬೆಂಗಳೂರಿನಲ್ಲಿ ದೊಡ್ಡಮಟ್ಟದ ಪರ್ಯಾಯ ಪರೇಡ್ ನಡೆಸಲು ರೈತ, ದಲಿತ, ಕಾರ್ಮಿಕ, ವಿದ್ಯಾರ್ಥಿ, ಯುವಜನ ಮತ್ತು ಮಹಿಳಾ ಸಂಘಟನೆಗಳ ಸಮನ್ವಯ ಸಮಿತಿ ‘ಸಂಯುಕ್ತ ಹೋರಾಟ- ಕರ್ನಾಟಕ’ ಮುಂದಾಗಿದೆ ಹೋರಾಟ ಬೆಂಬಲಿಸಿ ಪಾವಗಡ ಘಟಕ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಅಧ್ಯಕ್ಷರಾದ ಪೂಜಾರಪ್ಪ ಅವರ ನೇತೃತ್ವದಲ್ಲಿ ಸುಮಾರು 100 ಕ್ಕೂ ಹೆಚ್ಚು ರೈತರು 26ರಂದು ಬೆಂಗಳೂರಿಗೆ ಚಲೋ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ […]

Continue Reading
IMG 20210122 WA0023

ಪಾವಗಡ: ನೂತನ ಗೃಹ ಉಪಯೋಗಿ ವಸ್ತುಗಳ ಮಳಿಗೆ ಆರಂಭ…!

ವೈ.ಎನ್.ಹೊಸಕೋಟೆ ಗ್ರಾಮದ ಜೆ.ಅಚ್ಚ ಮ್ಮನಹಳ್ಳಿ ರಸ್ತೆಯಲ್ಲಿ ಶುಕ್ರವಾರ ಗೃಹ ಉಪಯೋಗ ವಸ್ತುಗಳ ನೂತನ    ಚಿನ್ಮಯಿ ಎಂಟರ್ಪ್ರೈಸಸ್ ಮಳಿಗೆಯನ್ನು  ಪಾವಗಡ ಶಾಸಕ ವೆಂಕಟರಮಣಪ್ಪ ಉದ್ಘಾಟಿಸಿದರು. ನಂತರ   ಮಾತನಾಡಿ  ಅವರು ದಿನನಿತ್ಯ ಬೇಕಾಗುವ ಗೃಹಪಯೋಗಿ ವಸ್ತುಗಳು ಹಳ್ಳಿಯಿಂದ ತಾಲೂಕು ಕೇಂದ್ರಕ್ಕೆ ಹೋಗಿ ತರಬೇಕಾಗಿತ್ತು ಈ ಮಳಿಗೆಯೂ ಪ್ರಾರಂಭವಾಗಿರುವುದರಿಂದ ಈ ಭಾಗದ ಜನತೆ ತಾಲೂಕು ಕೇಂದ್ರಕ್ಕೆ ಹೋಗುವುದು ತಪ್ಪುತ್ತದೆ ಹಾಗೂ ಟಿವಿ, ಫ್ರಿಡ್ಜ್, ವಾಷಿಂಗ್, ಮಿಷನ್, ಫ್ಯಾನ್, ಏರ್ ಕೂಲರ್, ಮಿಕ್ಸಿ, ಗ್ರೈಂಡರ್, ವಿವಿಧ ಬಗೆಯ ಮನೆ ಬಳಕೆಗೆ ಬೇಕಾಗುವ […]

Continue Reading
IMG 20210121 WA0029

ದೇವನಹಳ್ಳಿ : ಗ್ರಾಮಪಂಚಾಯತಿ ಅಧ್ಯಕ್ಷ- ಉಪಾಧ್ಯಕ್ಷರ ಮೀಸಲಾತಿ ಪ್ರಕಟ….!

   ಗ್ರಾಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ಪ್ರಕಟ ದೇವನಹಳ್ಳಿ: ನಗರದ ಅಂಬೇಡ್ಕರ್ ಭವನದ ಆಡಿಟೋರಿಯಂನಲ್ಲಿ ದೇವನಹಳ್ಳಿ ತಾಲೂಕಿನ ಗ್ರಾಮ ಪಂಚಾಯಿತಿಗಳಿಗೆ ಅಧ್ಯಕ್ಷರ, ಉಪಾಧ್ಯಕ್ಷರ ಮೀಸಲಾತಿ ಪ್ರಕಟಣೆಯನ್ನು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ನೇತೃತ್ವದಲ್ಲಿ ಮೀಸಲಾತಿಯನ್ನು ನೂತನ ತಂತ್ರಾಂಶದ ಮೂಲಕ ಅಧಿಕೃತವಾಗಿ ಪ್ರಕಟಿಸಲಾಯಿತು. ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಮಾತನಾಡಿ, ದೇವನಹಳ್ಳಿ ತಾಲೂಕಿನಲ್ಲಿ ಬರುವ ೨೪ ಗ್ರಾಪಂಗಳಿಗೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಮೀಸಲಾತಿ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ ಗ್ರಾಪಂನ ಎಲ್ಲಾ ಸದಸ್ಯರು ಶಾಂತಿಯುತವಾಗಿ ಕುಳಿತುಕೊಂಡು ಪ್ರಕ್ರಿಯೆಯ ಎಲ್ಲಾ ಅಂಶಗಳನ್ನು ತಿಳಿಸಿಕೊಡಲಾಯಿತು. […]

Continue Reading
IMG 20210121 WA0045

ಪಾವಗಡ: ಹಾದಿ ತಪ್ಪುತ್ತಿರುವ ಭದ್ರಾ ಯೋಜನೆ…?

ಹಾಲಿ ಶಾಸಕರು ಮತ್ತು ಸ್ಥಳೀಯ ಅಧಿಕಾರಿಗಳು ಆಮಿಷಕ್ಕೆ ಬಲಿಯಾಗುತ್ತಿದೆಯಾ ಈ ಯೋಜನೆ….? ಭದ್ರಾ ಮೇಲ್ದಂಡೆ ಯೋಜನೆ, ತುಂಗಭದ್ರಾ ಕುಡಿಯುವ ನೀರಿನ ಯೋಜನೆ ಅವೈಜ್ಞಾನಿಕ ವಾಗಿ ಸಾಗುತ್ತಿದೆ ಪಾವಗಡ: –  ತುಂಗಭದ್ರಾ ಕುಡಿಯುವ ನೀರಿನ ಕಾಮಗಾರಿಯು ಮತ್ತು ಭದ್ರಾ ಮೇಲ್ದಂಡೆ ಯೋಜನೆ   ಅವೈಜ್ಞಾನಿಕ ವಾಗಿದೆ ಎಂದು  ಪಾವಗಡ ಮಾಜಿ ಶಾಸಕ ತಿಮ್ಮರಾಯಪ್ಪ ಆರೋಪಿಸಿದ್ದಾರೆ ಚಿತ್ರದುರ್ಗ ಮಾರ್ಗದಿಂದ ಕುಮುಟ – ಕೊಡಮಡಗು ವರೆಗೂ ಸಾಗುತ್ತಿರುವ ಕುಡಿಯುವ ನೀರಿನ ಕಾಮಗಾರಿಯ ಸರ್ಕಾರದ ನಿಯಮಾವಳಿಗಳನ್ನು ಮೀರಿ ಸಾಗುತ್ತಿದೆ ಹಾಲಿ ಶಾಸಕರು ಮತ್ತು ಸ್ಥಳೀಯ […]

Continue Reading
IMG 20210121 WA0036

ಜ 21 ದಾಸೋಹ ದಿನ : ಬಿಎಸ್ ವೈ

ಜನವರಿ 21 ದಾಸೋಹ ದಿನ: ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ ತುಮಕೂರು: ನಡೆದಾಡುವ ದೇವರು,ಅಭಿನವ ಬಸವಣ್ಣ,ತ್ರಿವಿಧ ದಾಸೋಹಿ ಎಂಬ ಖ್ಯಾತಿಯ ಸಿದ್ಧಗಂಗಾ ಮಠದ ಲಿಂಗೈಕ್ಯ ಡಾ.ಶಿವಕುಮಾರ ಶ್ರೀಗಳ ಪುಣ್ಯ ಸ್ಮರಣೆಯ ದಿನವನ್ನು ದಾಸೋಹ ದಿನವೆಂದು ಘೋಷಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಲಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಇಂದು ಘೋಷಿಸಿದ್ದಾರೆ. ಸಿದ್ಧಗಂಗಾ ಮಠದಲ್ಲಿ ಆಯೋಜನೆಗೊಂಡಿದ್ದ ಶಿವಕುಮಾರ ಸ್ವಾಮೀಜಿ ಅವರ ಎರಡನೇ ಪುಷ್ಯ ಸ್ಮರಣೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ಬಿ.ಎಸ್.ಯಡಿಯೂರಪ್ಪ, ಅನ್ನದಾಸೋಹದ ಜತೆಗೆ ಅಕ್ಷರ ಕಲಿಸಿದ ಸಿದ್ಧಗಂಗಾಶ್ರೀಗಳು ಪ್ರಾತಃಸ್ಮರಣೀಯರು. […]

Continue Reading